– ಬೆಚ್ಚಿಬಿದ್ದು ಮನೆಯಿಂದಾಚೆಗೆ ಓಡಿದ ಜನ
ನವದೆಹಲಿ: ಅಫ್ಘಾನಿಸ್ತಾನದ (Afghanistan) ಹಿಂದೂಕುಷ್ ಪ್ರದೇಶದಲ್ಲಿ ಶನಿವಾರ (ಇಂದು) 6.2 ತೀವ್ರತೆಯ ಭೂಕಂಪ (Earthquake) ಸಂಭವಿಸುದ್ದು, ದೆಹಲಿ, ಎನ್‌ಸಿಆರ್ ಹಾಗೂ ಜಮ್ಮು- ಕಾಶ್ಮೀರ ಪ್ರದೇಶಗಳಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ಇದು ಜನರ ಆತಂಕಕ್ಕೂ ಕಾರಣವಾಗಿದೆ.
ಶನಿವಾರ ಸಂಜೆ 6:04 ರ ಸುಮಾರಿಗೆ ಹಿಂದೂಕುಷ್ ಪ್ರದೇಶದಲ್ಲಿ (Hindu Kush region) ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಮಾಹಿತಿ ಪ್ರಕಾರ, ಈಶಾನ್ಯ ಅಫ್ಘಾನಿಸ್ತಾನದ ಕಲಾಫ್ಗನ್‌ನಿಂದ ಸುಮಾರು 81 ಕಿಮೀ ದೂರದಲ್ಲಿ, 215 ಕಿಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ.
EQ of M: 6.2, On: 27/06/2026 19:04:51 IST, Lat: 36.442 N, Long: 70.672 E, Depth: 215 Km, Location: Afghanistan.
For more information Download the BhooKamp App https://t.co/5gCOtjdtw0 @DrJitendraSingh @OfficeOfDrJS @DrNKalaiselvi @GSuresh_NCS @ndmaindia pic.twitter.com/lD494VYeiW— National Center for Seismology (@NCS_Earthquake) June 27, 2026
ಅಫ್ಘಾನ್‌ನಲ್ಲಿ ಭೂಕಂಪದಿಂದಾಗಿ ಪಾಕಿಸ್ತಾನ (Pakistan), ಉತ್ತರ ಭಾರತ, ಚೀನಾ, ತಜಿಕಿಸ್ತಾನ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ಸೇರಿದಂತೆ ಹಲವಾರು ದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದನ್ನೂ ಓದಿ: ನೀಟ್ ಆಯ್ತು ಈಗ ಮಹಾರಾಷ್ಟ್ರದಲ್ಲಿ TET ಪ್ರಶ್ನೆಪತ್ರಿಕೆ ಸೋರಿಕೆ – ನಾಳೆ ನಡೆಯಬೇಕಿದ್ದ ಪರೀಕ್ಷೆ ರದ್ದು
ದೆಹಲಿ-ಎನ್‌ಸಿಆರ್‌ನಲ್ಲಿ ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ.ಜಮ್ಮು ಮತ್ತು ಕಾಶ್ಮೀರದಲ್ಲೂ (Jammu And Kashmir) ಬಲವಾದ ಕಂಪನಗಳು ಕಂಡುಬಂದಿದ್ದು, ಜನ ಭಯಭೀತರಾಗಿ ಮನೆ, ಕಚೇರಿ ಬಿಟ್ಟು ಬೀದಿಗೆ ಓಡಿದ್ದಾರೆ. ತಕ್ಷಣಕ್ಕೆ ಸಾವು-ನೋವುಗಳು, ಆಸ್ತಿ-ಪಾಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ.

ಇದಕ್ಕೂ ಮುನ್ನ ಬೆಳಿಗ್ಗೆ 11:38 ರ ಸುಮಾರಿಗೆ ಭಾರತದ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪ ದಾಖಲಾಗಿತ್ತು. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಭಕ್ತಸಾಗರ – ಒಂದೇ ದಿನ 81 ಸಾವಿರಕ್ಕೂ ಅಧಿಕ ಜನರಿಂದ ದರ್ಶನ
