ಬೆಂಗಳೂರು: ಯೆಲ್ಲೋ ಲೈನ್ ಮೆಟ್ರೋ (Yellow Line Metro) ಹಳಿಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಹುಸ್ಕೂರ್ ರೋಡ್ ಮೆಟ್ರೋ ಸ್ಟೇಷನ್ (Huskur Road Metro Station) ಬಳಿ ನಡೆದಿದೆ.
ಸಂಜೆ 5:50ರ ಸುಮಾರಿಗೆ 35 ವರ್ಷದ ವ್ಯಕ್ತಿಯೋರ್ವ ರೈಲು ಬರುತ್ತಿರುವುದನ್ನು ಗಮನಿಸಿ ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವ್ಯಕ್ತಿ ರೈಲ್ವೆ ಹಳಿಗೆ ಹಾರಿದ್ದನ್ನು ಗಮನಿಸಿದ ಸ್ಟೇಷನ್ ಕಂಟ್ರೋಲರ್ ಕೂಡಲೇ ಪವರ್ ಆಫ್ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಭವನದಲ್ಲಿ ಹೈಡ್ರಾಮಾ: ಎಐಸಿಸಿ ವೀಕ್ಷಕರ ಎದುರಲ್ಲೇ ಬಡಿದಾಡಿಕೊಂಡ ಬೆಂಬಲಿಗರು

ಸದ್ಯ ಘಟನೆಯಿಂದ ಯೆಲ್ಲೋ ಲೈನ್ ಮಾರ್ಗ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆರ್.ವಿ. ರಸ್ತೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ರೈಲು ಕಾರ್ಯಾಚರಣೆ ನಡೆಸುತ್ತಿದೆ. ಸದ್ಯ ಹಳಿಯಿಂದ ವ್ಯಕ್ತಿಯ ಮೃತದೇಹ ಮೆಲಕ್ಕೆತ್ತಲು ಹರಸಾಹಸ ಪಡುತ್ತಿದ್ದಾರೆ. ಸ್ಥಳಕ್ಕೆ ಹೆಬ್ಬುಗೋಡಿ ಪೊಲೀಸರು ಭೇಟಿ ನೀಡಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಿಂದ ಸೋನಂ ವಾಂಗ್ಚುಕ್ ಡಿಸ್ಚಾರ್ಜ್ – ರಾಜ್‌ಘಾಟ್‌ಗೆ ಆಗಮಿಸಿ ಮಹಾತ್ಮಾ ಗಾಂಧಿಗೆ ನಮನ
