ಭುವನೇಶ್ವರ: ಇತ್ತೀಚೆಗಷ್ಟೇ ಭೀಕರ ರೈಲು ದುರಂತ (Odisha Train Accident) ಸಂಭವಿಸಿದ್ದ ಒಡಿಶಾದಲ್ಲಿ (Odisha) ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು 12 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ.
Bhubaneswar | Odisha CM Naveen Patnaik has expressed deep grief over the death of the people in the bus accident in Ganjam District and has announced ex-gratia of Rs. 3 lakh to all the deceased: CMO https://t.co/ndkGUZnYNZ
— ANI (@ANI) June 26, 2023
Advertisement
ಎರಡು ಬಸ್ಸುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮದುವೆ (Marriage) ಮುಗಿಸಿ ಮನೆಗೆ ತೆರಳುತ್ತಿದ್ದ 12 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆಯ ಮೇಲಲ್ಲ, ಕೋರ್ಟ್‍ನಲ್ಲಿ ಹೋರಾಟ ಮುಂದುವರೆಯಲಿದೆ – ಸಿಂಗ್‍ಗೆ ಕುಸ್ತಿಪಟುಗಳ ಎಚ್ಚರಿಕೆ
Advertisement
ಒಡಿಶಾದಿಂದ ಸುಮಾರು 35 ಕಿಮೀ ದೂರದಲ್ಲಿರುವ ಬರ್ಹಾಂಪುರ-ತಪ್ತಪಾಣಿ ರಸ್ತೆಯ ದಿಗಪಹಂಡಿ ಪ್ರದೇಶದ ಬಳಿ ಭಾನುವಾರ ತಡರಾತ್ರಿ ಅಪಘಾತ ಸಂಭವಿಸಿದೆ ಎಂದು ಬರ್ಹಾಂಪುರ ಪೊಲೀಸ್ ವರಿಷ್ಠಾಧಿಕಾರಿ ಎಂ. ಶರವಣ ವಿವೇಕ್ ತಿಳಿಸಿದ್ದಾರೆ.
Advertisement
Advertisement
ಬರ್ಹಾಂಪುರದಲ್ಲಿ ವಿವಾಹಮಹೋತ್ಸವ ಮುಗಿಸಿಕೊಂಡು ಪ್ರಯಾಣಿಕರು ದಿಗಪಹಂಡಿ ಬಳಿಕ ಖಂಡದೇಲಿಗೆ ಹಿಂದಿರುಗುತ್ತಿದ್ದರು, ಈ ವೇಳೆ ಅಪಘಾತ ಸಂಭವಿಸಿದೆ. ಇದರಲ್ಲಿ ಒಂದೇ ಕುಟುಂಬದ 7 ಮಂದಿ ಸೇರಿ 12 ಮಂದಿ ಮೃತಪಟ್ಟಿದ್ದಾರೆ. 7 ಮಂದಿ ಗಾಯಗೊಂಡಿದ್ದು, ಅವರನ್ನ ಎಂಕೆಸಿಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಡ್ರಗ್ಸ್ ಗಾಗಿ ಪೆಡ್ಲರ್ ಜೊತೆ ಅನೈತಿಕ ಸಂಬಂಧ: ಹೆಂಡತಿ ವಿರುದ್ಧವೇ ಸ್ಯಾಂಡಲ್ ವುಡ್ ನಟ ದೂರು
ಅಪಘಾತದಲ್ಲಿ ಗಾಯಗೊಂಡ ಪ್ರತಿಯೊಬ್ಬರ ಚಿಕಿತ್ಸೆಗೆ ಒಡಿಶಾ ಸರ್ಕಾರ (Odisha Government) ತಲಾ 30 ಸಾವಿರ ರೂ. ಪರಿಹಾರ ಮಂಜೂರು ಮಾಡಿದೆ. ಸದ್ಯ ಅಪಘಾತದಲ್ಲಿ ಮೃತಪಟ್ಟವರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮರೆಯದ ರೈಲು ದುರಂತ:
ಇತ್ತೀಚೆಗಷ್ಟೇ ಒಡಿಶಾದ ಬಾಲಾಸೋರ್ ಬಳಿ ಪ್ರಯಾಣಿಕರಿದ್ದ ಎರಡು ರೈಲು ಹಾಗೂ ಸರಕು ತುಂಬಿದ್ದ ಒಂದು ರೈಲು ಅಪಘಾತಕ್ಕೀಡಾಗಿದ್ದವು. ಈ ಭೀಕರ ದುರಂತದಲ್ಲಿ ಸುಮಾರು 275 ಮಂದಿ ದುರ್ಮರಣಕ್ಕೀಡಾಗಿದ್ದರು. 1,100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಬೆಚ್ಚಿಬೀಳಿಸುವಂತಹ ದುರಂತಕ್ಕೆ ವಿಶ್ವಾದ್ಯಂತ ವಿಷಾದ ವ್ಯಕ್ತವಾಗಿತ್ತು. ಅಪಘಾತವು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ನಂತರ ಈ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಲಾಗಿತ್ತು.