ಕೆಲಸವಿಲ್ಲದೇ ಊಟಕ್ಕೂ ಗತಿಯಿಲ್ಲವೆಂದು 11 ತಿಂಗಳ ಮಗುವನ್ನು ಕಾಲುವೆಗೆ ಎಸೆದ

Public TV
1 Min Read
father baby son daughter

ಜೈಪುರ: ನಿರುದ್ಯೋಗಿ ತಂದೆಯೊಬ್ಬ ತನ್ನ 11 ತಿಂಗಳ ಮಗುವನ್ನು ಕಾಲುವೆಗೆ ಎಸೆದು ಹತ್ಯೆಗೈದ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಗುಜರಾತ್‍ನ ಬನಸ್ಕಾಂತದ ನಲೋಧರ್ ನಿವಾಸಿಯಾದ ಮುಖೇಶ್(24) ಬಂಧಿತ ಆರೋಪಿ. ಈತ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ. ಮೊದಲೆಲ್ಲಾ ಖುಷಿಯಿಂದಲೇ ಇದ್ದ ಈತ ಕಳೆದ 7 ತಿಂಗಳ ಹಿಂದೆ ಕೆಲಸವನ್ನು ಕಳೆದುಕೊಂಡಿದ್ದಾನೆ.

baby

ನಿರೋದ್ಯೋಗಿಯಾಗಿದ್ದರಿಂದ ತೀವ್ರ ಖಿನ್ನತೆಯಲ್ಲಿದ್ದ ಮುಕೇಶ್ ಕುಟುಂಬಸ್ಥರನ್ನು ಸಿದ್ಧೇಶ್ವರ ಗ್ರಾಮದ ರಾಮದೇವರ ಯಾತ್ರೆಗೆ ಕರೆದುಕೊಂಡು ಬಂದಿದ್ದ. ಈ ವೇಳೆ ತಾನು ತನ್ನ ಮಗನೊಂದಿಗೆ ಕಾಲ ಕಳೆಯುತ್ತೇನೆ ಎಂದು ಹೇಳಿ ಕುಟುಂಬಸ್ಥರನ್ನು ಬೇರೆಡೆಗೆ ಕಳುಹಿಸಿದ್ದಾನೆ. ಈ ವೇಳೆ ಮಗುವನ್ನು ಕಾಲುವೆಗೆ ಎಸೆದು ಕೊಂದಿದ್ದಾನೆ.

ಪೊಲೀಸ್ ಸ್ವಯಂಸೇವಕ ಕನಾರಾಮ್ ಘಟನೆಯನ್ನು ನೋಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮುಖೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸೆ. 8ಕ್ಕೆ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನೋತ್ಸವ: ಸುಧಾಕರ್

POLICE JEEP

ವಿಚಾರಣೆ ವೇಳೆ ಮುಖೇಶ್, ತಾನು ಪತ್ನಿಯೊಂದಿಗೆ ಅಹಮದಾಬಾದ್‍ನಲ್ಲಿ ವಾಸವಿದ್ದು, ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಆದರೆ, 7 ತಿಂಗಳ ಹಿಂದೆ ಕೆಲಸ ಕಳೆದುಕೊಂಡಿದ್ದೆ. ನಿರುದ್ಯೋಗದ ಕಾರಣ ಮಗುವಿಗೆ ಆಹಾರ ನೀಡಲು ನನ್ನ ಬಳಿ ಏನೂ ಇಲ್ಲ, ಆದ್ದರಿಂದ ಮಗನನ್ನು ಕಾಲುವೆಗೆ ಎಸೆದಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ಸ್ಪೈಸ್‌ಜೆಟ್‌ ಪೈಲಟ್‌ನ ಲೈಸನ್ಸ್ 6 ತಿಂಗಳು ಅಮಾನತು – DGCA ಆದೇಶ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *