ಹೈದರಾಬಾದ್: ಕಳೆದ ನಾಲ್ಕೈದು ದಿನಗಳಿಂದ ತಿರುಪತಿ ತಿಮ್ಮಪ್ಪನ (Tirupati Timmappa Temple) ದೇವಸ್ಥಾನ ಫುಲ್ ರಶ್ ಆಗಿದೆ.
ತಿಮ್ಮಪ್ಪನ ದರ್ಶನ ಪಡೆಯಲು ಉಚಿತ ದರ್ಶನಕ್ಕಾಗಿ ಕಿಲೋಮೀಟರ್ ಗಟ್ಟಲೆ ಭಕ್ತರು ಕ್ಯೂ ನಿಂತಿದ್ದಾರೆ. ನಿನ್ನೆ ಒಂದೇ ದಿನ ಸುಮಾರು 81 ಸಾವಿರಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಕೆಂಪೇಗೌಡ ಜಯಂತಿ ಆಚರಣೆ ವೇಳೆ ಹೈಡ್ರಾಮಾ – ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ ಸ್ಫೋಟ
ಬೆಳಿಗ್ಗೆ 8 ಗಂಟೆಯ ನಂತರ ಸರ್ವ ದರ್ಶನಕ್ಕೆ ಹೋಗುವ ಭಕ್ತರಿಗೆ 18-24 ಗಂಟೆಗಳು ಬೇಕಾಗುತ್ತಿದೆ. ಸರ್ವ ದರ್ಶನಕ್ಕೆ ಟೋಕನ್ ಪಡೆದ ಭಕ್ತರಿಗೆ 4 ರಿಂದ 6 ಗಂಟೆಗಳು ಬೇಕಾಗುತ್ತದೆ. ನಿನ್ನೆ ಒಂದೇ ದಿನ 44,874 ಭಕ್ತರು ಮುಡಿಕೊಟ್ಟಿದ್ದಾರೆ. 3.76 ಕೋಟಿ ರೂ. ಹುಂಡಿಗೆ ಆದಾಯ ಬಂದಿದೆ. ನಿನ್ನೆ ಒಂದೇ ದಿನ 4.42 ಲಕ್ಷ ಲಡ್ಡುಗಳು ಮಾರಾಟವಾಗಿವೆ. 3.31 ಲಕ್ಷ ಭಕ್ತರು ಅನ್ನಪ್ರಸಾದ ಪಡೆದಿದ್ದಾರೆ. 3,916 ಭಕ್ತರು ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ.
