ಲಕ್ನೋ: ಕಳೆದ ಎರಡು ವರ್ಷಗಳಿಂದ ಹೊಟ್ಟೆಯ ಕ್ಯಾನ್ಸರ್‌ನಿಂದ (Stomach Cancer) ಬಳಲುತ್ತಿದ್ದ ವ್ಯಕ್ತಿಯೋರ್ವ ದೀನ್ ದಯಾಳ್ ಉಪಾಧ್ಯಾಯ ಗೋರಖ್‍ಪುರ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ವ್ಯಕ್ತಿಯನ್ನು ವಿಭೂತಿ ಪ್ರಸಾದ್ ಎಂದು ಗುರುತಿಸಲಾಗಿದ್ದು, ದೀನ್ ದಯಾಳ್ ಉಪಾಧ್ಯಾಯ ಗೋರಖ್‍ಪುರ ವಿಶ್ವವಿದ್ಯಾನಿಲಯದ (Deen Dayal Upadhyay Gorakhpur University) ಬಿಎಡ್ ವಿಭಾಗದ (B.Ed Department) ಉದ್ಯೋಗಿಯಾಗಿದ್ದಾರೆ. ತರಗತಿಯಲ್ಲೇ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತಂತೆ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಈ ವೇಳೆ ಮೃತ ವ್ಯಕ್ತಿಯ ಜೇಬಿನಲ್ಲಿದ್ದ ಡೆತ್ ನೋಟ್ (Death Note) ಅನ್ನು ಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ನನ್ನ ಮಗಳನ್ನು ಕೊಂದವರನ್ನು ಜೀವಂತವಾಗಿ ಸುಡಿ – ಅಂಕಿತಾ ಭಂಡಾರಿ ತಾಯಿ ಆಕ್ರೋಶ
Advertisement
Advertisement
ಡೆತ್‍ನೋಟ್‍ನಲ್ಲಿ, ನಾನು ಏಕೆ ನೇಣು ಹಾಕಿಕೊಂಡಿದ್ದೇನೆ ಎಂದು ಜನರಿಗೆ ತಿಳಿಸುವ ಸಲುವಾಗಿ ಈ ಆತ್ಮಹತ್ಯೆ ಪತ್ರವನ್ನು ನಾನು ಬರೆಯುತ್ತಿದ್ದೇನೆ. ನನ್ನ ಹೆಂಡತಿ ಸತ್ತುಹೋಗಿದ್ದು, ನಾನು ಎರಡು ವರ್ಷಗಳಿಂದ ಹೊಟ್ಟೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ನನಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
Advertisement
Advertisement
ವಿಭೂತಿ ಪ್ರಸಾದ್ ಅವರು ಕೌಶಲ್ ಕುಮಾರ್ ಗೌರ್ ಮತ್ತು ಪ್ರಮೋದ್ ಗೌರ್ ಎಂಬ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸದ್ಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಒಬ್ಬೊಬ್ಬರ ಜಾತಕ ತೆಗೆದರೆ ತಿಹಾರ್ ಜೈಲಿಗೆ ಲಾಯಕ್ ಆಗಿರೋರೇ ಕಾಂಗ್ರೆಸ್‌ನಲ್ಲಿರೋರು: ಸಿ.ಟಿ ರವಿ