ಹಾಸನ: ಹಾಸನದಲ್ಲಿ ಎಂಎಲ್‍ಸಿ ಚುನಾವಣೆ ಗರಿಗೆದರಿದೆ. ಈ ನಡುವೆ ಸಂಸತ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿ ನಾವು ತಪ್ಪು ಮಾಡಿದ್ದೇವೆ ಎಂದು ಜೆಡಿಎಸ್ ವಿರುದ್ಧ ಎಂಎಲ್‍ಸಿ ಗೋಪಾಲಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಮ್ಮ ಕಾಂಗ್ರೆಸ್ ಪಕ್ಷದ ಎಂಎಲ್‍ಸಿ ಅಭ್ಯರ್ಥಿಯಾಗಿ ಎಂ.ಶಂಕರ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಸಂಸತ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿ ನಾವು ತಪ್ಪು ಮಾಡಿದ್ದೇವು. ಹೈಕಮಾಂಡ್ ಆದೇಶದಿಂದ ಹೀಗೆ ಮಾಡಬೇಕಾಯಿತು. ಚುನಾವಣೆ ಗೆದ್ದ ನಂತರ ಸೌಜನ್ಯಕ್ಕೂ ನಮ್ಮನ್ನು ಮಾತನಾಡಿಸಿ ಒಂದು ಕಪ್ ಕಾಫಿ ಕುಡಿಸಲಿಲ್ಲ. ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದವರ ಮನೆ ಮನೆಗೆ ಬಂದು ಕಾಲಿಗೆ ಬಿದ್ದರು. ಗೆದ್ದ ನಂತರ ಸೌಜನ್ಯಕ್ಕೂ ಕೃತಜ್ಞತೆ ಸಲ್ಲಿಸಲಿಲ್ಲ. ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ನಾವು ಅವರಿಗೆ ಪಾಠ ಕಲಿಸುತ್ತೇವೆ ಎಂದು ಗೋಪಾಲಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರೀ ಮಳೆಯಿಂದಾಗಿ ಇಂದು ಅಯ್ಯಪ್ಪನ ದರ್ಶನವಿಲ್ಲ
Advertisement
Advertisement
ಈಗಾಗಲೇ ಹಾಸನ ಕ್ಷೇತ್ರದಿಂದ ಜೆಡಿಎಸ್ ಎಂಎಲ್‍ಸಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಹೆಚ್.ಡಿ. ರೇವಣ್ಣ ಅವರ ಮಗ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸಿರುವುದರಿಂದ ಹಾಸನ ಕ್ಷೇತ್ರದ ಎಂಎಲ್‍ಸಿ ಚುನಾವಣೆ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಕೊಡಗಿನಾದ್ಯಂತ ಕಳೆಗಟ್ಟಿದ ಪುತ್ತರಿ ಸಂಭ್ರಮ