ಬೆಳಗಾವಿ: ರೈತರು (Farmers) ಶಿವಸ್ವರೂಪಿಗಳು, ದೇವರ ಸಮಾನ, ಅವರ ಹಣ ತಿಂದ್ರೆ ಪ್ಯಾರಾಲಿಸಿಸ್ (ಸ್ಟ್ರೋಕ್ ಅಥವಾ ಪಾರ್ಶ್ವವಾಯು) (Paralysis) ಬರುತ್ತೆ, ರೈತರ ಹಣ ತಿಂದ ಮಾಲೀಕರು ಉದ್ಧಾರ ಆಗಲ್ಲ. ಅವರಿಗೆ ಮೋಸ ಮಾಡಬೇಡಿ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ (Laxman Savadi) ಸದನದಲ್ಲಿ ಮನವಿ ಮಾಡಿದರು.
ಬೆಳಗಾವಿಯ (Belagavi) ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದ ವೇಳೆ ಬಿಜೆಪಿ ಧರಣಿಯನ್ನು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಖಂಡಿಸಿದರು. ಇದನ್ನೂ ಓದಿ: Article 370: ಶೇಕ್ ಅಬ್ದುಲ್ಲಾ ಖುಷಿಪಡಿಸಲು ಜಾರಿಗೆ ತಂದಿದ್ದನ್ನು ಮೋದಿ ಧೈರ್ಯದಿಂದ ರದ್ದು ಮಾಡಿದ್ರು: ಯತ್ನಾಳ್
Advertisement
Advertisement
ಬಿಜೆಪಿ ಶಾಸಕರ (BJP MLAs) ವಿರುದ್ಧ ಕೆಂಡಾಮಂಡಲವಾದ ಲಕ್ಷ್ಮಣ್ ಸವದಿ ರೈತರ ಪರ ದನಿ ಎತ್ತಿದರು. ನಿಯಮ 69ರ ಅಡಿ ಕಬ್ಬು ಕಾರ್ಖಾನೆಗಳಲ್ಲಿ ಆಧುನಿಕ ತೂಕದ ಯಂತ್ರಗಳನ್ನು ಅಳವಡಿಸುವ ಬಗ್ಗೆ ಅಥಣಿ ಶಾಸಕ ಲಕ್ಷ್ಮಣ ಸವದಿ ಆರಂಭಿಸುತ್ತಿದ್ದಂತೆ ವಿಪಕ್ಷ ಶಾಸಕರು ಸದನದ ಬಾವಿಯಲ್ಲೇ ನಿಂತು ಧಿಕ್ಕಾರ ಕೂಗಿದರು. ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಸವದಿ ನಡುವೆ ಮಾತಿನ ಚಕಮಕಿಯೂ ನಡೆಯಿತು.
Advertisement
ಆಗ ಬಿಜೆಪಿ ಶಾಸಕರ ವಿರುದ್ಧ ಕಂಡಾಮಂಡಲವಾದ ಸವದಿ, ನೀವು ಕಬ್ಬು ಬೆಳೆಗಾರರ ವಿರೋಧಿಗಳು, ಉತ್ತರ ಕರ್ನಾಟಕದ ವಿರೋಧಿಗಳು, ಹೊರಗೆ ಹೋದರೆ ಜನ ಕಬ್ಬು ತಗೊಂಡು ನಿಮಗೆ ಹೊಡೆಯುತ್ತಾರೆ ಎಂದು ಎಚ್ಚರಿಸಿದರು. ಇದನ್ನೂ ಓದಿ: `ದಳಪತಿ’ಗಳಿಗೆ ಸೆಡ್ಡು ಹೊಡೆದ ಸಿ.ಎಂ ಇಬ್ರಾಹಿಂ ಬಣ- ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು ನೇಮಕ
Advertisement
ಮತ್ತೊಮ್ಮೆ ಚರ್ಚೆ ಮುಂದುವರಿಸಿದಾಗಲೂ ವಿಪಕ್ಷ ಶಾಸಕರು ಧಿಕ್ಕಾರ ಕೂಗಿ ಚರ್ಚೆಚೆ ಅಡ್ಡಿಪಡಿಸಿದರು. ಆಗ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ವಿರುದ್ಧ ಸಿಟ್ಟಿಗೆದ್ದ ಸವದಿ, ಶಿವಮೊಗ್ಗದವರು ಉತ್ತರ ಕರ್ನಾಟಕ ವಿರೋಧಿಗಳು ನಿನ್ನ ಯಾರು ಕೀಲಿ ಕೊಟ್ಟು ಇಲ್ಲಿಗೆ ಕೂಗಲು ಕಳಿಸಿದ್ದಾರೆ ಅಂತಾ ಗೊತ್ತಿದೆ, ಕೂಗು ಜೋರಾಗಿ ಕೂಗು ಎಂದು ಸಿಟ್ಟಿಗೆದ್ದರು. ಈ ಮಧ್ಯೆ ಚರ್ಚೆ ಮುಂದುವರಿಸುವಂತೆ ಸವದಿಗೆ ಸಭಾಧ್ಯಕ್ಷರು ಸೂಚಿಸಿದರು. ಇದಕ್ಕೆ ಈ ಹುಚ್ಚರ ಸಂತೆಯಲ್ಲಿ ಏನು ಮಾತಾಡೋದು? ಎಂದ ಸವದಿ, ನಿನಗೆ ಹುಚ್ಚು ನಾಯಿ ಕಚ್ಚಿದ್ಯಾ? ಹುಚ್ಚು ನಾಯಿ ಕಚ್ಚಿಸಿಕೊಂಡು ಬಂದಿದ್ಯಾ ಎಂದು ಬಿಜೆಪಿ ಶಾಸಕ ಚನ್ನಬಸಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರೈತರ ಹಣ ತಿಂದ್ರೆ ಪ್ಯಾರಾಲಿಸಿಸ್ (ಸ್ಟ್ರೋಕ್) ಆಗುತ್ತೆ, ರೈತರ ಹಣ ತಿಂದ ಮಾಲೀಕರು ಉದ್ಧಾರ ಆಗಲ್ಲ. ರೈತರು ದೇವರ ಸಮಾನ, ಶಿವಸ್ವರೂಪಿಗಳು. ಅವರಿಗೆ ಮೋಸ ಮಾಡಬೇಡಿ ಸಲಹೆ ನೀಡಿದರು.