– ಚಿಕ್ಕಬಿದರಕಲ್ಲು ಫ್ಲೈಓವರ್ ಮೇಲೆ ಮಧ್ಯರಾತ್ರಿ ವ್ಹೀಲಿಂಗ್
ಬೆಂಗಳೂರು: ನಗರದಲ್ಲಿ ಮತ್ತೆ ವ್ಹೀಲಿಂಗ್ ಪುಂಡರ ಹಾವಳಿ ಶುರುವಾಗಿದೆ. ಚಿಕ್ಕಬಿದರಕಲ್ಲು ಫ್ಲೈಓವರ್ ಮೇಲೆ ನಂಬರ್ ಪ್ಲೇಟ್ ಇಲ್ಲದ ಗಾಡಿಗಳಿಂದ ಪುಂಡರು ವ್ಹೀಲಿಂಗ್ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜಾರೋಷವಾಗಿ ರಾತ್ರಿ ಇಡೀ ವ್ಹೀಲಿಂಗ್ ಮಾಡಿದ್ದಾರೆ. ವೀಕೆಂಡ್ಗಳಲ್ಲಿ ಪೊಲೀಸರ ಭಯ ಇಲ್ಲದೇ ಪುಂಡರ ಗುಂಪು ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆದಿದೆ. ಹೈವೇಯಲ್ಲಿ 20ಕ್ಕೂ ಹೆಚ್ಚು ಬೈಕ್, ಸ್ಕೂಟರ್ ಮತ್ತು ಒಂದು ಕಾರನ್ನ ನಿಲ್ಲಿಸಿಕೊಂಡು, ರಾತ್ರಿ 12ರಿಂದ 3 ಗಂಟೆವರೆಗೆ ವ್ಹೀಲಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಮಂಡ್ಯದ ರೈತರಿಗೆ ಸಂಕಷ್ಟ; ಅರ್ಧದಷ್ಟು ಕಬ್ಬು ಇದ್ದರೂ ಮೈಶುಗರ್ ಬಂದ್
21 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಗುಂಪು ಹುಚ್ಚಾಟ ಮೆರೆದಿದೆ. ಪಾರ್ಲೆಜಿ ಟೋಲ್ ಅದ್ಮೇಲೆ ಇರುವ ಚಿಕ್ಕಬಿದರಕಲ್ಲು ಪ್ಲೈಓವರ್ ಮೇಲೆ ನಂಬರ್ ಪ್ಲೇಟ್ ಇಲ್ಲದ ಗಾಡಿಗಳಿಂದ ವ್ಹೀಲಿಂಗ್ ಮಾಡಿದ್ದಾರೆ. ಸೈನೆಲ್ಸರ್ ಕಟ್ ಮಾಡಿಸಿರುವ ಸ್ಕೂಟರ್ ಮತ್ತು ಬೈಕ್ಗಳನ್ನು ಪುಂಡರು ಬಳಸಿಕೊಂಡಿದ್ದಾರೆ. ನೂರಾರು ವಾಹನಗಳು ಸಂಚಾರ ಮಾಡುವ ರಸ್ತೆಯಲ್ಲೇ ಪುಂಡಾಟ ಮೆರೆದಿದ್ದಾರೆ.
ಒನ್ ವೇನಲ್ಲಿ ಎರಡು ದಿಕ್ಕಿನಿಂದಲೂ ವ್ಹೀಲಿಂಗ್ ಮಾಡಿಮಾಡಿದ್ದಾರೆ. ‘ಪಬ್ಲಿಕ್ ಟಿವಿ’ಯ ಕ್ಯಾಮೆರಾದಲ್ಲಿ ವ್ಹೀಲಿಂಗ್ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಇದನ್ನೂ ಓದಿ: ಕಾನ್ಸ್ಟೆಬಲ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ ಆರೋಪಿ ಎನ್ಕೌಂಟರ್ನಲ್ಲಿ ಸಾವು
