– ಮೀಟರ್ ಬೋರ್ಡ್ಗಳಿಲ್ಲದ ವಾಹನಗಳು ಸೀಜ್
– ರಾಜ್ಯದಲ್ಲಿ ಹಾಫ್ ಹೆಲ್ಮೆಟ್ ಬ್ಯಾನ್, ತಯಾರಿಕಾ ಘಟಕಗಳೂ ಬಂದ್
ಬೆಂಗಳೂರು: ಓಲಾ (Ola), ಊಬರ್ (Uber) ಕ್ಯಾಬ್ಗಳಲ್ಲಿ ಮೀಟರ್ ಅಳವಡಿಕೆ ಕಡ್ಡಾಯ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಓಲಾ, ಊಬರ್ ಕ್ಯಾಬ್ಗಳಿಗೆ ಮೀಟರ್ ಬೋರ್ಡ್ ಕಡ್ಡಾಯಗೊಳಿಸಲಾಗಿದೆ. ಮೀಟರ್ ಬೋರ್ಡ್ ಹಾಕದ ವಾಹನಗಳನ್ನು ಸೀಜ್ ಮಾಡೋಕೆ ರೂಲ್ಸ್ ಮಾಡುತ್ತಿದ್ದೇವೆ. ಮೀಟರ್ ಕಡ್ಡಾಯ ಮಾಡಿದ್ದೇವೆ. ಆಟೋ ಮೀಟರ್ ಬೋರ್ಡ್ ಮಾದರಿಯಲ್ಲಿ ಕ್ಯಾಬ್ ಓಡಿಸಬೇಕು. ಸಾರಿಗೆ ಇಲಾಖೆಯ ರೂಲ್ಸ್ ಪಾಲನೆ ಮಾಡಲೇಬೇಕು. ಆ್ಯಪ್ ಮೂಲಕ ದುಡ್ಡು ಸಂಗ್ರಹ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್ಗೆ ಎಥೆನಾಲ್ ಮಿಶ್ರಣದ ಬಗ್ಗೆ ಕೇಂದ್ರಕ್ಕೆ ನಾಳೆ ವರದಿ ಸಲ್ಲಿಸುತ್ತೇನೆ: ರಿಜ್ವಾನ್ ಅರ್ಷದ್
ನಾನು ಹಾಫ್ ಹೆಲ್ಮೆಟ್ ವಿರೋಧಿ. ಅಪಘಾತಗಳಾಗಿ ಆಸ್ಪತ್ರೆ ಸೇರುವ ಹೆಚ್ಚಿನ ಜನರಿಗೆ ತಲೆಗೆ ಪೆಟ್ಟಾಗಿರುತ್ತದೆ. ಹೀಗಾಗಿ, ಹಾಫ್ ಹೆಲ್ಮೆಟ್ ಬ್ಯಾನ್ ಮಾಡಲಾಗುವುದು. ಹೊಸ ವರ್ಷದಿಂದಲೇ ನಿಯಮ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಫುಟ್ಪಾತ್ನಲ್ಲಿ ದ್ವಿಚಕ್ರ ವಾಹನ ಓಡಿಸಿದರೆ ದಂಡ ಮಾತ್ರವಲ್ಲ ಗಾಡಿಯೂ ಸೀಜ್ ಆಗಲಿದೆ. ಈಗಾಗಲೇ ಈ ವಿಚಾರದಲ್ಲಿ ಕಾಯ್ದೆ ಜಾರಿಗೆ ಕಾನೂನು ಅಂಶಗಳ ಪರಿಶೀಲನೆ ಬಹುತೇಕ ಅಂತ್ಯವಾಗಿದೆ. ಹಾಫ್ ಹೆಲ್ಮೆಟ್ ತಯಾರಿಕಾ ಕೇಂದ್ರಗಳನ್ನೂ ಬಂದ್ ಮಾಡಲಾಗುವುದು. ಹೊಸ ವರ್ಷಕ್ಕೆ ಕಾಯ್ದೆ ರೂಪದಲ್ಲಿ ಹೊಸ ನಿಯಮ ಜಾರಿಗೆ ಬರಲಿದೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ವ್ಹೀಲಿಂಗ್ ಪುಂಡರ ಹಾವಳಿ; ಫ್ಲೈಓವರ್ ಮೇಲೆ ನಂಬರ್ ಪ್ಲೇಟ್ ಇಲ್ಲದ ಗಾಡಿಗಳಿಂದ ವ್ಹೀಲಿಂಗ್
ಫುಟ್ಪಾತ್ ವಾಹನ ಸಂಚಾರದ ದಂಡವನ್ನು 1 ಸಾವಿರದಿಂದ 5 ಸಾವಿರ ರೂ.ಗೆ ಹೆಚ್ಚಿಸಲಾಗುವುದು. ಫುಟ್ಫಾತ್ನಲ್ಲಿ ವಾಹನ ಓಡಿಸಿದರೆ ಮೊದಲ ಬಾರಿಗೆ ಐದು ಸಾವಿರ, ಆಮೇಲೆ ಹತ್ತು ಸಾವಿರ ರೂ. ದಂಡ ಹಾಕಲಾಗುವುದು. ಮೂರನೇ ಬಾರಿಗೆ ಫುಟ್ಪಾತ್ನಲ್ಲಿ ಗಾಡಿ ಓಡಿಸಿ ತಗ್ಲಾಕೊಂಡ್ರೆ ಗಾಡಿ ಸೀಜ್ ಆಗಲಿದೆ.
