ನವದೆಹಲಿ: ಇತ್ತೀಚೆಗೆ ವಿಮಾನದಲ್ಲಿ ಮೂತ್ರವಿಸರ್ಜನೆ ಮಾಡಿದ ಹಲವು ಪ್ರಕರಣಗಳು ನಡೆಯುತ್ತಿದ್ದು, ಇದೀಗ ವ್ಯಕ್ತಿಯೊಬ್ಬ ಇದೇ ರೀತಿ ದುವರ್ತನೆ ತೋರಿದ್ದಾನೆ.
ಈ ಘಟನೆ ಮುಂಬೈ-ದೆಹಲಿ ನಡುವಿನ ಏರ್ ಇಂಡಿಯಾ (Air India Flight) ವಿಮಾನದಲ್ಲಿ ಜೂನ್ 24 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಮ್‍ಸಿಂಗ್ (Ramsingh) ಎಂಬ ಪ್ರಯಾಣಿಕ ವಿಮಾನದಲ್ಲಿ ಈ ಕೃತ್ಯ ಎಸಗಿದ್ದಾನೆ. ಇದನ್ನೂ ಓದಿ: ಗಡಿ ನುಸುಳಲು ಉಗ್ರರ ಸಂಚು – ಸೇನೆಯಿಂದ ಓರ್ವನ ಎನ್‍ಕೌಂಟರ್
ಈತ ವಿಮಾನದೊಳಗೆ ಸೀಟ್ ಬಳಿಯೇ ಮೂತ್ರ (Urine) ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾನೆ. ಅಲ್ಲದೆ ಕ್ಯಾಬಿನ್ ಸಿಬ್ಬಂದಿಯ ಎಚ್ಚರಿಕೆ ನಡುವೆಯೂ ಉಗುಳಿ ಅಸಭ್ಯವಾಗಿ ವರ್ತಿಸಿದ್ದಾನೆ. ಸದ್ಯ ರಾಮ್‍ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ. ಈ ಹಿಂದೆಯೂ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರು ಮೂತ್ರ ಮಾಡಿದ್ದ ಘಟನೆಗಳು ವರದಿಯಾಗಿದ್ದವು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]