ಜೈಪುರ: 1,050 ರೂ.ಗಳ ಗೃಹಬಳಕೆಯ ಗ್ಯಾಸ್ ಸಿಲಿಂಡರ್ (LPG) ಅನ್ನು 500 ರೂ.ಗಳಿಗೆ ನೀಡುವುದಾಗಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಘೋಷಣೆ ಮಾಡಿದ್ದಾರೆ.
राजस्थान में BPL और उज्ज्वला योजना के अंतर्गत आने वाले लोगों को 1 अप्रैल से '500 रुपए' में मिलेगा रसोई गैस सिलेंडर।
मुख्यमंत्री, श्री @ashokgehlot51 की बड़ी घोषणा।#AlwarBoleBharatJodo pic.twitter.com/aD56DWwxo1
— Congress (@INCIndia) December 19, 2022
Advertisement
ಅಲ್ವಾರ್‌ನಲ್ಲಿ ಭಾರತ್ ಜೋಡೊ (Bharat Jodo Yatra) ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 1,050 ರೂ.ಗಳಿಗೆ ದೊರೆಯುವ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 500 ರೂ.ಗೆ ನೀಡಲಿದ್ದೇವೆ. ಮುಂದಿನ ಏಪ್ರಿಲ್ 1 ರಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನಗೆ ಗುಂಡು ಹೊಡೆದ್ರೂ ಟಿಪ್ಪು ಭಾವಚಿತ್ರ ಅಳವಡಿಸಲು ಬಿಡಲ್ಲ – ಯತ್ನಾಳ್
Advertisement
Advertisement
ಮುಂದಿನ ತಿಂಗಳು ಮಂಡಿಸುವ ಬಜೆಟ್‌ನಲ್ಲಿ ರಾಜ್ಯದಲ್ಲಿ ಹಣದುಬ್ಬರ ತಗ್ಗಿಸಲು ಕ್ರಮಕೈಗೊಳ್ಳಲಾಗುವುದು. ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಕಿಚನ್ ಕಿಟ್ ಸಹ ವಿತರಿಸುವ ಯೋಜನೆ ಜಾರಿಗೆ ತರಲಾಗುವುದು. ಇದರೊಂದಿಗೆ ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ರೈತರಿಗೆ (Farmers) ಮುಂದಿನ ಬಜೆಟ್‌ನಲ್ಲಿ ಗುಡ್‌ನ್ಯೂಸ್ ನೀಡಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಡಿಕೆಶಿ, ಸಿದ್ದರಾಮಯ್ಯ ಮೈಯಲ್ಲಿ ಭಯೋತ್ಪಾದಕರ ವಂಶದ ರಕ್ತ ಹರಿಯುತ್ತಿದೆ – ಈಶ್ವರಪ್ಪ ವಿವಾದಾತ್ಮಕ ಹೇಳಿಕೆ
Advertisement
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಉಜ್ವಲ ಯೋಜನೆ (Ujjwala Yojana) ಅಡಿಯಲ್ಲಿ ಎಲ್‌ಪಿಜಿ ಸಂಪರ್ಕ ಹಾಗೂ ಗ್ಯಾಸ್ ಸ್ಟೌವ್ ನೀಡುವುದಾಗಿ ಪ್ರಧಾನಿ ಮೋದಿ ನಾಟಕ ಮಾಡಿದ್ದಾರೆ. ಈಗ ಅವರ ಸಿಲಿಂಡರ್‌ಗಳು ಖಾಲಿ ಬಿದ್ದಿವೆ. ಎಲ್‌ಪಿಜಿ ಬೆಲೆ 400 ರಿಂದ 1,040 ರೂ.ಗೆ ಏರಿಕೆಯಾಗಿರುವುದರಿಂದ ಯಾರೂ ಖರೀದಿಸುತ್ತಿಲ್ಲ. ನಮ್ಮ ಸರ್ಕಾರ ಉಜ್ವಲ ಯೋಜನೆಗೆ ಒಳಪಟ್ಟವರ ವಿವರಗಳನ್ನು ಅಧ್ಯಯನ ಮಾಡುತ್ತಿದೆ. ಮುಂದಿನ ತಿಂಗಳು ಬಜೆಟ್ ಮಂಡಿಸಲಿದ್ದು, ಏಪ್ರಿಲ್ 1 ರಿಂದ ಪ್ರತಿ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ತಲಾ 500 ರೂ. ನಂತೆ ನೀಡುವ ಯೋಜನೆ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.