– ಸಲುಗೆ ಬೆಳೆಸಿ ಮಾಲೀಕನಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ಪೀಕಿದ್ದ ಲೇಡಿ
– ಪ್ರಮೋಶನ್‌ಗಾಗಿ ಯುವತಿಯನ್ನು ಭೇಟಿ ಮಾಡಿದ್ದ ಕ್ಲಿನಿಕ್ ಮಾಲೀಕ
ಬೆಂಗಳೂರು: ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು ಕ್ಲಿನಿಕ್ ಮಾಲೀಕನೋರ್ವನಿಗೆ ಬ್ಲ್ಯಾಕ್‌ಮೇಲ್ ಮಾಡಿ ಯುವತಿಯೇ 1.5 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವ ಘಟನೆ ಬೆಂಗಳೂರಿನ (Bengaluru) ಜಯನಗರದಲ್ಲಿ (Jayanagar) ಬೆಳಕಿಗೆ ಬಂದಿದೆ.
ಮೇಕಪ್ ಕ್ಲಿನಿಕ್ ಮಾಲೀಕ ಕಾರ್ತಿಕ್ ಪುತಾ ಎಂಬುವವರು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ದೂರು ದಾಖಲಿಸಿದ್ದು, ಇದೀಗ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಚಿನ್ನ ಖರೀದಿಗೆ ಹೋಗಿದ್ದವನಿಂದ ಕೋಟಿ ಕೋಟಿ ಹಣ ಪಡೆದು ವಂಚನೆ – ಖತರ್ನಾಕ್ ಲೇಡಿ ಮಾಡಿದ್ದೇನು?
ಕ್ಲಿನಿಕ್ ಪ್ರಮೋಶನ್ ಸಲುವಾಗಿ ಕಾರ್ತಿಕ್ ಅವರು ಸಾಧನಾ ಶೆಟ್ಟಿಯನ್ನು ಭೇಟಿ ಮಾಡಿದ್ದರು. ಭೇಟಿ ನಂತರ ಇಬ್ಬರ ನಡುವೆ ಸಲುಗೆ ಬೆಳೆದು ಪರಸ್ಪರ ಹತ್ತಿರವಾಗಿದ್ದರು. ಈ ವೇಳೆ ಇಬ್ಬರ ಖಾಸಗಿ ಫೋಟೋ, ವಿಡಿಯೋಗಳನ್ನು ಸಾಧನಾ ಶೆಟ್ಟಿ ಇಟ್ಟುಕೊಂಡಿದ್ದರು. ನಂತರ 1.5 ಕೋಟಿ ರೂ. ಕೊಡದಿದ್ದರೆ ಕುಟುಂಬಕ್ಕೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.
ಆರಂಭದಲ್ಲಿ ಭಯಗೊಂಡಿದ್ದ ಕಾರ್ತಿಕ್ ಆನ್‌ಲೈನ್ ಮೂಲಕ 5 ಲಕ್ಷ ರೂ., ನಗದು ರೂಪದಲ್ಲಿ 5 ಲಕ್ಷ ರೂ. ಹಣ ನೀಡಿದ್ರು. ಬಳಿಕ ರೂ. ಆಪಲ್ ಫೋನ್‌ನ್ನು ಪಡೆದಿದ್ದರು. ಇಷ್ಟೆಲ್ಲಾ ಆದರೂ ಮತ್ತೆ 1.5 ಕೋಟಿ ರೂ. ಕೊಡುವಂತೆ ಸಾಧನಾ ಶೆಟ್ಟಿ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದಾಗ ಫೋಟೋ, ವಿಡಿಯೋಗಳನ್ನು ಕಾರ್ತಿಕ್ ಹೆಂಡತಿಗೆ ವಾಟ್ಸಾಪ್ ಮಾಡಿದ್ದರು. ಇದರಿಂದ ಮನೆಯಲ್ಲಿ ಜಗಳ ಶುರುವಾಗಿತ್ತು. ಹೀಗಾಗಿ ಕೊನೆಗೆ ಕಾರ್ತಿಕ್ ಜಯನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಸಂಬಂಧ ದೂರು ದಾಖಲಿಸಿದ್ದಾರೆ.
ದೂರಿನನ್ವಯ ಪೊಲೀಸರು ವಿಚಾರಣೆಗೆ ಬರುವಂತೆ ಸಾಧನಾ ಶೆಟ್ಟಿಗೆ ನೋಟಿಸ್ ನೀಡಿದ್ದರು. ವಿಚಾರಣೆ ವೇಳೆ ನನ್ನ ಬಳಿ ಯಾವುದೇ ವಿಡಿಯೋ ಇಲ್ಲ ಎಂದಿದ್ದಾರೆ. ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಇದನ್ನೂ ಓದಿ: Tamil Nadu Elections | 234 ಕ್ಷೇತ್ರಗಳಲ್ಲಿ ಮತದಾನ ಶುರು – 4.59 ಲಕ್ಷ ಫಸ್ಟ್ ಟೈಂ ವೋಟರ್ಸ್ ಹಕ್ಕು ಚಲಾವಣೆ



