Connect with us

Latest

ಸಂಪುಟ ವಿಸ್ತರಣೆ ಮಾಡಲು ಮೋದಿ ಬಳಸಿದ್ದಾರೆ `ಪಿ’ ಮತ್ತು `ಎನ್’ ಫಾರ್ಮುಲಾ!

Published

on

ನವದೆಹಲಿ: ರಾಜ್ಯದಲ್ಲಿ ಸಂಪುಟ ಸರ್ಜರಿಯಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ಮಾಡಲು ತಯಾರಿ ನಡೆಯುತ್ತಿದೆ.

ಇದಕ್ಕಾಗಿ `ಪಿ’ ಹಾಗೂ `ಎನ್’ ಎಂಬ ಸಿಂಪಲ್ ಫಾರ್ಮುಲಾವನ್ನು ಬಳಸಿದ್ದಾರೆ ಇದರಲ್ಲಿ ಯಾರ್ಯಾರು ಇನ್ ಆಗ್ತಾರೆ? ಯಾರ್ಯಾರು ಔಟ್ ಆಗ್ತಾರೆ ಎಂಬುವುದನ್ನು ಸುಲಭವಾಗಿ ಕಂಡುಹಿಡಿಯಲಾಗುತ್ತದೆ.

ಇದಕ್ಕಾಗಿ ಈಗಾಗಲೇ ವಿಶೇಷ ಎಕ್ಸೆಲ್ ಶೀಟ್ ಒಂದನ್ನು ಕ್ರಿಯೇಟ್ ಮಾಡಲಾಗಿದೆ ಎಂಬುವುದಾಗಿ ಕೇಂದ್ರ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ. ಈ ಶೀಟ್ ಕಾಲಮ್ ನಲ್ಲಿ ಪಿ(ಪಾಸಿಟಿವ್) ಮತ್ತು ಎನ್(ನೆಗೆಟಿವ್) ಎಂದು ಬರೆಯಲಾಗಿದೆ. ಪ್ರತೀ ಸಚಿವರ ಹೆಸರಿನ ಎದುರು ಪಿ ಅಥವಾ ಎನ್ ಎಂಬುವುದಾಗಿ ನಮೂದಿಸಲಾಗುತ್ತದೆ. ಈ ಶೀಟ್ ನನ್ನು ಈಗಾಗಲೇ ಮೋದಿ ಮತ್ತು ಅಮಿತ್ ಶಾ ರೆಡಿಮಾಡಿದ್ದು, ಯಾರು ಸಂಪುಟದಲ್ಲಿ ಉಳಿಯುತ್ತಾರೆ ಹಾಗೂ ಯಾರು ಔಟ್ ಆಗುತ್ತಾರೆ ಎಂಬುವುದನ್ನು ಘೋಷಿಸಲಷ್ಟೇ ಬಾಕಿಯಿದೆ. ಈ ಶೀಟ್ ರೆಡಿ ಮಾಡಲೆಂದು ಅಮಿತ್ ಶಾ ಕಳೆದ ಕೆಲ ವಾರಗಳ ಹಿಂದೆಯೇ ಉನ್ನತ ಮಟ್ಟದ ಸಭೆ ನಡೆಸಿದ್ದರು.

ಒಟ್ಟಿನಲ್ಲಿ ಹೊಸಬರಿಗೆ ಮಣೆ ಹಾಕೋದರ ಜೊತೆಗೆ ಹಳೇ ಸಚಿವರ ಖಾತೆಗೂ ಮೋದಿ ಕೊಕ್ಕೆ ಹಾಕ್ತಾರೆ ಅಂತ ಹೇಳಲಾಗ್ತಿದೆ. ಜೊತೆಗೆ ಕರ್ನಾಟಕದ ನಾಲ್ವರು ಸಂಸದರಿಗೆ ಸಚಿವ ಸ್ಥಾನ ಸಿಗುತ್ತೆ ಅಂತಾ ಹೇಳಲಾಗ್ತಿದೆ. ಹಾಗಿದ್ರೆ ಯಾರ್ಯಾರ ಖಾತೆಗೆ ಕೊಕ್ಕೆ ಬೀಳುತ್ತೆ? ಯಾರ್ಯಾರು ಇನ್ ಆಗ್ತಾರೆ? ಯಾರ್ಯಾರು ಔಟ್ ಆಗ್ತಾರೆ? ಅಂತ ನೋಡೋದಾದ್ರೆ..

ಯಾರ್ಯಾರು ಔಟ್..!?
ಜಲಸಂಪನ್ಮೂಲ ಸಚಿವೆ ಉಮಾಭಾರತಿ, ಕೌಶಲ್ಯ ಅಭಿವೃದ್ಧಿ ಸಚಿವ ರಾಜಿವ್ ಪ್ರತಾಪ್ ರೂಡಿ, ಆರೋಗ್ಯ ಖಾತೆಯ ರಾಜ್ಯ ಸಚಿವ ಫಗಲ್‍ಸಿಂಗ್ ಕುಲಾಸ್ತೆ, ರಾಜ್ಯ ಖಾತೆಯ ಕೃಷಿ ಸಚಿವ ಸಂಜು ಬಾಲ್ಯಾನ್, ಮಾನವ ಸಂಪನ್ಮೂಲ ಸಚಿವಾಲಯದ ರಾಜ್ಯ ಖಾತೆ ಸಚಿವ ಎಂಎನ್. ಪಾಂಡೆ ಔಟಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಯಾರ ಖಾತೆ ಬದಲಾವಣೆ..?
ನಿತಿನ್ ಗಡ್ಕರಿ ಅವರಿಗೆ ರಸ್ತೆ ಸಾರಿಗೆ ಜೊತೆಗೆ ರೈಲ್ವೆ ಖಾತೆ, ಸುರೇಶ್ ಪ್ರಭು ಅವರಿಗೆ ಪರಿಸರ ಖಾತೆ, ಸ್ಮೃತಿ ಇರಾನಿ ಅವರ ಜವಳಿ ಖಾತೆಗೆ ಕೊಕ್ಕೆ, ಅರುಣ್ ಜೇಟ್ಲಿ ಅವರ ಹೆಚ್ಚುವರಿ ರಕ್ಷಣಾ ಖಾತೆಗೆ ಕೊಕ್ಕೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.

ರಾಜ್ಯದಿಂದ ಯಾರು ಇನ್..?
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಾಗಲಕೋಟೆ ಸಂಸದ ಶಿವಕುಮಾರ್ ಉದಾಸಿ, ಬಳ್ಳಾರಿ ಸಂಸದ ಶ್ರೀರಾಮುಲು, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಎಐಡಿಎಂಕೆ ಮತ್ತ ಜೆಡಿ(ಯು) ಕೂಡ ಸಂಪುಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುವುದಾಗಿ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಭಾನುವಾರ ಪ್ರಧಾನಿ ಮೋದಿ ಬ್ರಿಕ್ಸ್ ಸಮಿತಿಯಲ್ಲಿ ಪಾಲ್ಗೊಳ್ಳುವದಕ್ಕಿಂತಲೂ ಮೊದಲು ಅಂದ್ರೆ ಶನಿವಾರ ಸಂಪುಟ ವಿಸ್ತರಣೆ ಮಾಡುಲಾಗುವುದು ಎಂಬುವುದಾಗಿ ತಿಳಿದುಬಂದಿದೆ.

Click to comment

Leave a Reply

Your email address will not be published. Required fields are marked *

www.publictv.in