ಜೈಪುರ್: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ರಾಜಸ್ಥಾನ (Rajasthan) ಮೂಲದ ಮಹಿಳೆಯೊಬ್ಬಳನ್ನು ಅಧಿಕಾರಿಗಳು(Rajasthan Police) ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಬಬಿತಾ ಧಾಕಡ್ ಅಲಿಯಾಸ್ ಖದೀಜಾ ಎಂದು ಗುರುತಿಸಿದೆ. ಸವಾಯಿ ಮಾಧೋಪುರ ಜಿಲ್ಲೆಯವಳಾದ ಬಬಿತಾ ಧಾಕಡ್ ಜೈಪುರ್‌ನ ವಟಿಕಾ ಪ್ರದೇಶದಲ್ಲಿ ನಿವೃತ್ತ ತಂದೆಯೊಂದಿಗೆ ವಾಸಿಸುತ್ತಿದ್ದಳು. ಹಲವು ವರ್ಷಗಳ ಹಿಂದೆ ಗಂಡನಿಂದ ಬೇರ್ಪಟ್ಟು ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಳು. ಗುಪ್ತಚರ ಮಾಹಿತಿಯ ಆಧಾರದಲ್ಲಿ ATS ಆಕೆಯನ್ನು ಬಂಧಿಸಿದೆ.
ತನಿಖೆ ಪ್ರಕಾರ ಬಬಿತಾ ಧಾಕಡ್ ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ಖಾತೆಗಳು ಪಾಕಿಸ್ತಾನದಿಂದ ನಿಯಂತ್ರಣಕ್ಕೆ ಒಳಗಾಗಿದ್ದವು. ಆಕೆಯ ಸಿಮ್‌ನ್ನು ಸಂಘಟನೆ ಜೊತೆಗೆ ಹಂಚಿಕೊಂಡಿದ್ದಳು. ಜೈಪುರ್‌ನ ವಿವಿಧ ಸ್ಥಳಗಳಿಗೆ ಆಕೆ ಪ್ರಯಾಣಿಸಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆಕೆ ಪಾಕಿಸ್ತಾನದ ಬಹಾವಲ್‌ಪುರ್‌ನಿಂದ ಕಾರ್ಯನಿರ್ವಹಿಸುತ್ತಿದ್ದ ಜೈಶ್ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡಿದ್ದಳು ಎಂದು ಶಂಕಿಸಲಾಗಿದೆ.
ಒಬ್ಬ ವ್ಯಕ್ತಿ ತನ್ನನ್ನು ಮಸೂದ್ ಅಜರ್ ಅವರ ಕುಟುಂಬ ಸದಸ್ಯ ಎಂದು ಪರಿಚಯಿಸಿಕೊಂಡು ಧಾರ್ಮಿಕ ಧೋರಣೆ ಮತ್ತು ಐಡಿಯಾಲಜಿಕಲ್ ಪ್ರಭಾವ ಬೀರಿದ್ದಾನೆ ಎಂದು ತನಿಖೆಯಲ್ಲಿ ಬಯಲಾಗಿದೆ. ಇದು ಸ್ಲೀಪರ್ ಸೆಲ್ ಶೈಲಿಯ ಕಾರ್ಯಾಚರಣೆಗೆ ಹೋಲುತ್ತದೆ ಎಂದು ಎಟಿಎಸ್ ಅಭಿಪ್ರಾಯಪಟ್ಟಿದೆ.ಇದನ್ನೂ ಓದಿ: ಹೊಸ ಮನೆ, ಹೊಸ ಬದುಕಿನ ಕನಸು ಭಗ್ನ – ಪ್ರೀತಿಸಿ ಮದುವೆಯಾಗಲು ಸಜ್ಜಾಗಿದ್ದ ಜೋಡಿ ಲಕ್ನೋ ಅಗ್ನಿ ದುರಂತಕ್ಕೆ ಬಲಿ
ಇಸ್ಲಾಂ ಧರ್ಮಕ್ಕೆ ಮತಾಂತರ
ಪಾಕಿಸ್ತಾನದ ಒಬ್ಬ ಮೌಲವಿಯ ಪ್ರಭಾವಕ್ಕೆ ಒಳಗಾಗಿ ತಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಎಂದು ಬಂಧಿತ ಮಹಿಳೆ ಹೇಳಿದ್ದಾಳೆ. ಕೆಲವು ವ್ಯಕ್ತಿಗಳು ತನ್ನನ್ನು ಪಾಕಿಸ್ತಾನಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡುವುದಾಗಿ ಚರ್ಚಿಸಿದ್ದರು ಎಂದೂ ಆಕೆ ಬಹಿರಂಗಪಡಿಸಿದ್ದಾಳೆ. ಈ ಪ್ರಕರಣದಲ್ಲಿ ಎಟಿಎಸ್ ಡಿಜಿಟಲ್ ಪುರಾವೆಗಳನ್ನು ವಿಶ್ಲೇಷಿಸುತ್ತಿದೆ. UAPA ಕಾನೂನು ಮತ್ತು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧನದ ಬಳಿಕ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜೂನ್ 27ರ ವರೆಗೆ ಎಟಿಎಸ್ ಕಸ್ಟಡಿಗೆ ನೀಡಲಾಗಿದೆ.ಇದನ್ನೂ ಓದಿ: ಮತ್ತೆ ಸುಪ್ರೀಂ ಮೆಟ್ಟಿಲೇರಿದ ದರ್ಶನ್ – ಒಂದು ವರ್ಷ ಜಾಮೀನು ಅರ್ಜಿ ಸಲ್ಲಿಸದಂತೆ ನೀಡಿದ್ದ ಆದೇಶ ಮಾರ್ಪಾಡಿಗೆ ಮನವಿ
