Bengaluru CityCrimeDistrictsKarnatakaLatestMain Post

ಮಗನನ್ನ ನೀರಿನ ಸಂಪ್‍ಗೆ ಎಸೆದು ತಂದೆ ಆತ್ಮಹತ್ಯೆ

ಬೆಂಗಳೂರು: ಮಗನನ್ನ ಕೊಲೆ ಮಾಡಿ ತಂದೆ ಆತ್ಮಹತ್ಯೆ ಮಾಡಿಕೊಂಡಿರೋ ಹೃದಯ ವಿದ್ರಾಕ ಘಟನೆ ಬೆಂಗಳೂರಿನ ಎಸ್ ಆರ್ ನಗರದಲ್ಲಿ ನಡೆದಿದೆ.

10 ವರ್ಷದ ಉದಯ್ ಸಾಯಿ ಎಂಬ ಮಗನನ್ನ ಮುಂಜಾನೆ ಆರು ಗಂಟೆಗೆ ಮನೆ ನೀರಿನ ಸಂಪ್ ನಲ್ಲಿ ಎಸೆದು ತಂದೆ ಸುರೇಶ್ ಶೇಷಾದ್ರಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುರೇಶ್ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ರು. ಸುರೇಶ್ ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿದ್ದರು.

ಇತ್ತ ಮಗ ಉದಯ್ ಅಬ್ ನಾರ್ಮಲ್ ಆಗಿದ್ದರಿಂದ ಮಗನನ್ನ ಸಾಯಿಸಿ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ನಿಯ ಬಳಿ ಜಗಳವಾಡುತ್ತಿದ್ದ. ನನಗೆ ಸ್ಪೈನಲ್ ಕಾರ್ಡ್ ಸಮಸ್ಯೆ ಇದೇ ನಾನು ಏನಾದ್ರು ಆದರೆ ನನ್ನ ಮಗನಿಗೆ ಯಾರು ನೋಡಿಕೊಳ್ತಾರೆ ಅನ್ನೋದನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಸುರೇಶ್ ಮಗನನ್ನ ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಸಂಬಂಧ ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ವಿಶ್ವದಲ್ಲಿ ಓಮ್ರಿಕಾನ್ ರಣಕೇಕೆ – ಬ್ರಿಟನ್‍ನಲ್ಲಿ ಓಮಿಕ್ರಾನ್‍ಗೆ ಮೊದಲ ಬಲಿ

POLICE JEEP

Leave a Reply

Your email address will not be published.

Back to top button