Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭೂಮಿಯಾಚೆಗಿನ ಬದುಕು – ಬಾಹ್ಯಾಕಾಶದಲ್ಲಿ ಮಹಿಳೆ ಮಗುವಿಗೆ ಸುರಕ್ಷಿತವಾಗಿ ಜನ್ಮ ನೀಡಬಹುದಾ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಭೂಮಿಯಾಚೆಗಿನ ಬದುಕು – ಬಾಹ್ಯಾಕಾಶದಲ್ಲಿ ಮಹಿಳೆ ಮಗುವಿಗೆ ಸುರಕ್ಷಿತವಾಗಿ ಜನ್ಮ ನೀಡಬಹುದಾ?

Latest

ಭೂಮಿಯಾಚೆಗಿನ ಬದುಕು – ಬಾಹ್ಯಾಕಾಶದಲ್ಲಿ ಮಹಿಳೆ ಮಗುವಿಗೆ ಸುರಕ್ಷಿತವಾಗಿ ಜನ್ಮ ನೀಡಬಹುದಾ?

Public TV
Last updated: February 15, 2026 11:16 pm
Public TV
Share
4 Min Read
Pregnency in space station
SHARE

ತಂತ್ರಜ್ಞಾನ ಬೆಳೆದಂತೆ ಭೂಮಿಯ ಮೇಲಿನ ಎಲ್ಲ ವಿಷಯಗಳು ತುಂಬಾ ಸುಲಭವಾಗಿಬಿಟ್ಟಿವೆ. ಹಿಂದೆ ನಮ್ಮ ಪೂರ್ವಜರಿಗೆ ಭೂಮಿಯಿಂದಾಚೆ ಎಂದರೆ ಬಾಹ್ಯಾಕಾಶಕ್ಕೆ ಹೋಗುವ ಕಲ್ಪನೆಯೂ ಇರಲಿಲ್ಲ. ಆದರೆ ಇದೀಗ ತಂತ್ರಜ್ಞಾನದಿಂದಾಗಿ ಅದು ನಿಜವಾಗಿ ಬಿಟ್ಟಿದೆ. ಹಾಗೆಯೇ ಬಾಹ್ಯಾಕಾಶದಲ್ಲಿ ಮಹಿಳೆ ಮಗುವಿಗೆ ಸುರಕ್ಷಿತವಾಗಿ ಜನ್ಮ ನೀಡಬಹುದಾ ಎಂಬ ಪ್ರಶ್ನೆ ಅಧ್ಯಯನದಿಂದ ಮೂಡಿಬಂದಿದೆ.

ತಂತ್ರಜ್ಞಾನ ಅಭಿವೃದ್ಧಿಯಾದಂತೆ ಎಲ್ಲದರಲ್ಲೂ ಜಗತ್ತು ಮುಂದೆ ಸಾಗುತ್ತಿದೆ. ಅದರಂತೆ ಬಾಹ್ಯಾಕಾಶದಲ್ಲಿ IVF ಮತ್ತು  ART ಸಂತಾನೋತ್ಪತ್ತಿ ತಂತ್ರಜ್ಞಾನದಿಂದಾಗಿ ಭೂಮಿಯ ಹೊರಗೆ ಮಗು ಪಡೆಯಬಹುದಾಗಿದೆ. ಆದರೆ  ಬಾಹ್ಯಾಕಾಶ ಮಗು ಸುರಕ್ಷಿತವಾಗಿ ಜನಿಸಬಹುದಾ? ಇದು ಅದರ ಆರೋಗ್ಯಕ್ಕೆ ಒಳ್ಳೆಯದಾ? ‌ಏನೆಲ್ಲಾ ಪರಿಣಾಮ ಬೀರಬಬಹುದು? ಎಂಬ ಸವಾಲಿಗೆ ದಾರಿ ಮಾಡಿಕೊಟ್ಟಿದೆ. 

Space Station 3

ಅಂತಾರಾಷ್ಟ್ರೀಯ ಸಂಸ್ಥೆಯೊಂದು ನಡೆಸುತ್ತಿರುವ ಅಧ್ಯಯನದಲ್ಲಿ ಪ್ರಶ್ನೆ ಮೂಡಿದ್ದು, ಬಾಹ್ಯಾಕಾಶದಲ್ಲಿ ಮಹಿಳೆ ಮಗುವಿಗೆ ಸುರಕ್ಷಿತವಾಗಿ ಜನ್ಮ ನೀಡಬಹುದಾ? ಆದರೆ ಅಧ್ಯಯನದ ಮಾಹಿತಿ ಪ್ರಕಾರ ಇದು ಅಪಾಯಕಾರಿಯಾಗಿದ್ದು, ಸವಾಲಾಗಿ ಪರಿಣಮಿಸಿದೆ ಎಂದು ತಿಳಿದುಬಂದಿದೆ. ಏನಿದು ಅಧ್ಯಯನ? ವರದಿಯಲ್ಲೇನಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 

Reproductive Biomedicine Online ಎಂಬ ಅಧ್ಯಯನವು ಈ ಬಗ್ಗೆ ಮಾಹಿತಿ ನೀಡಿದೆ. ಬಾಹ್ಯಾಕಾಶದಲ್ಲಿ ಮಕ್ಕಳಿಗೆ ಜನ್ಮ ನೀಡುವುದು ಒಂದು ಸವಾಲು. ಭೂಮಿಯ ಮೇಲಿನ ವಾತಾವರಣಕ್ಕೂ ಸೌರಮಂಡಲದ ವಾತಾವರಣಕ್ಕೂ ತುಲನೆ ಮಾಡಿದಾಗ ಬಾಹ್ಯಾಕಾಶದಲ್ಲಿ ಜೀವಿಯ ಉಗಮಕ್ಕೆ ವಿರುದ್ಧವಾದ ವಾತಾವರಣವನ್ನು ಹೊಂದಿದೆ. ಇಲ್ಲಿನ ಸೂಕ್ಷ್ಮ ಗುರುತ್ವಾಕರ್ಷಣೆ, ವಿಕಿರಣವು ಮಾನವ ಫಲವತ್ತತೆ ಹಾಗೂ ಗರ್ಭದಾರಣೆಗೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಉಲ್ಲೇಖಿಸಿದೆ. 

ಸಾಮಾನ್ಯವಾಗಿ ಸೌರಮಂಡಲದಲ್ಲಿ ಕೆಲವೊಮ್ಮೆ ತುಂಬಾ ಬಿಸಿ ಹಾಗೂ ಕೆಲವೊಮ್ಮೆ ಅತಿಯಾದ ಶೀತ ವಾತಾವರಣವನ್ನು ಹೊಂದಿರುತ್ತದೆ. ಅಂದರೆ ಭೂಮಿಯ ಮೇಲೆ ಹಗಲು ರಾತ್ರಿಯಾದಾಗ ತಾಪಮಾನದಲ್ಲಿ ತೀವ್ರ ಬದಲಾವಣೆಯಾಗಿ ಬಿಸಿ ಹಾಗೂ ಶೀತ ವಾತಾವರವನ್ನುಂಟು ಮಾಡುತ್ತದೆ. ಇದು ಒಂದು ಕಡೆಯಾದರೆ ಇನ್ನೂ ಜೀವಕೋಶಗಳನ್ನು ನಾಶಮಾಡುವ ಉಪ್ಪು, ಆಮ್ಲ ಹಾಗೂ ವಿಕಿರಣ ಮಗುವಿನ ಬೆಳವಣಿಗೆಗೆ ಹಾನಿಯುನ್ನುಂಟು ಮಾಡುತ್ತದೆ. ಉದಾಹರಣೆಗೆ ಸಹಾರಾ ಮರುಭೂಮಿಯಂತೆ ಬಿಸಿ ಹಾಗೂ ಅಂಟಾರ್ಕ್ಟಿಕಾದಂತೆ ಶೀತದ ಅನುಭವ ಕೊಡುತ್ತದೆ ಎನ್ನಲಾಗಿದೆ. 

ಕಡಿಮೆ ಗುರುತ್ವಾಕರ್ಷಣೆಯಿಂದಾಗಿ ಮಾನವನ ದೇಹದಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಗೂ ಅಡ್ಡಿಯುಂಟಾಗುತ್ತದೆ. ಸೂಕ್ಷ್ಮ ಗುರುತ್ವಾಕರ್ಷಣೆ ಮತ್ತು ವಿಕಿರಣವು ವೀರ್ಯ ಚಲನಶೀಲತೆ, ಅಂಡಾಣು ಬೆಳವಣಿಗೆ ಮತ್ತು ಹಾರ್ಮೋನುಗಳ ಸಮತೋಲನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

Space Station 4

ಬಾಹ್ಯಾಕಾಶದಲ್ಲಿ  ಮಹಿಳೆ ಮಗುವಿಗೆ ಜನ್ಮ ನೀಡಬಹುದಾ?
ಇಂಟರ್ನ್ಯಾಷನಲ್ IVF ಇನಿಶಿಯೇಟಿವ್ ಇಂಕ್‌ನ ಕ್ಲಿನಿಕಲ್ ಭ್ರೂಣಶಾಸ್ತ್ರಜ್ಞ ಗೈಲ್ಸ್ ಪಾಮರ್ ಈ ಕುರಿತು ಅಭಿಪ್ರಾಯಪಟ್ಟಿದ್ದಾರೆ. ವಿಕಿರಣದಿಂದಾಗಿ ಉಂಟಾಗುವ ಸಮಸ್ಯೆ, ಗರ್ಭದಾರಣೆ ಸಮಯದಲ್ಲಿ ಕೆಲವು ಅಪಾಯ ಉಂಟಾಗಬಹುದು ಎಂದಿದ್ದಾರೆ. 

ಅಪಾಯಗಳೇನು?

  • ಕಾಸ್ಮಿಕ್ ವಿಕಿರಣವು ಡಿಎನ್‌ಎ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
  • ಗುರುತ್ವಾಕರ್ಷಣೆ ಕೊರತೆಯು ಮಗುವಿನ ಹಾಗೂ ತಾಯಿಯ ದೇಹದಲ್ಲಾಗುವ ಬೆಳವಣಿಗೆ ಪ್ರಕ್ರಿಯೆಗಳಿಗೆ ಅಡ್ಡಿಯಾಗುತ್ತದೆ. 
  • ಇನ್ನೂ ಭೂಮಿಯಿಂದ ಹೊರಗೆ ಗಂಡು ಮತ್ತು ಹೆಣ್ಣಿನ ಫಲವತ್ತತೆ ಸಂತಾನೋತ್ಪತ್ತಿ ಪ್ರಕ್ರಿಯೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಹೀಗಾಗಿ ಗರ್ಭದಾರಣೆಯ ಸಂದರ್ಭದಲ್ಲಿ ಯಾವ ರೀತಿ ಬದಲಾವಣೆಯಾಗುತ್ತದೆ ಎನ್ನುವುದು ತಜ್ಞರ ಪ್ರಶ್ನೆಯಾಗಿದೆ. 
  • ಜೊತೆಗೆ ದೀರ್ಘಾವಧಿಯ ಬಾಹ್ಯಾಕಾಶ ಪ್ರಯಾಣವಾದರೆ ಅದು ಇನ್ನಷ್ಟು ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. 
  • ಬಾಹ್ಯಾಕಾಶ ಯಾತ್ರೆಯಿಂದ ಬಂಜೆತನ ಉಂಟಾಗುವ ಸಾಧ್ಯತೆಯಿರುತ್ತದೆ ಎನ್ನಲಾಗಿದೆ. 
  • ಸಂಶೋಧನೆ ಹೆಚ್ಚುತ್ತಿದ್ದರೂ ಕೂಡ ಈ ಸಂಬಂಧ ಸ್ಪಷ್ಟ ಮಾರ್ಗಸೂಚಿಗಳು ಇನ್ನೂ ಲಭ್ಯವಿಲ್ಲ.

Space Station

ಮಹಿಳೆ ಬಾಹ್ಯಾಕಾಶದಲ್ಲಿ ಗರ್ಭಧಾರಣೆಗೆ ಸಂಬಂಧಿಸಿದಂತೆ ಸಂಶೋಧಕರಿಗೆ ಕೆಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಶೂನ್ಯ ಗುರುತ್ವಾಕರ್ಷಣೆ ಇರುವ ಈ ಪ್ರದೇಶದಲ್ಲಿ ಗರ್ಭಿಣಿ ಮಹಿಳೆ ಹಾಗೂ ಮಗುವಿಗೆ ಹಾರ್ಮೋನ್‌ ಸಮಸ್ಯೆಯುಂಟಾಗುವ ಸಾಧ್ಯತೆಯಿರುತ್ತದೆ. 

ವೈದ್ಯಕೀಯ ಸಹಾಯದೊಂದಿಗೆಯೂ ಕೂಡ  ಹಾರ್ಮೋನ್ಸ್‌ಗಳ ಮೇಳೆ ಪರಿಣಾಮ ಬೀರುತ್ತದೆ. ಮಗು ಜನನದ ನಂತರ ಅದರ ಆರೋಗ್ಯದಲ್ಲಿ ಕೆಲವು ಬದಲಾವಣೆಗಳಾಗುತ್ತದೆ. ಎಂದು ತಿಳಿದುಬಂದಿದೆ. ಮೊದಲಿಗೆ ಹೃದಯ ಸಂಬಂಧೀ ಕಾಯಿಲೆಗೆ ಇದು ಕಾರಣವಾಗುತ್ತದೆ. ಹೃದಯದ ಬಡಿತದಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿದೆ. 

ಇನ್ನೂ ಇದರ ಹೊರತಾಗಿ ವಿಕಿರಣದಿಂದಾಗಿ ಋತುಚಕ್ರದಲ್ಲಿಯೂ ಬದಲಾವಣೆಯಾಗುವದರ ಜೊತೆಗೆ ಸಮಸ್ಯೆಯುಂಟಾಗುತ್ತದೆ. ಕ್ಯಾನ್ಸರ್‌ ಅಪಾಯವನ್ನು ಹೆಚ್ಚಿಸುತ್ತದೆ.

Space Station 2

ಬಾಹ್ಯಾಕಾಶದಲ್ಲಿ ಗರ್ಭಧಾರಣೆ ಸಾಧ್ಯವೇ?
ಬಾಹ್ಯಾಕಾಶದಲ್ಲಿ IVF, ICSI ಸಂತಾನೋತ್ಪತ್ತಿ ತಂತ್ರಜ್ಞಾನದಿಂದಾಗಿ ಮಗು ಪಡೆಯಬಹುದಾಗಿದೆ. 

IVF (In Vitro Fertilization) ಮಹಿಳೆಯ ಅಂಡಾಶಯದಿಂದ ಮೊಟ್ಟೆಯನ್ನು ಗಳನ್ನು ಹೊರತೆಗೆದು, ಪ್ರಯೋಗಾಲಯದಲ್ಲಿಪುರುಷನ ವೀರ್ಯದೊಂದಿಗೆ ಸಂಯೋಜಿಸಿ ಫಲವತ್ತಾದ ಭ್ರೂಣವನ್ನು ಗರ್ಭಾಶಯಕ್ಕೆ ವರ್ಗಾಯಿಸುವ ಪ್ರಕ್ರಿಯೆಯಿದಾಗಿದೆ.  ವೀರ್ಯಾಣುಗಳ ಕೊರತೆ ಅಥವಾ ಬಂಜೆತನ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರವಾಗಿದ್ದು, ಬಾಹ್ಯಾಕಾಶದಲ್ಲಿ ಈ ಸಂತಾನೋತ್ಪತ್ತಿ ತಂತ್ರಜ್ಞಾನದ ಮೂಲಕ ಗರ್ಭಧರಿಸಬಹುದು. 

ICSI (Intracytoplasmic Sperm Injection) ಇದರಲ್ಲಿ ನೇರವಾಗಿ ಒಂದು ವೀರ್ಯವನ್ನು ಪ್ರೌಢಾವಸ್ಥೆಯಲ್ಲಿರುವ ಅಂಡಾಣುವಿನಲ್ಲಿ ನೇರವಾಗಿ ಸೇರಿಸಿದಾಗ ಗರ್ಭದಾರಣೆಗೆ ನೆರವಾಗುತ್ತದೆ.ಇದನ್ನೇ Assisted Reproductive Technology (ART) ಎನ್ನಲಾಗುತ್ತದೆ.

Space Station 1

ಪ್ರಸ್ತುತ ಗರ್ಭಾವಸ್ಥೆಯಲ್ಲಿ ಬಾಹ್ಯಾಕಾಶಕ್ಕೆ ತೆರಳುವುದನ್ನು ನಿಷೇಧಿಸಲಾಗಿದೆ. ಯಾಕೆಂದರೆ ಬಾಹ್ಯಾಕಾಶ ಯಾನ ಹೆಚ್ಚಾದಂತೆ ಗರ್ಭಧಾರಣೆ ಮೇಲೆ ಪರಿಣಾಮ ಬೀರುವುದರ ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. 

ಸಾಮಾನ್ಯವಾಗಿ ಬಾಹ್ಯಾಕಾಶಕ್ಕೆ ತೆರಳುವ ಮಹಿಳಾ ಗಗನಯಾತ್ರಿಗಳು ತಮ್ಮ ಋತುಚಕ್ರ ತಡೆಗೆ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ರಕ್ತಸ್ರಾವವನ್ನು ತಡೆಗಟ್ಟಲು ಹಾರ್ಮೋನ್ ಇಂಪ್ಲಾಂಟ್‌ಗಳನ್ನು ಬಳಸುತ್ತಾರೆ. ಇವುಗಳಿಂದ ವರ್ಷಗಳವರೆಗೆ  ಋತುಚಕ್ರವನ್ನು ತಡೆಯಬಹುದಾಗಿದೆ. ಇದರಿಂದ ಹೆಚ್ಚಿನ ಮಾತ್ರೆಗಳನ್ನು ಕೊಂಡೊಯ್ಯುವ ಅವಶ್ಯಕತೆ ಇರುವುದಿಲ್ಲ. 

TAGGED:PregnencySpace Stationಗರ್ಭದಾರಣೆಬಾಹ್ಯಾಕಾಶ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Mantralaya Hundi Counting 1 1
Districts

ಬಿರು ಬೇಸಿಗೆಯಲ್ಲೂ ಮಂತ್ರಾಲಯಕ್ಕೆ ಭಕ್ತರ ದಂಡು – 22 ದಿನದಲ್ಲಿ 3.25 ಕೋಟಿ ಕಾಣಿಕೆ ಸಂಗ್ರಹ

Public TV
By Public TV
42 minutes ago
Trump announces three week extension of Israel Lebanon ceasefire
Latest

ಇಸ್ರೇಲ್-ಲೆಬನಾನ್ ಕದನ ವಿರಾಮ 3 ವಾರಗಳವರೆಗೆ ವಿಸ್ತರಣೆ: ಟ್ರಂಪ್‌ ಸಂಧಾನ ಯಶಸ್ವಿ

Public TV
By Public TV
56 minutes ago
Bidar Farmers Death
Bidar

ಸಿಡಿಲು ಬಡಿದು ಬೀದರ್‌ನ ಇಬ್ಬರು ಯುವ ರೈತರು ಸಾವು

Public TV
By Public TV
1 hour ago
Weather 1
Bagalkot

ರಾಜ್ಯದಲ್ಲಿ ಏ.29ರವರೆಗೆ, ಬೆಂಗ್ಳೂರಲ್ಲಿ ಮೇ 5ರವರೆಗೆ ಮಳೆ ಮುನ್ಸೂಚನೆ

Public TV
By Public TV
1 hour ago
Chikkamagaluru marriage
Chikkamagaluru

ಕಾಫಿನಾಡಲ್ಲೊಂದು ಅಪರೂಪದ ಮದ್ವೆ – ATMನಿಂದ ಲವ್ ಶುರು, ಈಗ ಜಾತಿ ಸಂಕೋಲೆ ಮೀರಿ ಕೈಹಿಡಿದ ಜೋಡಿ

Public TV
By Public TV
2 hours ago
Chinnaswamy Stadium RCB
Bengaluru City

ಚಿನ್ನಸ್ವಾಮಿಯಲ್ಲಿ ಇಂದು ಬಿಗ್ ಫೈಟ್ – ಆರ್‌ಸಿಬಿ ತವರು ನೆಲದ ಕೊನೆಯ ಲೀಗ್ ಪಂದ್ಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌

Public TV
By Public TV
2 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?