FoodLatestMain PostVeg

ರುಚಿಕರ ಸೋಯಾಬೀನ್ 65 ಮಾಡಿ ಸವಿಯಿರಿ

ಚಿಕನ್ 65 ಅನ್ನು ನೀವು ಯಾವಾಗಲೂ ಮಾಡಿ ಸವಿದಿರುತ್ತೀರಿ. ಆದರೆ ಅದೇ ರುಚಿ ಸಸ್ಯಾಹಾರದಲ್ಲಿ ಬೇಕು ಎನಿಸಿದಾಗ ಏನು ಮಾಡುತ್ತೀರಿ? ಇದಕ್ಕೆ ಬೆಸ್ಟ್ ಆಪ್ಶನ್ ಸೋಯಾಬೀನ್. ಸೋಯಾಬೀನ್ ಸಸ್ಯಾಹಾರವಾಗಿದ್ದು, ಚಿಕನ್‌ನಂತೆಯೇ ರುಚಿಯಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಚಿಕನ್ 65 ನಂತೆ ಸೋಯಾಬೀನ್ 65 ಕೂಡಾ ಅಷ್ಟೇ ರುಚಿಕರವಾಗಿರುತ್ತದೆ ಖಂಡಿತ. ಸೋಯಾಬೀನ್ 65 ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು:
ಸೋಯಾಬೀನ್ – 2 ಕಪ್
ಅರಿಶಿನ – ಅರ್ಧ ಟೀಸ್ಪೂನ್
ಮೆಣಸಿನ ಪುಡಿ – 1 ಟೀಸ್ಪೂನ್
ಕೊತ್ತಂಬರಿ ಪುಡಿ – ಅರ್ಧ ಟೀಸ್ಪೂನ್
ಜೀರಿಗೆ ಪುಡಿ – ಅರ್ಧ ಟೀಸ್ಪೂನ್
ಗರಂ ಮಸಾಲಾ – ಅರ್ಧ ಟೀಸ್ಪೂನ್

ಉಪ್ಪು – ಅರ್ಧ ಟೀಸ್ಪೂನ್
ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಮೊಸರು – ಅರ್ಧ ಕಪ್
ಕಾರ್ನ್ ಫ್ಲೋರ್ – ಕಾಲು ಕಪ್
ಮೈದಾ – ಕಾಲು ಕಪ್
ಎಣ್ಣೆ – ಹುರಿಯಲು ಇದನ್ನೂ ಓದಿ: ಕ್ರಿಸ್ಪಿ ಪನೀರ್ ಫ್ರೈ ಮಾಡುವುದು ತುಂಬಾ ಸುಲಭ

ಮಾಡುವ ವಿಧಾನ:
* ಮೊದಲಿಗೆ, ದೊಡ್ಡ ಪಾತ್ರೆಯಲ್ಲಿ ನೀರು ತೆಗೆದುಕೊಂಡು, ಅರ್ಧ ಟೀಸ್ಪೂನ್ ಉಪ್ಪು ಸೇರಿಸಿ ಮತ್ತು ಕುದಿಸಿ.
* ಅದಕ್ಕೆ ಸೋಯಾಬೀನ್ ಸೇರಿಸಿ 5 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ ಮೃದುವಾಗುವವರೆಗೆ ಕುದಿಸಿ.
* ಈಗ ಸೋಯಾಬೀನ್ ಅನ್ನು ನೀರಿನಿಂದ ಬೇರ್ಪಡಿಸಿ, ತಣ್ಣೀರಿನಿಂದ ತೊಳೆಯಿರಿ. ಸೋಯಾಬೀನ್‌ನಲ್ಲಿರುವ ಹೆಚ್ಚುವರಿ ನೀರನ್ನು ಹಿಂಡಿ.
* ಈಗ ದೊಡ್ಡ ಬಟ್ಟಲಿಗೆ ಸೋಯಾಬೀನ್ ಅನ್ನು ಹಾಕಿ, ಅದಕ್ಕೆ ಅರಿಶಿನ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ಅರ್ಧ ಟೀಸ್ಪೂನ್ ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಮೊಸರು, ಕಾರ್ನ್ ಫ್ಲೋರ್ ಮತ್ತು ಮೈದಾವನ್ನು ಸೇರಿಸಿ, ಸೋಯಾಬೀನ್‌ಗೆ ಹಿಟ್ಟು ಚೆನ್ನಾಗಿ ಲೇಪಿತವಾಗುವಂತೆ ಮಿಶ್ರಣ ಮಾಡಿ.
* ಈಗ ಸೋಯಾಬೀನ್ ತುಂಡುಗಳನ್ನು ಒಂದೊಂದಾಗಿಯೇ ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.
* ಮಧ್ಯಮ ಉರಿಯಲ್ಲಿ ಸೋಯಾ ತುಂಡುಗಳನ್ನು ಗರಿಗರಿಯಾಗಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
* ಈಗ ಸೋಯಾಬೀನ್ 65 ರೆಡಿಯಾಗಿದ್ದು, ಅದನ್ನು ಹಸಿರು ಚಟ್ನಿಯೊಂದಿಗೆ ಆನಂದಿಸಿ. ಇದನ್ನೂ ಓದಿ: ಬ್ರೆಡ್‌ನಿಂದಲೂ ಮಾಡ್ಬೋದು ಟೇಸ್ಟಿ ಸ್ಪ್ರಿಂಗ್ ರೋಲ್

Live Tv

Leave a Reply

Your email address will not be published.

Back to top button