ರೋಮ್: ರೋಮ್‌ಗೆ (Rome) ಭೇಟಿ ಕೊಟ್ಟ ಭಾರತದ ಪ್ರಧಾನಿಗೆ ಇಟಲಿ ಪ್ರಧಾನಿ ಆತ್ಮೀಯ ಸ್ವಾಗತ ಕೋರಿದ್ದಾರೆ. ತನ್ನ ಸ್ನೇಹಿತ ಪ್ರಧಾನಿ ಮೋದಿ ಜೊತೆಗಿನ ಸೆಲ್ಫಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೆಲೋನಿ (Giorgia Meloni) ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ರೋಮ್‌ಗೆ ಬಂದಿಳಿದರು. ‘ರೋಮ್‌ಗೆ ಸ್ವಾಗತ, ನನ್ನ ಸ್ನೇಹಿತ’ ಎಂದು ಮೋದಿಗೆ ಆತ್ಮೀಯ ಸ್ವಾಗತ ಕೋರಿ ಇಟಲಿ ಪ್ರಧಾನಿ ಎಕ್ಸ್ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹರಿಯಾಣದಲ್ಲಿ ಕ್ಯಾನ್ಸರ್ ತಡೆ ಲಸಿಕೆ ಪಡೆಯಲು ಹಿಂದೇಟು – ಯಾಕೆ ಗೊತ್ತಾ?
ಇಟಲಿಯ ರೋಮ್‌ನ ಐತಿಹಾಸಿಕ ಕೇಂದ್ರದಲ್ಲಿರುವ ಕೊಲೊಸಿಯಮ್ ಎಂಬ ಪ್ರಾಚೀನ ಆಂಫಿಥಿಯೇಟರ್‌ನಲ್ಲಿ ಮೋದಿ ಜೊತೆಗಿನ ಫೋಟೊವನ್ನು ಮೆಲೋನಿ ಹಂಚಿಕೊಂಡಿದ್ದಾರೆ. ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಪ್ರಾಚೀನ ಆಂಫಿಥಿಯೇಟರ್ ಆಗಿದೆ. ಫ್ಲೇವಿಯನ್ ರಾಜವಂಶಸ್ಥರಿಂದ 80 AD ಯಲ್ಲಿ ಪೂರ್ಣಗೊಂಡ ಈ ಸಾಂಪ್ರದಾಯಿಕ ಕಲ್ಲು ಮತ್ತು ಕಾಂಕ್ರೀಟ್ ಅಂಡಾಕಾರದ ರಚನೆಯು ಗ್ಲಾಡಿಯೇಟೋರಿಯಲ್ ಸ್ಪರ್ಧೆಗಳು ಮತ್ತು ಸಾರ್ವಜನಿಕ ಪ್ರದರ್ಶನಗಳನ್ನು ವೀಕ್ಷಿಸಲು ಒಟ್ಟುಗೂಡಿದ 80,000 ಪ್ರೇಕ್ಷಕರಿಗೆ ಸ್ಥಳಾವಕಾಶ ಕಲ್ಪಿಸಿತ್ತು.
ವೈರಲ್ ಆಗಿರುವ ಈ ಫೋಟೋಗೆ 10 ಲಕ್ಷಕ್ಕಿಂತಲೂ ಹೆಚ್ಚು ವೀವ್ಸ್, ಸುಮಾರು 60,000 ಲೈಕ್‌ಗಳು ಮತ್ತು 2,000 ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. ಪ್ರಧಾನಿ ಮೋದಿ ಅವರು ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಇಟಲಿಗೂ ಮೊದಲು ನಾರ್ವೆ, ಯುಎಇ, ನೆದರ್ಲ್ಯಾಂಡ್ಸ್ ಮತ್ತು ಸ್ವೀಡನ್‌ಗೆ ಭೇಟಿ ನೀಡಿದ್ದರು. ಇದನ್ನೂ ಓದಿ: ಮತ್ತೆ ಮೋದಿ, ಪುಟಿನ್ ಭೇಟಿ – ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಆಗಮನ
ಇಟಲಿಯಲ್ಲಿ, ಪ್ರಧಾನಿ ಮೋದಿ ಅವರು ಬುಧವಾರ ಭಾರತಕ್ಕೆ ತೆರಳುವ ಮೊದಲು ಅಧ್ಯಕ್ಷ ಸೆರ್ಗಿಯೊ ಮ್ಯಾಟರೆಲ್ಲಾ ಅವರನ್ನು ಭೇಟಿ ಮಾಡಲಿದ್ದಾರೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇತರೆ ರಾಜತಾಂತ್ರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಅವರು 2024 ಜೂನ್‌ನಲ್ಲಿ ಇಟಲಿಯಲ್ಲಿ ನಡೆದಿದ್ದ ಜಿ 7 ಶೃಂಗಸಭೆಯಲ್ಲಿ ಕೊನೆ ಬಾರಿ ಪಾಲ್ಗೊಂಡಿದ್ದರು.

