ನಿನ್ನ ಸಂಬಳ ಎಷ್ಟು? ಇಎಂಐ ಎಷ್ಟು? – ದುಡಿಮೆಗಿಂತ ವಹಿವಾಟು ಹೆಚ್ಚು: ಪಾಲಿಕೆ ಸಿಬ್ಬಂದಿಗೆ ಲೋಕಾಯುಕ್ತ ಕ್ಲಾಸ್‌

1 Min Read

ದಾವಣಗೆರೆ: ಇಲ್ಲಿನ (Davangere) ರಾಜೀವ್ ಗಾಂಧಿ ಬಡಾವಣೆಯಲ್ಲಿರುವ ಮಹಾನಗರ ಪಾಲಿಕೆ (Corporation Office) ವಲಯ-1 ಕಚೇರಿ ಮೇಲೆ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಪಾಲಿಕೆ ಸಿಬ್ಬಂದಿಗೆ‌ ನಿನ್ನ ಸಂಬಳ ಎಷ್ಟಿದೆ? ಇಎಂಐ ಎಷ್ಟು? ಸಂಬಳಕ್ಕಿಂತ ವಹಿವಾಟು ಜಾಸ್ತಿ ಇದೆ ಎಂದು ಲೋಕಾಯುಕ್ತ ಅಧಿಕಾರಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ.

ಇ ಸ್ವತು ಸೇರಿದಂತೆ ಅನೇಕ ಸೇವೆಗಳಿಗೆ ಅಧಿಕ ಹಣ ಸಂಗ್ರಹ ಮಾಡುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಾಲಿಕೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಯಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೇ ಸಿಬ್ಬಂದಿಯ ಬ್ಯಾಂಕ್ ವಹಿವಾಟಿನ ಬಗ್ಗೆ ಎರಡು ಗಂಟೆಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 26 ವರ್ಷದ ಯುವತಿಯೊಂದಿಗಿನ ಪ್ರೀತಿಗೆ ಮನೆಯವರ ಅಡ್ಡಿ – 15ರ ಬಾಲಕ ಆತ್ಮಹತ್ಯೆ

ಎರಡು ವಾಹನದಲ್ಲಿ ಬಂದ 8ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಡಿವೈಎಸ್ಪಿ ಕಲಾವತಿ, ಸಿಪಿಐ ಗುರು ಬಸವರಾಜ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಕೇಸ್ – ಜೀವಾವಧಿ ಶಿಕ್ಷೆ ಪ್ರಶ್ನಿಸಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

Share This Article