ಬೆಳಗಾವಿ: ಡಿ.ಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯ (Siddaramaiah) ಅವರ ಮೈಯಲ್ಲಿ ಭಯೋತ್ಪಾದಕರ ವಂಶದ ರಕ್ತವೇ ಹರಿಯುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
`ಡಿಕೆಶಿ ನೇತೃತ್ವದ ಸಂಸ್ಥೆಗಳ ಮೇಲೆ ಸಿಬಿಐ (CBI) ದಾಳಿಗೆ ಬಿಜೆಪಿ (BJP) ಕಾರಣ’ ಎಂಬ ವಿಚಾರವಾಗಿ ಮಾತನಾಡಿದ ಅವರು, ಭಯೋತ್ಪಾದಕರ ವಂಶದ ರಕ್ತವೇ ಡಿಕೆಶಿ, ಸಿದ್ದರಾಮಯ್ಯ ಮೈಯಲ್ಲಿ ಹರಿಯುತ್ತಿದೆ. ಮುಸ್ಲಿಮರ ವೋಟು ಹೋಗುತ್ತದೆ ಅಂತಾ ಹೀಗೆ ಮಾಡ್ತಿದ್ದಾರೆ. ಭಯೋತ್ಪಾದಕರ ವಿಚಾರದಲ್ಲಿ ಡಿಕೆಶಿ, ಸಿದ್ದರಾಮಯ್ಯ ಒಂದಾದ್ರು. ಯಾಕಂದ್ರೆ ಮುಸ್ಲಿಮರ ವೋಟಿಗಾಗಿ (Muslims Vote) ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: `ಕಾಂತಾರ’ ಎಫೆಕ್ಟ್, ಭೂತಕೋಲ ನೋಡಲು ಧರ್ಮಸ್ಥಳಕ್ಕೆ ಬರಲಿದ್ದಾರೆ ನಟ ವಿಶಾಲ್
Advertisement
Advertisement
ಹಾಗಂತ ಎಲ್ಲಾ ಮುಸ್ಲಿಮರೂ ಭಯೋತ್ಪಾದಕರಲ್ಲ. ಎಲ್ಲರೂ ಮುಸ್ಲಿಮರ ವೋಟಿಗೆ ಓಲೈಕೆ ಮಾಡ್ತಿದ್ದಾರೆ. ಬೇರೆ ಬೇರೆ ದಿಕ್ಕಲ್ಲಿದ್ದವರು ಈಗ ಒಂದಾಗಿದ್ದಾರೆ. ಹಿಂದುತ್ವದ ಬಗ್ಗೆ ಕೆಳಮಟ್ಟದಲ್ಲಿ ಮಾತನಾಡ್ತಿದ್ದಾರೆ. ಅವರು ಕೆಳಮಟ್ಟದಲ್ಲಿ ಮಾತನಾಡಿದಷ್ಟೂ ಪಕ್ಷ ನೆಲ ಕಚ್ಚಲಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೂ ನಿಮಗೂ ಸಂಬಂಧ ಏನು? – ಬಿ.ಎಲ್.ಸಂತೋಷ್ ವಿರುದ್ಧ ಹೆಚ್‌ಡಿಕೆ ಕಿಡಿ
Advertisement
Advertisement
ಸಿಎಂ ಉತ್ತರ ಕೊಡಬೇಕು: ಸಚಿವ ಸಂಪುಟ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮೋದಿ ಅಥವಾ ಅಮಿತ್ ಶಾ ಜೊತೆ ಚರ್ಚೆ ಮಾಡಿಲ್ಲ. ಸಿಎಂ ಜೊತೆ ಮಾತನಾಡಿದಾಗ ತೆಗೆದುಕೊಳ್ಳುತ್ತೇವೆ ಅಂತಾ ಹೇಳಿದ್ದರು. ಆದರೀಗ ನನ್ನ ಯಾಕೆ ತೆಗೆದುಕೊಂಡಿಲ್ಲ ಅಂತಾ ಸಿಎಂ ಉತ್ತರ ಕೊಡಬೇಕು. ಆದ್ರೆ ಯಾವುದೇ ಉತ್ತರ ಬರುತ್ತಿಲ್ಲ. ಆರೋಪ ಬಂದ ನಂತರ ನಾನೇ ರಾಜೀನಾಮೆ ಕೊಟ್ಟು, ತನಿಖೆ ನಂತರವೂ ಕ್ಲೀನ್ ಚಿಟ್ ಸಿಕ್ಕಿದ್ರೂ ತೆಗೆದುಕೊಂಡಿಲ್ಲ. ಕ್ಷೇತ್ರದ ಜನರಿಗೆ ಉತ್ತರ ಕೊಡಲು ಆಗುತ್ತಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.
ಬೆಳಗಾವಿ ಅಧಿವೇಶನಕ್ಕೆ ಗೈರು ವಿಚಾರಕ್ಕೆ, ಕೆ.ಜೆ. ಜಾರ್ಜ್ ಗೃಹ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೊಲೆ ಆರೋಪ ಕೇಳಿಬಂದಿತ್ತು. ಆಗ ನಾನು ವಿಪಕ್ಷ ನಾಯಕನಾಗಿದ್ದೆ. ಆಗ ನಾನೇ ರಾಜೀನಾಮೆ ಕೊಡುವಂತೆ ಹೇಳಿದ್ದೆ. ತನಿಖೆ ಆಗಿ ಕ್ಲೀನ್ ಚಿಟ್ ಸಿಕ್ಕ ಬಳಿಕ ಅವರು ಸಚಿವರಾದರು. ನನ್ನ ಮೇಲೆ ಆರೋಪ ಬಂದಾಗ ರಾಜೀನಾಮೆ ಬೇಡ ಎಂದರೂ ನೈತಿಕತೆ ಪ್ರಶ್ನೆ ಬರುತ್ತದೆ ಎಂತಾ ನಾನೇ ರಾಜೀನಾಮೆ ನೀಡಿದೆ. ಆದ್ರೆ ಕ್ಲೀನ್ ಚಿಟ್ ಸಿಕ್ಕ ಬಳಿಕವೂ ಸಚಿವ ಸ್ಥಾನ ನೀಡಿಲ್ಲ. ಎಲ್ಲರೂ ಯಾಕೆ ಸಿಗಲಿಲ್ಲ ಅಂತಾ ಪ್ರಶ್ನೆ ಮಾಡ್ತಿದ್ದಾರೆ. ನನ್ನದು ಸೌಮ್ಯ ರೂಪದ ಪ್ರತಿಭಟನೆ. ನಾನು ಪತ್ರ ಬರೆದಿದ್ದೇನೆ. ಸಿಎಂ ಸಿಕ್ಕಿಲ್ಲ, ಹಾಗಾಗಿ ಇನ್ನೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.