ಕಷ್ಟಪಟ್ಟು ದುಡಿದು ಸರ್ಕಾರಿ ಹುದ್ದೆ ಗಿಟ್ಟಿಸಿಕೊಟ್ಟ ಪತಿಯನ್ನೇ ಜೈಲಿಗೆ ಕಳುಹಿಸಿದ್ಳು!

Public TV
2 Min Read
ALOK JYOTI

ಲಕ್ನೋ: ಅತಿಯಾದರೆ ಅಮೃತವೂ ವಿಷ ಅಂತಾರಲ್ವಾ ಹಂಗಾಯ್ತು ಇಲ್ಲೊಂದು ಕಥೆ. ತನ್ನ ಪತ್ನಿಯನ್ನು ಬೆಟ್ಟದಷ್ಟು ಪ್ರೀತಿಸುತ್ತಿದ್ದ ಪತಿ ಆಕೆಯ ಕನಸುಗಳನ್ನು ನನಸು ಮಾಡುವಲ್ಲಿ ಯಶಸ್ವಿಯೂ ಆದ. ಆದರೆ ಆಮೇಲೆ ಆಗಿದ್ದೆಲ್ಲಾ ದುರಂತವೇ ಸರಿ.

ಹೌದು. ತಾನು ಓದದಿದ್ದರೂ ತನ್ನ ಪತ್ನಿಯನ್ನು ಕಷ್ಟಪಟ್ಟು ದುಡಿದು ಓದಿಸಿದ. ಪರಿಣಾಮ ಆಕೆಗೆ ಒಳ್ಳೆಯ ಕೆಲಸವೂ ದಕ್ಕಿತ್ತು. ಆದರೆ ಉಂಡ ಮನೆಗೆ ದ್ರೋಹ ಬಗೆದಂತೆ ಕೆಲಸ ಸಿಕ್ಕಿದ ಬಳಿಕ ಆಕೆಯೇ ಬದಲಾದಳು. ತನ್ನನ್ನು ಕಷ್ಟಪಟ್ಟು ಓದಿಸಿದ ಗಂಡನನ್ನೇ ಜೈಲಿಗೆ ಕಳುಹಿಸಿದಳು.

ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನ ಅಲೋಕ್ ಮೌರ್ಯ (Alok Mourya) ಎಂಬಾತ ತಾನು ದುಡಿದ ಹಣವನ್ನೆಲ್ಲಾ ಪತ್ನಿ ಜ್ಯೋತಿ (Jyoti) ಯ ವಿದ್ಯಾಭ್ಯಾಸಕ್ಕೆ ಸುರಿದ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಬಂದ ಹಣವನ್ನು ಪತ್ನಿಯ ವಿದ್ಯಾಭ್ಯಾಸಕ್ಕೆ ಅಲೋಕ್ ಬಳಸಿದ್ದಾರೆ. ಅಲ್ಲದೆ ಸಾಲ ಪಡೆದು ಪ್ರಯಾಗ್‍ರಾಜ್‍ನಲ್ಲಿರುವ ಉತ್ತಮ ಕೋಚಿಂಗ್ ಸೆಂಟರ್ ಗೆ ಸೇರಿಸಿದ್ದಾರೆ. ಅಂತೆಯೇ ಜ್ಯೋತಿ ಚೆನ್ನಾಗಿ ಓದಿ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ (Sub-Divisional Magistrate) ಹುದ್ದೆಯನ್ನು ಅಲಂಕರಿಸಿದಳು.

ಕೆಲಸ ಸಿಕ್ಕ ನಂತರ ಆಕೆಯ ವರ್ತನೆಯೇ ಬದಲಾಯಿತು. ಈ ವೇಳೆ ತನ್ನ ಜೊತೆ ಕೆಲಸ ಮಾಡುತ್ತಿದ್ದ ಅಧಿಕಾರಿಯೊಬ್ಬನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಇದನ್ನು ತಿಳಿದ ಅಲೋಕ್ ಪತ್ನಿಯನ್ನು ನಿಂದಿಸಿದ್ದಾನೆ. ಇದನ್ನೇ ನೆಪ ಮಾಡಿಕೊಂಡ ಜ್ಯೋತಿ ತನ್ನ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಳು. ಇತ್ತೀಚೆಗೆ ಅಲೋಕ್ ಜಾಮೀನಿನ ಮೇಲೆ ಹೊರಬಂದಿದ್ದರು. ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಂದು ಭೀಕರ ಅಪಘಾತ – ಮದುವೆ ಮುಗಿಸಿ ಮನೆಗೆ ತೆರಳುತ್ತಿದ್ದ 12 ಮಂದಿ ಮಸಣಕ್ಕೆ

ಅಲೋಕ್ ಜೈಲಿಗೆ ಹೋದಾಗ ಇದ್ದ ತನ್ನ ಕೆಲಸವನ್ನು ಕೂಡ ಕಳೆದುಕೊಂಡರು. ಇದಲ್ಲದೆ ಜ್ಯೋತಿಯು ತನಗೆ ವಿಚ್ಛೇದನ ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡಲು ಶುರುಮಾಡಿದಳು. ಈ ಸಂಬಂಧ ಜ್ಯೋತಿ ವಿರುದ್ಧ ದೂರು ನೀಡಿದರೂ ಯಾರೂ ಕ್ಯಾರೇ ಎನ್ನುತ್ತಿಲ್ಲ ಎಂದು ಅಲೋಕ್ ಮಾಧ್ಯಮಗಳ ಮುಂದೆ ತನ್ನ ಅಳಲು ತೋಡಿಕೊಂಡು ಕಣ್ಣೀರು ಹಾಕಿದ್ದಾರೆ.

Share This Article