ಬೆಂಗಳೂರು: ಬಾಕಿ ಹಣ ಪಾವತಿಸುವಂತೆ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಸಭೆ ಕರೆದಿದ್ದರು. ಆದ್ರೆ ಬೃಹತ್ ಕೈಗಾರಿಕೆ ಸಚಿವ ಕೆ.ಜೆ ಜಾರ್ಜ್ ಅವರು ಸಭೆಯಿಂದ ಅರ್ಧದಲ್ಲೇ ನಿರ್ಗಮಿಸಿರುವುದು ಇದೀಗ ರೈತರ ಕೋಪ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.
ರೈತರ ಸಮಸ್ಯೆಗಿಂತ ಜಾರ್ಜ್ ಸಾಹೇಬ್ರಿಗೆ ಬ್ಯುಸಿನೆಸ್ಸೇ ಹೆಚ್ಚಾಯ್ತು. ಕಬ್ಬು ಬೆಳೆಗಾರರ ಬವಣೆಗಿಂತ ಟೆಕ್ ಸಮ್ಮಿಟ್‍ನ ಊಟವೇ ಹೆಚ್ಚಾಯ್ತು ಅಂತ ಸಚಿವರ ಬೇಜವಾಬ್ದಾರಿತನದ ವಿರುದ್ಧ ರೈತರು ಕಿಡಿಕಾರಿದ್ದಾರೆ.
Advertisement
Advertisement
ಟೆಕ್ಕಿಗಳ ಜೊತೆ ಊಟಕ್ಕೆ ಬಂದಾಗ ಪಬ್ಲಿಕ್ ಟಿವಿ ಕ್ಯಾಮೆರಾ ಕಂಡು ಜಾರ್ಜ್ ಸಿಡಿಮಿಡಿಗೊಂಡಿದ್ದಾರೆ. ಅಲ್ಲದೇ ಏನ್ ಸಾರ್.. ಎಂದು ಪ್ರಶ್ನೆ ಕೇಳೋ ಮುನ್ನವೇ ಜಾರ್ಜ್ ಸಾಹೇಬ್ರು ಫುಲ್ ಗರಂ ಆಗಿದ್ರು. ರೈತರ ಸಭೆಯಲ್ಲಿ ಸಿಎಂ ಇಲ್ವೇನ್ರಿ.. ನಂದು ಪೂರ್ವನಿಗದಿತ ಕಾರ್ಯಕ್ರಮವಾಗಿದೆ. ಊಟಕ್ಕೆ ಅಂತಾ ಬಂದೆ ಎಂದು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಈ ವಿಚಾರ ಪ್ರಸಾರವಾಗುತ್ತಿದ್ದಂತೆಯೇ ಜಾರ್ಜ್ ಮತ್ತೆ ರೈತರ ಸಭೆಗೆ ದೌಡಾಯಿಸಿದ್ರು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews