ನವದೆಹಲಿ: ಬಹುಶಃ ಮುಂದಿನ 3-4 ದಿನಗಳಲ್ಲಿ ಸಿಬಿಐ-ಇಡಿ ಅಧಿಕಾರಿಗಳು ನನ್ನನ್ನು ಬಂಧಿಸುವ ಸಾಧ್ಯತೆಗಳಿದೆ. ಆದರೆ ನಾವು ಯಾವುದಕ್ಕೂ ಹೆದರುವುದಿಲ್ಲ, ನಮ್ಮನ್ನು ಒಡೆಯಲು ಸಾಧ್ಯವಿಲ್ಲ ಎಂದು ದೆಹಲಿಯ ಡಿಸಿಎಂ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
#WATCH | "Maybe within the next 3-4 days, CBI-ED will arrest me… we won't be scared, you won't be able to break us… the elections of 2024 will be AAP vs BJP," says Delhi's Deputy CM & AAP leader Manish Sisodia pic.twitter.com/msk9wHNmtC
— ANI (@ANI) August 20, 2022
Advertisement
ತಮ್ಮ ಮೇಲೆ ನಡೆದ ಸಿಬಿಐ ದಾಳಿಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ನನ್ನ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ಬಂದಿದ್ದರು. ಶಿಕ್ಷಣ ಇಲಾಖೆಯ ಕಚೇರಿ ಮೇಲೂ ದಾಳಿ ನಡೆಸಿದ್ದಾರೆ. ಎಲ್ಲಾ ಅಧಿಕಾರಿಗಳು, ಎರಡೂ ಸ್ಥಳಗಳಲ್ಲಿ ಅಧಿಕಾರಿಗಳು ತುಂಬಾ ಚೆನ್ನಾಗಿ ವರ್ತಿಸಿದರು. ಅವರು ಹೈಕಮಾಂಡ್‍ನ ಆದೇಶಗಳನ್ನು ಪಾಲಿಸಬೇಕಾಗಿತ್ತು, ಆದರೆ ತುಂಬಾ ಚೆನ್ನಾಗಿ ವರ್ತಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.
Advertisement
Their issue is not liquor/excise scam. Their problem is Arvind Kejriwal… whole proceedings against me, raids at my residence & office, are to stop Arvind Kejriwal… I haven't done any corruption. I'm just Arvind Kejriwal's Education Minister: Delhi Dy CM & AAP leader M Sisodia pic.twitter.com/cAzwZXXlU5
— ANI (@ANI) August 20, 2022
Advertisement
ಅಬಕಾರಿ ನೀತಿಯ ಕಾರಣದಿಂದಾಗಿ ಇಡೀ ವಿವಾದವನ್ನು ಸೃಷ್ಟಿಸಿಲಾಗಿದೆ. ಆದರೆ ಇದು ದೇಶದ ಅತ್ಯುತ್ತಮ ನೀತಿಯಾಗಿದೆ. ನಾವು ಅದನ್ನು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಅನ್ವಯಿಸುತ್ತಿದ್ದೇವೆ. ನೀತಿಯನ್ನು ವಿಫಲಗೊಳಿಸಲು ಸಂಚು ರೂಪಿಸಿ ದೆಹಲಿ ಎಲ್‍ಜಿ ತನ್ನ ನಿರ್ಧಾರವನ್ನು ಬದಲಾಯಿಸದಿದ್ದರೆ, ದೆಹಲಿ ಸರ್ಕಾರವು ಪ್ರತಿ ವರ್ಷ ಕನಿಷ್ಠ 10,000 ಕೋಟಿ ರೂಪಾಯಿಗಳನ್ನು ಪಡೆಯುತ್ತಿತ್ತು ಎಂದು ಎಲ್‍ಜಿ ವಿರುದ್ಧ ಸಿಸೋಡಿಯಾ ವಾಗ್ದಾಳಿ ನಡೆಸಿದರು.
Advertisement
ಅವರ ಸಮಸ್ಯೆ ಮದ್ಯ ಅಥವಾ ಅಬಕಾರಿ ಹಗರಣವಲ್ಲ ಅವರ ಸಮಸ್ಯೆ ಅರವಿಂದ್ ಕೇಜ್ರಿವಾಲ್, ನನ್ನ ವಿರುದ್ಧದ ಸಂಪೂರ್ಣ ಪ್ರಕ್ರಿಯೆಗಳು, ನನ್ನ ನಿವಾಸ ಮತ್ತು ಕಚೇರಿ ಮೇಲೆ ದಾಳಿಗಳು, ಅರವಿಂದ್ ಕೇಜ್ರಿವಾಲ್ ಅವರನ್ನು ತಡೆಯಲು ಮಾಡಿದ ಸಂಚು. ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ನಾನು ಕೇವಲ ಅರವಿಂದ್ ಕೇಜ್ರಿವಾಲ್ ಅವರ ಶಿಕ್ಷಣ ಸಚಿವ ಅಷ್ಟೇ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಅಪ್ಪಚ್ಚು ರಂಜನ್ ಆಪ್ತ!
Excise policy due to which whole controversy is created is the country's best policy. We were applying it with transparency & sincerity. Had Delhi LG not changed his decision conspiring to fail the policy, Delhi govt would've been getting at least Rs 10,000cr every year:M Sisodia pic.twitter.com/VUonGo2sJz
— ANI (@ANI) August 20, 2022
ಅಮೆರಿಕದ ಅತಿದೊಡ್ಡ ಪತ್ರಿಕೆ ದಿ ನ್ಯೂಯಾರ್ಕ್ ಟೈಮ್ಸ್ ತನ್ನ ಮೊದಲ ಪುಟದಲ್ಲಿ ದೆಹಲಿಯ ಶಿಕ್ಷಣ ಮಾದರಿಯನ್ನು ಪ್ರಕಟಿಸಿದೆ. ಇದು ಭಾರತಕ್ಕೆ ಒಂದು ಹೆಮ್ಮೆ, ಸುಮಾರು 1.5 ವರ್ಷಗಳ ಹಿಂದೆ, ಗಂಗಾ ನದಿಯ ಉದ್ದಕ್ಕೂ ಸಾವಿರಾರು ದೇಹಗಳನ್ನು ಸುಡುತ್ತಿರುವುದನ್ನು ತೋರಿಸುವ ಮತ್ತೊಂದು ಕಥೆಯನ್ನು ಅವರು ಪ್ರಕಟಿಸಿದರು, ಇದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಸರ್ಕಾರ ವಿರುದ್ಧ ಗುಡುಗಿದರು.
CBI officers came to my residence y'day. They also raided Education Ministry's Dy CM office. All officers, in both places, were great people. They behaved very nicely. They had to obey orders from high command, but I'd like to thank them to have behaved so nicely: Manish Sisodia pic.twitter.com/BABzk9N3pa
— ANI (@ANI) August 20, 2022
ಮುಂಬರುವ 2024ರ ಲೋಕಸಭೆ ಚುನಾವಣೆ ಬಿಜೆಪಿ V/S ಆಪ್ ನಡುವೆ ಇರಲಿದೆ. ಬಿಜೆಪಿ ಆಪ್ ಕಾರ್ಯಗಳಿಂದ ಹೆದರಿದ್ದಾರೆ. ಹೀಗಾಗಿ ನಮ್ಮನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿದೆ. ಇದಕ್ಕೆ ನಾವು ಹೆದರುವುದಿಲ್ಲ, ಬಗ್ಗುವುದಿಲ್ಲ ಎಂದು ತಿರುಗೇಟು ನೀಡಿದರು.