ಬಿಗ್ಬಾಸ್ ಮನೆಯಲ್ಲಿ ಹಿಂಗೆ ಕಿತ್ತಾಡಿ ಹಂಗೆ ಒಂದಾಗುವವರು ಯಾರು ಎಂದರೆ ಅದು ಸೋನು ಮತ್ತು ರಾಕೇಶ್ ಅಂತಾನೇ ಹೇಳಬಹುದು. ಸೋನು ಬಾಯಿ ಸರಿ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲವೊಂದು ಸಲ ಬೀಪ್ ಸೌಂಡ್ ಶಬ್ಧಗಳೇ ಹೆಚ್ಚು ಬರುತ್ತವೆ. ಇನ್ನು ಕೆಲವೊಂದು ಸಲ ಮನಸ್ಸಿಗೆ ನಾಟುವಂತ ಶಬ್ಧಗಳು ಬರುತ್ತವೆ. ಇತ್ತೀಚೆಗೆ ಇದು ರಾಕಿಯನ್ನು ಬಿಟ್ಟಿಲ್ಲ. ಕಳೆದ ವಾರ ರಾಕಿ ನಾನೇನು ನಿಮ್ಮ ಮನೆ ಆಳ. ಇದೆಲ್ಲ ನನ್ನತ್ರ ಇಟ್ಟುಕೊಳ್ಳಬೇಡ ಅಂತ ಸೋನು ಮೇಲೆ ಎರಡು ಸಲ ರೇಗಿದ್ದರು. ಆಗ ನೋಡಿದವರು ಓ ಸೋನು ಅಂಡ್ ರಾಕಿ ಫ್ರೆಂಡ್ಶಿಪ್ ಇಲ್ಲಿಗೆ ಕಟ್ ಅಂತ ಎಂದುಕೊಂಡಿದ್ದರು. ಆಗಲೂ ಏನು ಆಗಲಿಲ್ಲ. ಇಬ್ಬರು ಮಾಮೂಲಿ ದೋಸ್ತರಾಗಿಯೇ ಮುಂದುವರೆದಿದ್ದರು.
Advertisement
ಇತ್ತೀಚೆಗೆ ಅಕ್ಷತಾ ಮತ್ತು ರಾಕಿ ಇಬ್ಬರು ಇದ್ದಾಗಲು ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಸೋನು ಹೇಳಿದ್ದರು. ಆಗ ದೊಡ್ಡ ಮನಸ್ತಾಪವೇ ಬಂದಿತ್ತು. ರಾಕಿ, ಅಕ್ಷತಾಗೆ ಸಮಾಧಾನ ಮಾಡಿದ್ದರು. ಆಗಲೂ ಇನ್ನು ಮುಂದೆ ಇವರಿಬ್ಬರು ಅಷ್ಟೇ ಅಂದುಕೊಂಡಿದ್ದರು. ಆದರೆ ಅದೇನೋ ಗೊತ್ತಿಲ್ಲ. ಅದೆಷ್ಟೇ ಮಾತು ಕತೆಗಳು ನಡೆದರೂ ಸೋನು ಹಾಗೂ ರಾಕಿಯನ್ನು ದೂರ ಮಾಡಲು ಆಗುತ್ತಿಲ್ಲ. ಇಬ್ಬರು ಮತ್ತೆ ಮತ್ತೆ ಬರೀ ಒಂದಾಗುವುದಲ್ಲ, ಕ್ಲೋಸ್ ಕೂಡ ಆಗುತ್ತಿದ್ದಾರೆ. ಈ ಮಧ್ಯೆ ರಾಕಿಗೆ ಸೋನು ಯಾಕೆ ಚೈತ್ರಾ ಬಳಿ ಮಾತನಾಡಿದರೆ ಸಹಿಸುವುದಿಲ್ಲ ಎಂಬ ಅನುಮಾನ ಮೂಡಿದೆ. ಇದನ್ನೂ ಓದಿ: ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!
Advertisement
Advertisement
ಈ ಪ್ರಶ್ನೆ ಈ ಥಿಂಕ್ ರಾಕಿಗೆ ಇಂದು ನಿನ್ನೆ ಬಂದಿರುವ ಪ್ರಶ್ನೆಯಲ್ಲ. ಸುಮಾರು ದಿನದ ಪ್ರಶ್ನೆ ಈಗ ಉತ್ತರ ಕಂಡುಕೊಳ್ಳಲು ಯೋಚಿಸಿದ್ದಾರೆ ಎನಿಸುತ್ತದೆ. ಬೆಡ್ ಮೇಲೆ ರಾಕಿ ಮಲಗಿದ್ದರು. ರಾಕಿ ಮೇಲೆ ಕುಳಿತು ಸೋನು ಮಸಾಜ್ ಮಾಡುತ್ತಾ ಇದ್ದರು. ಆಗ ನಿಧಾನವಾಗಿ ರಾಕಿ, ಇಲ್ಲಿ ಯಾರು ಇಲ್ಲ ಅಲ್ವಾ ಅಂತ ಕನ್ಫರ್ಮ್ ಮಾಡಿಕೊಂಡಿದ್ದಾರೆ. ಇಲ್ಲ ಎಂದಾಗ. ನಂಗೆ ಒಂದು ಸತ್ಯ ಹೇಳು ನಾನು ಯಾರಿಗೂ ಹೇಳಲ್ಲ. ನಾನು ಯಾರ ಜೊತೆ ಮಾತನಾಡಿದರು ನೀನು ಏನು ಅನ್ನಲ್ಲ. ಆದರೆ ಚೈತ್ರಾ ಅಕ್ಕ ಜೊತೆ ಮಾತನಾಡಿದರೆ ನಿನಗೆ ಇಷ್ಟವಾಗಲ್ಲ ಯಾಕೆ ಎಂದು ಕೇಳಿದ್ದಾರೆ. ಅದಕ್ಕೆ ಸೋನು, ಅದೇ ನನಗೂ ಗೊತ್ತಾಗುತ್ತಿಲ್ಲ. ಅವತ್ತೆ ಕೂತು ನಾನು ಕೂಡ ಥಿಂಕ್ ಮಾಡಿದ್ದೇನೆ. ಯಾರೇ ಆಗಲಿ ಅವರು ವಯಸ್ಸಿನ ತಕ್ಕಂತೆ ನಡೆದುಕೊಳ್ಳಬೇಕು. ನೀನು ಇನ್ನು ಯಂಗ್ ಹುಡುಗ. ಬೇರೆ ಹುಡುಗಿಯರ ಜೊತೆ ಇರುವುದು ಕಾಮನ್. ಹಾಗಂತ ಅವರು ಹಂಗೆ ಇರಬೇಕು ಅಂದರೆ ಎಂದು ಈ ಪ್ರಶ್ನೆ ಬೇಡ ಅಂತ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್ಗೆ ರಾಕೇಶ್ ಫುಲ್ ಶಾಕ್..!
Advertisement
ಆದರೆ ರಾಕಿಗೆ ಅದನ್ನು ತಿಳಿಯುವ ಕುತೂಹಲ. ಪ್ಲೀಸ್ ಪ್ಲೀಸ್ ಹೇಳು. ನನ್ನ ಬಗ್ಗೆ ಅವರು ಹೊರಗಡೆ ಏನೋ ಅಂದಿರುತ್ತಾರೆ. ಅದಕ್ಕೆ ನೀನು ಈ ಥರ ನಡೆದುಕೊಳ್ಳುತ್ತಾ ಇದ್ದೀಯಾ ಎಂದಾಗ, ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ, ಎಲ್ಲರ ಜೊತೆಗೂ ಚೆನ್ನಾಗಿಯೇ ಇರುತ್ತಾರೆ. ಅವತ್ತೇ ನೋಡು ಸ್ಲಿಪ್ಪರ್ ಕೊಡುವ ಅವಶ್ಯಕತೆಯೇ ಇರಲಿಲ್ಲ. ಅಚ್ಚಚ್ಚೋ ನನ್ನ ಮುದ್ದು, ನನ್ನ ಗುಂಡು, ನೀನ್ ನನ್ನ ಮಕ್ಕಳ ಥರ ಅಂತೆಲ್ಲಾ ಅಂದ್ರು ಉರಿದು ಹೋಗಿಬಿಟ್ಟಿತು. ಈಗ ಅದೇ ಸೈಜಿನ ಹವಾಯ್ ಚಪ್ಪಲಿ ತೆಗೆದುಕೊಂಡು ಬಂದು ವಾಶ್ ರೂಮಿಗೆ ಯೂಸ್ ಮಾಡುತ್ತೇನೆ ನೋಡು ಎಂದಿದ್ದಾರೆ.