ದೀರ್ಘಕಾಲದಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ದಕ್ಷಿಣದ ಹೆಸರಾಂತ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ನಿನ್ನೆಯಷ್ಟೇ ನಿಧನರಾಗಿದ್ದಾರೆ. ಹಲವು ತಿಂಗಳಿನಿಂದ ಶ್ವಾಸಕೋಶ ಸಂಬಂಧಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ವಿದ್ಯಾಸಾಗರ್ ನಿಧನದ ನಂತರ ಆ ಸಾವಿನ ಕುರಿತು ಹಲವು ರೀತಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಅವರ ಸಾವಿಗೆ ಪಾರಿವಾಳ ಕೂಡ ಕಾರಣ ಎನ್ನಲಾಗುತ್ತಿದೆ.
Advertisement
ವಿದ್ಯಾ ಸಾಗರ್ ಅವರಿಗೆ ಕೋವಿಡ್ ಆಗಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೂಡ ಪಡೆದಿದ್ದರಂತೆ. ಹುಷಾರಾದ ನಂತರ ಮತ್ತೆ ಅವರಿಗೆ ಜ್ವರ ಮತ್ತಿತರ ಸಮಸ್ಯೆಗಳು ಕಾಣಿಸಿಕೊಂಡಿವೆ. ಆನಂತರ ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಅದಕ್ಕೂ ಚಿಕಿತ್ಸೆ ಪಡೆಯುತ್ತಿದ್ದರಂತೆ. ಅಂಗಾಂಗ ದಾನಿಗಳು ಸಿಕ್ಕರೆ, ಈ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತಂತೆ. ಅದಕ್ಕಾಗಿ ಅವರು ಕಾಯುತ್ತಿದ್ದರಂತೆ. ಅಷ್ಟರಲ್ಲಿ ಅವರಿಗೆ ತೀವ್ರ ಶ್ವಾಸಕೋಶದ ತೊಂದರೆ ಆಯಿತಂತೆ. ಅದಕ್ಕೆ ಕಾರಣ ಪಾರಿವಾಳದ ಹಿಕ್ಕೆ ಎನ್ನಲಾಗುತ್ತಿದೆ. ಅವರ ಮನೆ ಸುತ್ತಮುತ್ತಲೂ ಪಾರಿವಾಳಗಳು ಜಾಸ್ತಿ. ಆಹಿಕ್ಕೆ ಯ ವಾಸನೆಯು ಅವರ ಅಲರ್ಜಿಗೆ ಕಾರಣವಾಗಿತ್ತಂತೆ. ಈ ರೀತಿಯ ಸುದ್ದಿಗಳು ಹರಡುತ್ತಿವೆ. ಇದನ್ನೂ ಓದಿ:ಸಾವರ್ಕರ್ ಅವಹೇಳನ : ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಹತ್ಯೆ ಮಾಡುವುದಾಗಿ ಪತ್ರ
Advertisement
Advertisement
ಪಾರಿವಾಳದ ಹಿಕ್ಕೆ ಯಿಂದ ಬರುತ್ತಿದ್ದ ದುರ್ವಾಸನೆಯನ್ನು ಅವರಿಂದ ತಡೆದುಕೊಳ್ಳಲು ಆಗುತ್ತಿರಲಿಲ್ಲವಂತೆ. ಅದನ್ನು ತುಂಬಾ ಸಲ ಹೇಳಿದ್ದೂ ಉಂಟಂತೆ. ಈ ಹಿಕ್ಕೆಯಿಂದಾಗಿಯೇ ಅವರಿಗೆ ಅಲರ್ಜಿ ಜಾಸ್ತಿ ಆಯಿತಂತೆ. ವಿದ್ಯಾಸಾಗರ್ ಅವರ ಸಾವಿಗೂ ಇದೂ ಒಂದು ಕಾರಣ ಇರಬಹುದು ಎಂದು ವರದಿ ಆಗುತ್ತಿದೆ.