ದುಬೈ: ಟಿ20 ವಿಶ್ವಕಪ್‍ಗಾಗಿ ದುಬೈ ಅಂಕಣ ಸಜ್ಜಾಗಿದೆ. ವಿಶ್ವದ ಬಲಾಢ್ಯ ತಂಡಗಳು ನಡುವಿನ ಜಿದ್ದಾಜಿದ್ದಿನ ಚುಟುಕು ಸಮರದಲ್ಲಿ ಈವರೆಗೆ 5 ತಂಡಗಳು ಮಾತ್ರ ಪ್ರಶಸ್ತಿಯನ್ನು ಎತ್ತಿ ಹಿಡಿದು ಸಂಭ್ರಮಿಸಿದೆ.
Advertisement
ಟಿ20 ವಿಶ್ವಕಪ್ ಆರಂಭವಾಗಿದ್ದು 2007ರಲ್ಲಿ ಆ ವೇಳೆ ಯುವ ಪಡೆಯೊಂದಿಗೆ ಭಾರತ ತಂಡವನ್ನು ಮುನ್ನಡೆಸಿದ ಮಹೇಂದ್ರ ಸಿಂಗ್ ಭಾರತಕ್ಕೆ ಮೊದಲ ಟಿ20 ವಿಶ್ವಕಪ್ ಗೆದ್ದು ಕೊಟ್ಟರು. ಫೈನಲ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಿದವು. ಇದನ್ನೂ ಓದಿ: ಭಾರತ Vs ಪಾಕಿಸ್ತಾನ ಮ್ಯಾಚ್ – 10 ಸೆಕೆಂಡ್ ಜಾಹೀರಾತಿಗೆ ಲಕ್ಷ ಲಕ್ಷ ರೇಟ್
Advertisement
Advertisement
2007ರ ಟಿ20 ವಿಶ್ವಕಪ್ ಫೈನಲ್‍ನಲ್ಲಿ ಭಾರತ ವಿರುದ್ಧ ಸೋತ ಪಾಕಿಸ್ತಾನ ತಂಡ 2009ರಲ್ಲಿ ನಡೆದ ವಿಶ್ವಕಪ್‍ನಲ್ಲಿ ಮತ್ತೆ ಫೈನಲ್ ಪ್ರವೇಶಿಸಿತು. ಈ ಬಾರಿ ಫೈನಲ್‍ನಲ್ಲಿ ಶ್ರೀಲಂಕಾ ತಂಡ ಎದುರಾಗಿತ್ತು. ಟ್ರೋಫಿ ಗೆಲ್ಲಲೇ ಬೇಕೆಂಬ ನಿರ್ಧಾರ ಮಾಡಿದ ಪಾಕ್ ಪ್ರಶಸ್ತಿ ಗೆದ್ದು ಬೀಗಿತು.
Advertisement
ಮೂರನೇ ಟಿ20 ವಿಶ್ವಕಪ್ 2010ರಲ್ಲಿ ಕೆರಿಬಿಯನರ ನಾಡಲ್ಲಿ ನಡೆಯಿತು. ಫೈನಲ್‍ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಎದುರುಬದುರಾಗಿದ್ದವು. ಅದ್ಭುತ ಪ್ರದರ್ಶನ ತೋರಿದ ಇಂಗ್ಲೆಂಡ್, ಆಸ್ಟ್ರೇಲಿಯಾವನ್ನು ಸೋಲಿಸಿ ಪ್ರಶಸ್ತಿ ಜಯಿಸಿತು. ಇದನ್ನೂ ಓದಿ: T20 ಕ್ರಿಕೆಟ್‍ನಲ್ಲಿ ಭಾರತ vs ಪಾಕಿಸ್ತಾನ ನಡುವೆ ಯಾರು ಬೆಸ್ಟ್?
ಮೂರನೇ ಟಿ20 ವಿಶ್ವಕಪ್‍ನಲ್ಲಿ ತವರಿನಲ್ಲಿ ಸೋತ ವೆಸ್ಟ್ ಇಂಡೀಸ್ ತಂಡ 2012ರಲ್ಲಿ ನಡೆದ ಟಿ20 ವಿಶ್ವಕಪ್‍ಗಾಗಿ ಬಲಿಷ್ಠ ತಂಡದೊಂದಿಗೆ ಆಗಮಿಸಿತು. ಫೈನಲ್‍ನಲ್ಲಿ ಶ್ರೀಲಂಕಾ ತಂಡ ಎದುರಾದಾಗ ವೆಸ್ಟ್ ಇಂಡೀಸ್ ಭರ್ಜರಿ ಗೆಲುವಿನೊಂದಿಗೆ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿತು.
2011ರ 50 ಓವರ್ ಗಳ ವಿಶ್ವಕಪ್‍ನಲ್ಲಿ ಸೋತ ಸೇಡನ್ನು 2014ರಲ್ಲಿ ತೀರಿಸಿಕೊಂಡ ಶ್ರೀಲಂಕಾ ತಂಡ ಫೈನಲ್‍ನಲ್ಲಿ ಭಾರತ ತಂಡವನ್ನು ಪರಾಭವಗೊಳಿಸಿ ಟಿ20 ವಿಶ್ವಕಪ್ ಗೆಲುವಿನ ಆಸೆಯನ್ನು ಪೂರೈಸಿಕೊಂಡಿತು. ಇದನ್ನೂ ಓದಿ: ಮೊದಲ ಟಿ20 ವಿಶ್ವಕಪ್ ಬಾಲ್‍ಔಟ್ ಮೂಲಕ ಪಾಕ್‍ಗೆ ಶಾಕ್ ಕೊಟ್ಟ ಭಾರತ
ಟಿ20 ಕ್ರಿಕೆಟ್‍ನಲ್ಲಿ ತನ್ನದೆ ಆದ ಹೆಸರನ್ನು ಹೊಂದಿರುವ ವೆಸ್ಟ್ ಇಂಡೀಸ್ 2016ರ ಟಿ20 ವಿಶ್ವಕಪ್‍ನಲ್ಲಿ ಫೈನಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡು ಬಾರಿ ಪ್ರಶಸ್ತಿ ಜಯಿಸಿದ ಏಕೈಕ ತಂಡವೆಂಬ ಕೀರ್ತಿಗೆ ಪಾತ್ರವಾಗಿದೆ.
ಇದೀಗ 2021ರಲ್ಲಿ ಮತ್ತೆ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಿದ್ದು, ಈ ಬಾರಿ ಯಾವ ತಂಡ ಪ್ರಶಸ್ತಿ ಎತ್ತಿ ಹಿಡಿಯಲಿದೆ ಎಂಬುದಕ್ಕೆ ನವೆಂಬರ್ 14ರ ವರೆಗೆ ಕಾಯಬೇಕಾಗಿದೆ.