BollywoodCinemaLatestMain Post

ರಾಮ್ ಗೋಪಾಲ್ ವರ್ಮಾ ‘ಲಡಕಿ’ ನೋಡಿ ಬೆಚ್ಚಿ ಬಿದ್ದರಂತೆ ಸೆನ್ಸಾರ್ ಟೀಮ್

Advertisements

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಲಡಕಿ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮೊದಲ ಬಾರಿಗೆ ಭಾರತೀಯ ಸಿನಿಮಾ ರಂಗಕ್ಕೆ ಪೂರ್ಣ ಪ್ರಮಾಣದ ಮಾರ್ಷಲ್ ಆರ್ಟ್ ಬಳಸಿಕೊಂಡು ಮಾಡಿದ ಸಿನಿಮಾ ಮಾಡಿದ್ದಾರೆ. ಈ ಸಿನಿಮಾವನ್ನು ಸೆನ್ಸಾರ್ ಮಂಡಳಿಯ ಮುಂದೆ ತಂದಾಗ ಸ್ವತಃ ಟೀಮ್ ಬೆಚ್ಚಿ ಬಿದ್ದಿತಂತೆ. ಇದೊಂದು ಮಾರ್ಷಲ್ ಆರ್ಟ್ ಸಿನಿಮಾನಾ ಅಥವಾ ಎಕ್ಸಪೋಸ್ ಗಾಗಿ ಮಾಡಿದ ಚಿತ್ರವಾ ಎನ್ನುವಷ್ಟರ ಮಟ್ಟಿಗೆ ಗೊಂದಲಕ್ಕೀಡಾದರಂತೆ.

ಹಲವು ದೃಶ್ಯಗಳು ಡಿಲಿಟ್, ಮಾತುಗಳಿಗೆ ಮ್ಯೂಟ್, ಕೆಲವು ಕಡೆ ಕತ್ತರಿ ಪ್ರಯೋಗ ಇವೆಲ್ಲದರ ನಂತರ ಲಡಕಿಗೆ ‘ಎ’ ಪ್ರಮಾಣ ಪತ್ರ ಸಿಕ್ಕಿದೆ. ಈ ಸಿನಿಮಾದಲ್ಲಿ ಪೂಜಾ ಭಾಲೇಕರ್ ನಟಿಸಿದ್ದು, ಸಿಕ್ಕಾಪಟ್ಟೆ ಬೋಲ್ಡ್ ಆಗಿ ಅವರು ಕಾಣಿಸಿಕೊಂಡಿದ್ದಾರಂತೆ. ಸಿನಿಮಾದ ಬಹುತೇಕ ಬಿಕಿನಿಯಲ್ಲೇ ನಟಿಸಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್

ಮತ್ತೊಂದು ಅಚ್ಚರಿಯ ಸಂಗತಿ ಎಂದರೆ, ನಾಯಕಿಯ ಎದೆ ಸೀಳು ತೋರಿಸುವಂತಹ ಸಾಕಷ್ಟು ದೃಶ್ಯಗಳು ಈ ಸಿನಿಮಾದಲ್ಲಿ ಇದ್ದವಂತೆ. ಅವುಗಳಲ್ಲಿ 12 ದೃಶ್ಯಗಳನ್ನು ತಗೆಯುವಂತೆ ಮಂಡಳಿ ಸೂಚಿಸಿತ್ತು ಎಂದು ಹೇಳಲಾಗಿದೆ. ಮತ್ತೊಂದು ಕಡೆ ಖಳನಾಯಕನ ನಾಯಕಿಯ ಬಟ್ಟೆಯನ್ನು ಕಿತ್ತೆಸೆಯುವಂತಹ ಸನ್ನಿವೇಶ ಇತ್ತಂತೆ. ಅದರಲ್ಲಿ ಶೇ.50ರಷ್ಟು ಚಿತ್ರಿಕೆಯನ್ನು ತಗೆದು ಹಾಕಲು ಸೂಚಿಸಿದೆ ಎಂದು ಹೇಳಲಾಗಿದೆ. ಇದೆಲ್ಲವೂ ನಿಜನಾ ಎನ್ನುವುದು ನಾಳೆ ಸಿನಿಮಾ ಶುರುವಾಗುವ ಮುನ್ನ ಸೆನ್ಸಾರ್ ಸರ್ಟಿಫಿಕೇಟ್ ನಲ್ಲಿ ಅನಾವರಣವಾಗಲಿದೆ.

Live Tv

Leave a Reply

Your email address will not be published.

Back to top button