ತೆಲುಗು ಸಿನಿಮಾ ರಂಗದಲ್ಲೀಗ ಪ್ರಿನ್ಸ್ ಮಹೇಶ್ ಬಾಬು ಅವರದ್ದೇ ಮಾತು. ಸದ್ಯ ಅವರು ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ಸಿನಿಮಾ ಮಾಡಲಿದ್ದು, ಈ ಸಿನಿಮಾಗೆ ಅವರು ಬರೋಬ್ಬರಿ 70 ಕೋಟಿ ಸಂಭಾವನೆಯನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ತೆಲುಗು ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯಲಿರುವ ಯುವನಟ ಎಂಬ ಕೀರ್ತಿಗೂ ಅವರು ಪಾತ್ರವಾಗಲಿದ್ದಾರೆ.
ಮಹೇಶ್ ಬಾಬು ಸಿನಿಮಾಗಳು ಸೋಲುವುದು ಕಡಿಮೆ. ಅವೆಲ್ಲವೂ ಭಾರೀ ಬಜೆಟ್ ಸಿನಿಮಾಗಳೇ ಆಗಿರುತ್ತವೆ. ಅಲ್ಲದೇ ಬಾಕ್ಸ್ ಆಫೀಸಿನಲ್ಲಿ ಸಖತ್ ಕಮಾಯಿ ಮಾಡುತ್ತವೆ. ಹೀಗಾಗಿಯೇ ಅವರು ಸಿನಿಮಾದಿಂದ ಸಿನಿಮಾಗೆ ಡಿಮಾಂಡ್ ಮಾಡುತ್ತಾರೆ ಎನ್ನುತ್ತಿದೆ ಟಾಲಿವುಡ್. ಅವರು ಸಂಭಾವನೆಯನ್ನು ಅದೆಷ್ಟೇ ಏರಿಸಿದರು. ನಿರ್ಮಾಪಕರು ಕೊಡಲು ರೆಡಿ ಇರುತ್ತಾರೆ ಎಂದು ಹೇಳಲಾಗುತ್ತದೆ. ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾ ‘ಲಡಕಿ’ ನೋಡಿ ಬೆಚ್ಚಿ ಬಿದ್ದರಂತೆ ಸೆನ್ಸಾರ್ ಟೀಮ್
ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಮಹೇಶ್ ಬಾಬು ಕಾಂಬಿನೇಷನ್ ನ ಹೊಸ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದ್ದು ಇದಾದ ನಂತರ ರಾಜಮೌಳಿ ಜೊತೆ ಮಹೇಶ್ ಬಾಬು ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇನ್ನೂ ಈ ಕುರಿತು ಅಧಿಕೃತ ಮಾಹಿತಿಯಂತೂ ಇಲ್ಲ. ಮೊದಲು ತ್ರಿವಿಕ್ರಮ್ ಸಿನಿಮಾವಾಗುತ್ತಾ ಅಥವಾ ರಾಜಮೌಳಿ ಅವರ ಸಿನಿಮಾ ಬರತ್ತಾ ಕಾದು ನೋಡಬೇಕು.