ಬೆಂಗಳೂರು: ರಸ್ತೆ ಪಕ್ಕದಲ್ಲಿ ಮಲಗಿದ್ದ ನಾಯಿಯ (Dog) ಮೇಲೆ ವ್ಯಕ್ತಿಯೊಬ್ಬ ಕಾರು ಹತ್ತಿಸಿ ದರ್ಪ ಮೆರೆದಿರುವ ಘಟನೆ ಬೆಂಗಳೂರಿನ ಹೊರಮಾವು (Horamavu) ಬಳಿಯ ಬಂಜಾರ ಲೇಔಟ್ನಲ್ಲಿ (Banjara Layout) ನಡೆದಿದೆ.
ವ್ಯಕ್ತಿಯೊಬ್ಬ ಕಾರಿನಲ್ಲಿ ಅಪಾರ್ಟ್ಮೆಂಟ್ (Apartment) ಗೆ ಹೋಗುವಾಗ ಮುಂಭಾಗದ ಗೇಟ್ ಬಳಿ ನಾಯಿ ಮಲಗಿರುವುದನ್ನು ನೋಡಿದ್ದಾನೆ. ಆದರೂ ಸಹ ನಾಯಿಯ ಮೇಲೆ ಕಾರು ಹತ್ತಿಸಿಕೊಂಡು ಹೋಗಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಂಭೀರ ಗಾಯಗೊಂಡ ನಾಯಿಗಾಗಿ ಸಾರ್ವಜನಿಕರು ಮರುಗಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು- ಮೊಬೈಲ್ ಕೊಂಡೊಯ್ದು ಸೆಲ್ಫಿ ಕ್ಲಿಕ್ಕಿಸಿದ ಮೇಲ್ವಿಚಾರಕಿ
ಕಾರು ಹತ್ತಿಸಿದ ವ್ಯಕ್ತಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೃಶ್ಯಾವಳಿ ಸಮೇತ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಲಾಗಿದೆ. ರಾಮಮೂರ್ತಿ ನಗರದ (Ramamurthy Nagar) ಪೊಲೀಸರಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಇದನ್ನೂ ಓದಿ: ಸರಳತೆ ಮೆರೆದ ಪ್ರಧಾನಿ ಮೋದಿ- VHP ಮುಖಂಡರ ಕಾಲಿಗೆ ನಮಸ್ಕರಿಸಿದ ನಮೋ