ಬೆಳಗಾವಿ: ಶೇಕ್ ಅಬ್ದುಲ್ಲಾ ಖುಷಿಪಡಿಸಲು ನೆಹರೂ ಅವರು ಆರ್ಟಿಕಲ್ 370 ಜಾರಿಗೆ ತಂದಿದ್ದರು. ಆದರೆ ಮೋದಿ (Narendra Modi) ಅವರು ಧೈರ್ಯದಿಂದ ಆರ್ಟಿಕಲ್ 370 (Article 370) ರದ್ದು ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ (BasanaGouda Patil Yatnal) ಹೇಳಿದ್ದಾರೆ.
ಬೆಳಗಾವಿ ಸುವರ್ಣ ಸೌಧದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ (Pakistan) ಏಜೆಂಟ್ ನಂತೆ ವರ್ತಿಸುತ್ತಿದ್ದ ಲೋಕಸಭೆ ಸದಸ್ಯನೊಬ್ಬ 370 ರದ್ದು ಪ್ರಶ್ನಿಸಿ ಸುಪ್ರಿಂಕೋರ್ಟಿಗೆ ಹೋಗಿದ್ದ. ಇಂದು ಸುಪ್ರಿಂಕೋರ್ಟ್ (Supreme Court) ಮೋದಿ ಸರ್ಕಾರ ರದ್ದು ಮಾಡಿದ್ದನ್ನ ಮಾನ್ಯ ಮಾಡಿದೆ. ಶ್ಯಾಮ್ ಪ್ರಸಾದ್ ಮುಖರ್ಜಿ ಕನಸು-ನನಸು ಮಾಡಿದ್ದಕ್ಕೆ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
Advertisement
Advertisement
ಜನ ಸಂಘ ಹುಟ್ಟಿದ್ದು ಆರ್ಟಿಕಲ್ 370 ತೆಗೆದುಹಾಕಬೇಕೆಂದು. ಯಾಕೆಂದರೆ ಒಂದು ದೇಶದಲ್ಲಿ ಎರಡು ಧ್ವಜ ಎರಡು ಸಂವಿಧಾನ ಇರಬಾರದು ಎಂದು ಹೇಳಿದರು. ಇದನ್ನೂ ಓದಿ: Article 370 Verdict – ಕೇಂದ್ರದ ಎಲ್ಲಾ ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ: ಸುಪ್ರೀಂ ಐತಿಹಾಸಿಕ ತೀರ್ಪಿನಲ್ಲಿ ಏನಿದೆ?
Advertisement
ಇದೇ ವೇಳೆ ಮುಸ್ಲಿಂ ಸ್ಪೀಕರ್ ಕುರಿತು ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಮೀರ್ ಹೇಳಿಕೆ ಸಂವಿಧಾನಕ್ಕೆ ಮಾಡಿದ ಅವಮಾನ. ಸ್ಪೀಕರ್ ಅವರು ಪೀಠಕ್ಕೆ ಬಂದಾಗ ಎಲ್ಲರೂ ಗೌರವ ಕೊಡ್ತೀವಿ. ಅದು ಅಂಬೇಡ್ಕರ್ ಸಂವಿಧಾನ ಹೇಳಿದೆ. ಆದರೆ ಸ್ಪೀಕರ್ ಸ್ಥಾನವನ್ನ ಒಂದು ಜಾತಿಗೆ ಮಾತ್ರ ಸೀಮಿತ ಮಾಡಿದ್ದಾರೆ. ಜಮೀರ್ ಹೇಳಿಕೆ ತಪ್ಪು ಅಂತ ಒಂದು ಮಾತು ಕೂಡ ಸ್ಪೀಕರ್ ಹೇಳಿಲ್ಲ. ಅದು ತಪ್ಪು ಎಂದು ಜಮೀರ್ ರನ್ನ ಉಚ್ಛಾಟನೆ ಮಾಡಬೇಕಿತ್ತು. ಉಚ್ಛಾಟನೆ ಮಾಡಿದ್ರೆ ಸ್ಪೀಕರ್ ಗೌರವ ಹೆಚ್ಚಾಗುತ್ತಿತ್ತು ಎಂದು ಹೇಳಿದರು.