ಇಂಫಾಲ: ವ್ಯಕ್ತಿಯೊಬ್ಬನ ಕಣ್ಣಿಗೆ ಬಟ್ಟೆ ಕಟ್ಟಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಮಣಿಪುರದ (Manipur) ಇಂಫಾಲ (Imphal) ಜಿಲ್ಲೆಯಲ್ಲಿ ನಡೆದಿದೆ. ಲ್ಯಾಮ್ಲೈನ್‍ನ್ ಪೊಲೀಸ್ ಠಾಣಾ ವ್ಯಾಪ್ತಿಯ ಟೆಕ್ಚಾಮ್ ಎಂಬಲ್ಲಿ ಈ ಘಟನೆ ನಡೆದಿದೆ.
ಹತ್ಯೆಗೀಡಾದ ವ್ಯಕ್ತಿಯನ್ನು ಆರ್.ಕೆ ಪೃಥ್ವಿ ಸಿಂಗ್ ಎಂದು ಗುರುತಿಸಲಾಗಿದೆ. ಹತ್ಯೆಯ ವೇಳೆ ವ್ಯಕ್ತಿಯ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಅವನ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಲಾಗಿತ್ತು. ಬಳಿಕ ಪಾಯಿಂಟ್ ಬ್ಲಾಂಕ್ ರೇಂಜ್‍ನಿಂದ ಗುಂಡು ಹಾರಿಸಿ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಿಥಿಲಾವಸ್ಥೆಯಲ್ಲಿ ರಾಯಚೂರು ಬಿಇಒ ಕಚೇರಿ – ಜೀವಭಯದಲ್ಲೇ ಸಿಬ್ಬಂದಿ ಕೆಲಸ
ಸಿಂಗ್ ಭದ್ರತಾ ಪಡೆಗಳ (Indian Army) ಪರವಾಗಿ ಗೂಢಚಾರಿಕೆ ಮಾಡುತ್ತಿದ್ದಾನೆ ಎಂದು ನಿಷೇಧಿತ ಸಂಘಟನೆ ಕೆಸಿಪಿ ಈ ಹತ್ಯೆ ಮಾಡಿದೆ. ಕೊಲೆಯ ಹೊಣೆಗಾರಿಕೆಯನ್ನು ಸಂಘಟನೆ ವಹಿಸಿಕೊಂಡಿದೆ. ಸಿಂಗ್ ಮಾಜಿ ಬಂಡುಕೋರನಾಗಿದ್ದು, ಸೇನೆಗೆ ಶರಣಾಗಿದ್ದ. ಬಳಿಕ ಆತ ಸೇನೆಗಾಗಿ ಗೂಢಚಾರಿಕೆ ಕೆಲಸ ಮಾಡುತ್ತಿದ್ದ ಎಂದು ಕೆಸಿಪಿ ಸಂಘಟನೆ ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ಬೆನ್ನಲ್ಲೇ ಓರ್ವ ಬಂಡುಕೋರನನ್ನು ಬಂಧಿಸಲಾಗಿದೆ. ಬಂಧಿತನನ್ನು ನಿಂಗ್ತೌಜಮ್ ಆಶಾಕುಮಾರ್ ಮೀಟೆಯಿ (33) ಎಂದು ಗುರುತಿಸಲಾಗಿದೆ. ಆತ ಸುಲಿಗೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಮಸ್ಯೆ ಕೇಳಲು ಬಂದ ಸಚಿವ ಬೋಸರಾಜುಗೆ ಸಂತ್ರಸ್ತರಿಂದ ತರಾಟೆ