ಗಾಂಧಿನಗರ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು (Wife) ಹತ್ಯೆ ಮಾಡಿ ಮರದ ಬಾಕ್ಸ್‌ಗೆ ಶವ ತುಂಬಿ ಸಿಮೆಂಟ್‌ನಲ್ಲಿ ಸೀಲ್ ಮಾಡಿದ ಪ್ರಕರಣ ಗುಜರಾತ್‌ನ (Gujarat) ಸೂರತ್‌ನಲ್ಲಿ (Surat) ನಡೆದಿದೆ. ಹತ್ಯೆಯ ಬಳಿಕ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಆರೋಪಿ ಪೊಲೀಸರಿಗೆ ದೂರು ನೀಡಿದ್ದ ಎಂದು ತಿಳಿದು ಬಂದಿದೆ.
ಹತ್ಯೆಯಾದ ಮಹಿಳೆಯನ್ನು ಶಿಲ್ಪಾ ಸಾಲ್ವಿ (39) ಎಂದು ಗುರುತಿಸಲಾಗಿದೆ. ಆಕೆಯ ಪತಿ (Husband) ವಿಶಾಲ್ ಸಾಲ್ವಿ (40) ಹತ್ಯೆ ಆರೋಪಿಯಾಗಿದ್ದಾನೆ. ವೃತ್ತಿಯಲ್ಲಿ ಶಿಲ್ಪಾ ಆಹಾರ ತಜ್ಞೆಯಾಗಿದ್ದರು. ಆಕೆ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದಾಳೆ ಎಂದು ಪತಿ ಪೊಲೀಸರಿಗೆ ಆತ ದೂರು ನೀಡಿದ್ದ. ಪೊಲೀಸರು ತನಿಖೆಗೆ ಇಳಿದಾಗ ಹಂತಕನ ಬಣ್ಣ ಬಯಲಾಗಿದೆ. ಇದನ್ನೂ ಓದಿ: ಮದುವೆಯಾದ್ರೂ ಬಯಕೆಗೆ ಮಾತ್ರ ಬಳಸಿಕೊಳ್ತೀನಿ ಅಂತಿದ್ದ – ಅವಮಾನ ಸಹಿಸಲಾಗದೇ ಬೆಂಕಿಯಿಟ್ಟೆ: ಪ್ರೇಯಸಿ ತಪ್ಪೊಪ್ಪಿಗೆ
ಮನೆಯಲ್ಲಿ ವಶಪಡಿಸಿಕೊಂಡ ಕೈಬರಹದ ನೋಟ್‌ನಿಂದ ಪ್ರಕರಣಕ್ಕೆ ಟಿಸ್ಟ್ ಸಿಕ್ಕಿದೆ. ವಿಶಾಲ್ ನೋಟ್‌ನಲ್ಲಿ ʻನಾನು ಗಂಭಿರವಾದ ತಪ್ಪು ಮಾಡಿದ್ದೇನೆ. ಶಿಲ್ಪ ಈಗ ಜೀವಂತವಾಗಿಲ್ಲʼ ಎಂದು ಬರೆದಿದ್ದ. ಇದನ್ನು ಆತನ ಅಪ್ರಾಪ್ತ ಮಗ ಪೊಲೀಸರಿಗೆ ನೀಡಿದ್ದ. ಇದಾದ ಬಳಿಕ ಪೊಲೀಸರು ಕಾಣೆಯಾದ ಪ್ರಕರಣ ಬಿಟ್ಟು, ಕೊಲೆ ಶಂಕೆಯ ಮೇಲೆ ತನಿಖೆ ಆರಂಭಿಸಿದ್ದರು.
ಸುಳಿವುಗಳ ಮೇಲೆ ಪೊಲೀಸರು, ಸಲಬತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗೆ ಸಂಬಂಧಿಸಿದ ಹಳೆಯ, ಪಾಳುಬಿದ್ದ ಮನೆಯನ್ನು ಪತ್ತೆಹಚ್ಚಿದ್ದರು. ಮನೆಯ ಬೀಗ ಒಡೆದು ನೋಡಿದಾಗ ಕೋಣೆಯ ಮೂಲೆಯಲ್ಲಿ ಇರಿಸಲಾಗಿದ್ದ ಮರದ ಪೆಟ್ಟಿಗೆಯಿಂದ ದುರ್ವಾಸನೆ ಬರುತ್ತಿತ್ತು. ಪರಿಶೀಲನೆ ನಡೆಸಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪ್ರಾಥಮಿಕ ತನಿಖೆ ಹಾಗೂ ಪರಿಚಯಸ್ಥರ ಹೇಳಿಕೆಗಳ ಆಧಾರದ ಮೇಲೆ ದಂಪತಿ ದೀರ್ಘಕಾಲದ ಭಿನ್ನಾಭಿಪ್ರಾಯ ಹೊಂದಿದ್ದರು ಎಂಬುದು ಗೊತ್ತಾಗಿದೆ. ಅಲ್ಲದೇ ಆರೋಪಿ ಆಕೆ ಬೇರೆಯವರ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ತೀವ್ರ ಶೋಧ ನಡೆಯುತ್ತಿದೆ. ಇದನ್ನೂ ಓದಿ: ʻನಿನ್ನ ಹೂತು ಹಾಕ್ಬಿಡ್ತೀನಿʼ – ಸಚಿವರ ಸಹೋದರನಿಂದ ಮಹಿಳಾ ಅಧಿಕಾರಿಗೆ ಬೆದರಿಕೆ

