Bengaluru CityKarnatakaLatestMain Post

ಒಬ್ಬೊಬ್ಬರ ಜಾತಕ ತೆಗೆದರೆ ತಿಹಾರ್ ಜೈಲಿಗೆ ಲಾಯಕ್ ಆಗಿರೋರೇ ಕಾಂಗ್ರೆಸ್‌ನಲ್ಲಿರೋರು: ಸಿ.ಟಿ ರವಿ

ಬೆಂಗಳೂರು: ರೀಡೂ ಕೇಸ್‍ನಲ್ಲಿ ಸಾವಿರಾರು ಕೋಟಿ ನಷ್ಟ ಆಗಿದೆ ಅಂತ ಕೆಂಪಣ್ಣ ವರದಿಯಲ್ಲಿ ಹೇಳಲಾಗಿದೆ. ಇದೊಂದು ಹಗಲು ದರೋಡೆ. ಹಗಲು ದರೋಡೆಯ ಪಿತಾಮಹರು ಈಗ ಬಿಜೆಪಿ (BJP) ವಿರುದ್ಧ ಆರೋಪ ಮಾಡ್ತಿದ್ದಾರೆ. ಹಾಸಿಗೆ ದಿಂಬು ಹಗರಣ ನಡೆದಿದ್ದು ಅವರ ಕಾಲದಲ್ಲಿ. ಕಳ್ಳ ಬಿಲ್ಲು ಪ್ರಕರಣ ನಡೆದಿದ್ದು ಕಾಂಗ್ರೆಸ್ (Congress) ಕಾಲದಲ್ಲಿ. ಒಬ್ಬೊಬ್ಬರ ಜಾತಕ ತೆಗೆದರೆ ತಿಹಾರ್ ಜೈಲಿಗೆ ಲಾಯಕ್ ಆಗಿರೋರೇ ಕಾಂಗ್ರೆಸ್‌ನಲ್ಲಿರೋರು ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಯದರ್ಶಿ ಸಿ.ಟಿ ರವಿ (C.T Ravi) ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಗಲು ದರೋಡೆ ಮಾಡಿದವರು. ಅರ್ಕಾವತಿ ರೀಡೂ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಮಾಡಿದ್ದಾರೆ. ಕೈಗೆ ಹ್ಯಾಂಡ್ ಗ್ಲೌಸ್ ಹಾಕಿ ಸೈನ್ ಮಾಡಿ ಸಿದ್ದರಾಮಯ್ಯ ಅಕ್ರಮ ಮಾಡಿದ್ದಾರೆ. ಹೀಗಾಗಿ ಅವರ ಫಿಂಗರ್ ಪ್ರಿಂಟ್ ಕಾಣ್ತಾ ಇಲ್ಲ. ಆದರೆ ಅಕ್ರಮ ಮಾಡಿದ್ದು ಸುಳ್ಳಾ? ಸಿದ್ದರಾಮಯ್ಯ ಅವರು ಉಡುವಷ್ಟು ಪಂಚೆಯಷ್ಟೇ ಕ್ಲೀನ್ ಇದ್ದಾರಾ? ಬಿಜೆಪಿ ನಾಯಕರ ವಿರುದ್ಧ ಪೋಸ್ಟರ್ ಮೂಲಕ ವಾರ್ ಮಾಡುತ್ತಿರುವ ಕಾಂಗ್ರೆಸ್‍ನವರು ದಾಖಲೆ ಇದ್ರೆ ಕೊಡಲಿ. ತಮ್ಮ ಮೇಲಿನ ಆರೋಪಗಳನ್ನು ಮುಚ್ಚಿ ಹಾಕುವ ಸಲುವಾಗಿಯೇ ಲೋಕಾಯುಕ್ತ ಮುಚ್ಚಿದವರು ಅವ್ರು. ಇವರು ಭ್ರಷ್ಟಾಚಾರದ ಬಗ್ಗೆ ಮಾತಾಡೋದು, ಭ್ರಷ್ಟಾಚಾರ ವಿರುದ್ಧ ಹೋರಾಡೋದು ಎರಡೂ ಭೂತದ ಬಾಯಲ್ಲಿ ಭಗವದ್ಗೀತೆ ಓದಿಸಿದ ಹಾಗೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕಾಜಿರಂಗ ಉದ್ಯಾನವನದಲ್ಲಿ ಜೀಪ್ ಚಾಲನೆ – ಸದ್ಗುರು, ಹಿಮಂತ ಬಿಸ್ವಾ ಶರ್ಮಾ ವಿರುದ್ಧ FIR

ಲಿಂಗಾಯತ ಸಿಎಂಗೆ ಟಾರ್ಗೆಟ್ ಆರೋಪ ವಿಚಾರವಾಗಿ ಮಾತನಾಡಿ, ನಾನು ಜಾತಿ ವಿಚಾರದಲ್ಲಿ ರಾಜಕಾರಣ ಮಾಡಲ್ಲ. ಆದ್ರೆ ಕರ್ನಾಟಕ ಖಜಾನೆಯನ್ನು ಹೈಕಮಾಂಡ್ ಎಟಿಎಂ ಆಗಿ ದುರ್ಬಳಕೆ ಮಾಡಿಕೊಂಡಿದ್ದು ಯಾಕೆ? ಇದು ಸುಳ್ಳಾದ್ರೆ ಗೋವಿಂದರಾಜ್ ಡೈರಿಯಲ್ಲಿ ಬರೆದುಕೊಂಡಿದ್ದು ಸುಳ್ಳೇ? ಈ ಡೈರಿ ಸಾಕ್ಷಿ ಅಲ್ವಾ? ಯಾರ್ಯಾರಿಗೆ ಎಷ್ಟೆಷ್ಟು ಕೊಡಲಾಗಿದೆ ಅಂತ ಅದರಲ್ಲಿ ಬರೆದುಕೊಂಡಿದ್ದಾರೆ. ಬಿಜೆಪಿ ಪೇ ಸಿಎಂ (PayCM) ಅಂದ್ರೆ ಅದು ಪೇ ಫಾರ್ ಕಾಂಗ್ರೆಸ್ ಮೇಡಂ. ಕಾಂಗ್ರೆಸ್ ಸರ್ಕಾರ ಇದ್ದಾಗ ಸೋನಿಯಾ ಗಾಂಧಿಗೆ ಹಣ ಕಳುಹಿಸುತಿದ್ದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ ಅಲ್ವಾ? ನಾಲ್ಕು ತಲೆಮಾರು ಆಗುವಷ್ಟು ಹಣ ಸಂಪಾದನೆ ಮಾಡಿದ್ದೇವೆ ಎಂದು ರಮೇಶ್ ಕುಮಾರ್ ಹೇಳಿದ್ದರು ಅವರು ನಿಜ ಸ್ಥಿತಿ ಹೇಳಿದ್ದಾರೆ. ಇದನ್ನೂ ಓದಿ: ತಾಲೂಕು, ಗ್ರಾಮ ಮಟ್ಟದಲ್ಲೂ `PayCM’ ಅಭಿಯಾನ- ಕಾಂಗ್ರೆಸ್ ನಿಂದ ಮಾಸ್ಟರ್ ಪ್ಲ್ಯಾನ್

ಎಸ್‍ಡಿಪಿಐ (SDPI) ಮುಖಂಡರ ಆರೋಪಕ್ಕೆ ತಿರುಗೇಟು ನೀಡಿದ ಸಿ.ಟಿ ರವಿ, ತನಗಿರುವ ಮಾಹಿತಿ ಆಧರಿಸಿ ಎನ್‍ಐಎ (NIA) ದಾಳಿ ನಡೆಸಿದೆ. ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ತನ್ನ ಕ್ರಮ ಕೈಗೊಂಡಿದೆ. ಕರ್ನಾಟಕದಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಿದ್ರು. ಇದರ ಹಿಂದೆ ಕೇಳಿಬಂದಿರೋದೂ ಪಿಎಫ್‍ಐ (PFI) ಹೆಸರು. ಕೆಲವು ಹಿಂದೂ ಕಾರ್ಯಕರ್ತರ ಹತ್ಯೆ ಹಿಂದೆ ಇದ್ದಿದ್ದೂ ಇದೇ ಪಿಎಫ್‍ಐ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಆಯ್ತು. ಇದರ ಹಿಂದೆಯೂ ಪಿಎಫ್‍ಐ ಇದೆ. ಭಾರತವನ್ನು ಮೊಗಲಸ್ಥಾನ ಮಾಡುವ ಪಿತೂರಿ ಅವರು ಮಾಡ್ತಿದ್ದಾರೆ ಕಠಿಣ ಕ್ರಮ ತಗೋಬೇಕು, ಬೇರು ಸಮೇತ ಕಿತ್ತೊಗೆಯಬೇಕು. ಆರ್‌ಎಸ್‌ಎಸ್ (RSS) ಹುಟ್ಟಿದ್ದು ದೇಶಭಕ್ತಿ ಜಾಗೃತಿಗೊಳಿಸಲು. ಪಿಎಫ್‍ಐ ಹುಟ್ಟಿದ್ದು ದೇಶದ್ರೋಹದ ಕೆಲಸ ಮಾಡಲು. ಮುಟ್ಠಾಳರು ಮಾತ್ರ ದೇಶಭಕ್ತಿ ಮತ್ತು ದೇಶ ದ್ರೋಹಗಳನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button