ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹೆಚ್ಐವಿ ಹೆಚ್ಚಾಗುತ್ತಿದ್ದು ಒಂದೇ ಜಿಲ್ಲೆಯಲ್ಲಿ ಸುಮಾರು 400 ಕ್ಕೂ ಹೆಚ್ಚಿನ ಮಕ್ಕಳಲ್ಲಿ ಹೆಚ್ಐವಿ ಸೋಂಕು ಇರುವುದು ಪತ್ತೆಯಾಗಿದೆ.
ಪಾಕಿಸ್ತಾನದ ಲರ್ಕಾನಾ ಜಿಲ್ಲೆಯ 400 ಕ್ಕೂ ಹೆಚ್ಚು ಮಕ್ಕಳಲ್ಲಿ ಹೆಚ್ಐವಿ ಪತ್ತೆಯಾಗಿದ್ದು ಪೋಷಕರಲ್ಲಿ ಭೀತಿ ಮೂಡಿಸಿದೆ. ಮಕ್ಕಳು ಜ್ವರಕ್ಕೆ ತುತ್ತಾದ ಕಾರಣ ಅವರನ್ನು ರಕ್ತ ಪರೀಕ್ಷೆಗೆ ಒಳಪಡಿಸಿದ್ದಾಗ ಈ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ.
Advertisement
Advertisement
ಈ ಘಟನೆಗೆ ಕಾರಣ ಸ್ಥಳೀಯ ಡಾಕ್ಟರ್ ಮುಜಾಪ್ಫರ್ ಗಂಘಾರೋ ಎಂದು ಹೇಳಲಾಗಿದೆ. ಒಂದೇ ಬಾರಿ ಎಲ್ಲಾ ಮಕ್ಕಳಿಗೂ ಸೋಂಕು ಹರಡಲು ಆ ಜಿಲ್ಲೆಯ ವ್ಯಾಪ್ತಿಯಲ್ಲಿ ಬಳಸಲಾದ ಅವೈಜ್ಞಾನಿಕ ಸಿರಿಂಜ್ಗಳೇ ಕಾರಣ ಎಂದು ಪಾಕ್ನ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಅಲ್ಲಿನ ಮಕ್ಕಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮುಜಾಪ್ಫರ್ ಗಂಘಾರೋ ಅವರು ಅಜಾಗರೂಕತೆಯಿಂದ ಸುಮಾರು 400 ಕ್ಕೂ ಹೆಚ್ಚು ಮಕ್ಕಳು ಹೆಚ್ಐವಿ ಸೋಂಕಿಗೆ ತುತ್ತಾಗಿದ್ದಾರೆ.
Advertisement
ಲರ್ಕಾನಾ ಭಾಗದಲ್ಲಿ ಹೆಚ್ಐವಿ ಹೆಚ್ಚಾಗುತ್ತಿದೆ ಎಂದು ಅನುಮಾನಗೊಂಡ ಪಾಕಿಸ್ತಾನ ಹೆಚ್ಐವಿ ನಿಯಂತ್ರಣ ಸಂಸ್ಥೆ ಅಲ್ಲಿನ ಸುಮಾರು 13,800 ಜನರನ್ನು ಪರೀಕ್ಷೆ ಮಾಡಿದೆ. ಪರೀಕ್ಷೆಗೆ ಒಳಪಟ್ಟ ಅಷ್ಟೂ ಜನರಲ್ಲಿ 400 ಮಕ್ಕಳಿಗೆ ಮತ್ತು 100 ಮಂದಿ ವಯಸ್ಕರಿಗೆ ಹೆಚ್ಐವಿ ಇರುವುದು ತಿಳಿದು ಬಂದಿದೆ.
Advertisement
ಈ ಘಟನೆ ಸಂಬಂಧ ಪಟ್ಟಂತೆ ವೈದ್ಯ ಮುಜಾಪ್ಫರ್ ಗಂಘಾರೋನನ್ನು ಪಾಕ್ ಪೊಲೀಸರು ಬಂಧಿಸಿದ್ದಾರೆ. ಈತ ಈ ಕೆಲಸವನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾನೋ ಇಲ್ಲವೋ ಇನ್ನೂ ತಿಳಿದುಬಂದಿಲ್ಲ. ಪಾಕಿಸ್ತಾನದಲ್ಲಿ ಹೆಚ್ಐವಿ ಹೆಚ್ಚಾಗುತ್ತಿದ್ದು ಏಷ್ಯಾ ಖಂಡದಲ್ಲೇ ಅತೀ ಹೆಚ್ಚು ವೇಗವಾಗಿ ಹೆಚ್ಐವಿ ಹಾರಡುತ್ತಿರುವ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ.