ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲಿ (Parappana Agrahara Jail) ಮೊಬೈಲ್‌ಗಳು (Mobile) ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ 2ನೇ ಎಫ್‌ಐಆರ್ (FIR) ದಾಖಲಾಗಿದೆ.
ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ, ಮೂರು ಮೊಬೈಲ್, 2 ಪೆನ್‌ಡ್ರೈವ್ ಸಿಕ್ಕಿದ್ದವು. ಬಳಿಕ ಜೈಲಾಧಿಕಾರಿಗಳು ನಡೆಸಿದ ದಾಳಿ ವೇಳೆ 2 ಮೊಬೈಲ್ ಹಾಗೂ 1 ಪೆನ್‌ಡ್ರೈವ್ ಪತ್ತೆಯಾಗಿತ್ತು. ಅಲ್ಲದೇ ಸಿಮ್ ಇಲ್ಲದ ಕಲ್ಲಿನಿಂದ ಜಚ್ಚಿ ಒಡೆದು ಹಾಕಿರುವ ಎರಡು ಫೋನ್, ಒಂದು ಪೆನ್‌ಡ್ರೈವ್ ಪತ್ತೆಯಾಗಿತ್ತು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಕಾರಾಗೃಹ ವ್ಯವಸ್ಥೆಯ ಲೋಪದಲ್ಲಿ ಯಾರೇ ಇದ್ದರೂ ಅವರ ಮೇಲೆ ಕ್ರಮ: ಪ್ರಿಯಾಂಕ್ ಖರ್ಗೆ
ಆಗಸ್ಟ್ 11ರ ರಾತ್ರಿ 11:30 ರಿಂದ ತಡರಾತ್ರಿ 2 ಗಂಟೆ ವರೆಗೂ ಜೈಲಾಧಿಕಾರಿಗಳು ದಾಳಿ ನಡೆಸಿದರು. ಭದ್ರತಾ ವಿಭಾಗ-01, 02 ಮತ್ತು 03ರಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ತಪಾಸಣೆ ನಡೆಸಿದ್ದರು. ಭದ್ರತಾ ವಿಭಾಗ-02ರ ಹಿಂಭಾಗ ಭಾಗ-01ರ ಕೆಳಭಾಗದ ಖಾಲಿ ಜಾಗದಲ್ಲಿ 1 ಮೊಬೈಲ್, ಪೆನ್‌ಡ್ರೈವ್ ಪತ್ತೆಯಾಗಿದ್ದವು.
ಕಲ್ಲಿನ ಕೆಳಗೆ ಸಿಮ್ ಇಲ್ಲದ ಮೊಬೈಲ್, 32 ಜಿಬಿ ಪೆನ್ ಡ್ರೈವ್ ಸಿಕ್ಕಿತ್ತು. ಭದ್ರತಾ ವಿಭಾಗ 02 ರ ಹಿಂಭಾಗದ ಖಾಲಿ ಜಾಗದಲ್ಲಿ ಕಲ್ಲಿನ ಕೆಳಗೆ ಒಂದು ಮೊಬೈಲ್ ಪತ್ತೆಯಾಗಿತ್ತು. ನಿಷೇಧಿತ ವಸ್ತು ಜೈಲಿನ ಒಳಗೆ ತಂದವರು, ಬಳಸಿದವರ ಪತ್ತೆ ಮಾಡಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಾರಾಗೃಹದ ಪ್ರಭಾರ ಅಧೀಕ್ಷಕ ಬಿ.ಆರ್ ಅಂದಾನಿ ನೀಡಿದ ದೂರಿನ ಅನ್ವಯ ಎಫ್.ಐ.ಆರ್ ದಾಖಲಾಗಿದೆ.
ಪ್ರಜ್ವಲ್ ರೇವಣ್ಣ (Prajwal Revanna) ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಪ್ರಕರಣ, ಜೈಲು ಅಧಿಕಾರಿಗಳ ನಿರ್ಲಕ್ಷ್ಯ ಇರೋದು ಸಾಬೀತಾಗಿದೆ. ಇದರಿಂದ ತನಿಖೆಗಾಗಿ ಡಿಐಜಿ ಜಿನೇಂದ್ರ ಖಣಗಾವಿ ನೇತೃತ್ವದ ತಂಡ ರಚನೆ ಮಾಡಲಾಗಿದೆ.
ಈ ಬಗ್ಗೆ ಜೈಲಿನ ಅಧಿಕಾರಿಯ ಮೇಲೆ ಅನುಮಾನ ವ್ಯಕ್ತವಾಗಿದೆ. ತನ್ನ ಬಳಿಯಲ್ಲಿಯೇ ಮೊಬೈಲ್ ಇರಿಸಿಕೊಂಡಿದ್ದ ಅಧಿಕಾರಿ, ಫೋನ್ ಬಂದಾಗ ಪ್ರಜ್ವಲ್‌ಗೆ ನೀಡುತ್ತಿದ್ದರ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಆ.14 ರಂದು ವಿಚಾರ ಬಹಿರಂಗಗೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ವಿಐಪಿ ಸೆಲ್‌ನಿಂದ ಪ್ರಜ್ವಲ್ ಎತ್ತಂಗಡಿ; ಜೈಲಲ್ಲಿ ಸಿಕ್ಕ ಮೊಬೈಲ್‌ನಲ್ಲೂ ಅಶ್ಲೀಲ ವಿಡಿಯೋಗಳು ಪತ್ತೆ

