ತಿರುವನಂತಪುರಂ: ನಿರ್ದೇಶಕ ಅಲಿ ಅಕ್ಬರ್ ಅವರು ಮುಸ್ಲಿಂ ಧರ್ಮ ತೊರೆದು ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಹಾಗೂ ಅವರ ಪತ್ನಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಅಲಿ ಅಕ್ಬರ್ ತಾವು ಹಿಂದೂ ಧರ್ಮಕ್ಕೆ ಮತಾಂತರವಾಗುವುದಾಗಿ ಹೇಳಿಕೊಂಡಿದ್ದರು. ಅದರಂತೇ ಇದೀಗ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಹಿಂದೂ ಸೇವಾ ಕೇಂದ್ರದ ಸ್ಥಾಪಕ ಪ್ರತೀಶ್ ವಿಶ್ವನಾಥ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಲಿ ಅಕ್ಬರ್ ಅವರು ಪೂಜೆ, ಹೋಮ ಮಾಡುವ ಫೋಟೋಗಳನ್ನು ಶೇರ್ ಮಾಡಿ, ಇತಿಹಾಸ ಈಗ ತಾನಾಗಿಯೇ ಮರುಕಳಿಸುತ್ತಿದೆ. ಅಲಿ ಅಕ್ಬರರ್ ಈಗ ರಾಮಸಿಂಹನ್ ಎಂದು ಬರೆದುಕೊಂಡಿದ್ದಾರೆ. ಹಿಂದೂ ಧರ್ಮಕ್ಕೆ ಕನ್ವರ್ಟ್ ಆದ ನಂತರ ಅಲಿ ಕ್ಬರ್ ಅವರು ತಮ್ಮ ಹೆಸರನ್ನು ರಾಮಸಿಂಹನ್ ಎಂದು ಬದಲಾಯಿಸಿಕೊಂಡಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಭಾಮಾ
Famous Malayalam film director Ali Akbar and wife Lucyamma today embraced Hindu Dharma.
From now onwards he will be known as Rama Simhan.
Rama Simhan Ji, Welcome back to Sanatan civilisation ???????? pic.twitter.com/DUKVVQkAxa
— Major Surendra Poonia (@MajorPoonia) January 13, 2022
ಮಿಲಿಟಿರಿ ಅಧಿಕಾರಿ ಬಿಪಿನ್ ರಾವತ್ ನಿಧನಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಪೋಸ್ಟ್ಗಳಿಗೆ ಮುಸ್ಲಿಂರು ಖುಷಿಯ ಎಮೋಜಿಗಳನ್ನು ಕಾಮೆಂಟ್ ಮಾಡಿದ್ದನ್ನು ಅಲಿ ಅಕ್ಬರ್ ಅವರು ಖಂಡಿಸಿದ್ದರು. ರಾವತ್ ಅವರ ಸಾವಿಗೆ ಅಗೌರವ ಸೂಚಿಸಿದ ಕೆಲವು ದೇಶವಿರೋಧಿ ಮುಸ್ಲಿಮರ ಕೃತ್ಯವನ್ನು ಯಾವುದೇ ಮುಸ್ಲಿಂ ನಾಯಕರೂ ಖಂಡಿಸಿಲ್ಲೀ ಬಗ್ಗೆ ಅಲಿ ಅಕ್ಬರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಸ್ಲಿಂ ಧರ್ಮದಲ್ಲಿನ ನಂಬಿಕೆಯನ್ನು ಕೈ ಬಿಡುವುದಾಗಿ ಅಲಿ ಹೇಳಿದ್ದರು. ಅದರಂತೆ ಅವರು ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಇದನ್ನೂ ಓದಿ: ಮಲಯಾಳಂ ನಟ ಮಮ್ಮುಟ್ಟಿಗೆ ಕೋವಿಡ್-19 ಪಾಸಿಟಿವ್