ನವದೆಹಲಿ: ಐಪಿಎಲ್ 2026 ರಲ್ಲಿ ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸುವ ಸನಿಹದಲ್ಲಿದ್ದಾರೆ. ಟೂರ್ನಿಯ ಇತಿಹಾಸದಲ್ಲಿ 9000 ರನ್ ಗಳಿಸಿದ ಮೊದಲ ಆಟಗಾರನಾಗಲು ಕೊಹ್ಲಿಗೆ ಕೇವಲ 11 ರನ್‌ಗಳು ಬೇಕಾಗಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿಗ್ಗಜ ಆಟಗಾರ 2008 ರಿಂದ ಸ್ಥಿರತೆಯ ಮುಖವಾಗಿದ್ದಾರೆ. 2026 ರ ಐಪಿಎಲ್‌ನಲ್ಲೂ ತಂಡದಲ್ಲಿ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಈ ಸೀಸನ್‌ನಲ್ಲಿ ಕೊಹ್ಲಿ ಈಗಾಗಲೇ ಕೇವಲ ಏಳು ಇನ್ನಿಂಗ್ಸ್‌ಗಳಲ್ಲಿ 328 ರನ್‌ಗಳನ್ನು ಗಳಿಸಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಭದ್ರತಾ ಲೋಪ ಕೇಸ್‌ಗೆ ಟ್ವಿಸ್ಟ್ – ಸಂಬಳ ನೀಡದ್ದಕ್ಕೆ ಆರ್‌ಸಿಬಿ ಮ್ಯಾಚ್ ದಿನವೇ ಸೇಡು ತೀರಿಸಿಕೊಂಡ ಸಿಬ್ಬಂದಿ!
ಕೊಹ್ಲಿ ಇದುವರೆಗೂ 274 ಪಂದ್ಯಗಳನ್ನು ಆಡಿದ್ದು, 8,989 ರನ್‌ಗಳನ್ನು ಗಳಿಸಿದ್ದಾರೆ. 9,000 ರನ್‌ಗಳ ದಾಖಲೆಯನ್ನು ಬರೆಯಲು ಆರ್‌ಸಿಬಿ ಆಟಗಾರನಿಗೆ ಇನ್ನು ಕೇವಲ 11 ರನ್‌ಗಳ ಅಗತ್ಯವಿದೆ.
ಅತಿ ಹೆಚ್ಚು ರನ್ ಗಳಿಸಿದವರು
ವಿರಾಟ್ ಕೊಹ್ಲಿ – 8989 ರನ್ (274 ಪಂದ್ಯಗಳು)
ರೋಹಿತ್ ಶರ್ಮಾ – 7183 ರನ್ (276 ಪಂದ್ಯ)
ಶಿಖರ್ ಧವನ್ – 6769 ರನ್ (222 ಪಂದ್ಯ)
ಡೇವಿಡ್ ವಾರ್ನರ್ – 6565 ರನ್ (184 ಪಂದ್ಯ)
ಕೆಎಲ್ ರಾಹುಲ್ – 5579 ರನ್ (152 ಪಂದ್ಯ)

