– ಪ್ರಿಯಾಂಕ ಬಂಧನ, ರಾಹುಲ್ ಭೇಟಿಗೆ ತಡೆ
ಲಕ್ನೋ: ಉತ್ತರಪ್ರದೇಶದಲ್ಲಿ ಕೇಂದ್ರ ಸಚಿವನ ಮಗ ಕಾರು ಹತ್ತಿಸಿ ನಾಲ್ವರು ಹತ್ಯೆಗೈದಿದ್ದ ಪ್ರಕರಣ ಸಂಬಂಧ ಕೇಂದ್ರ ಗೃಹ ಸಚಿವ ಅಜಯ್ ಮಿಶ್ರಾನ ಮಗ ಆಶಿಶ್ ಮಿಶ್ರಾ ವಿರುದ್ಧ ಎಫ್‍ಐಆರ್ ದಾಖಲಾಗಿದೆಯಾದರೂ ಇನ್ನೂ ಆತನನ್ನು ಪೊಲೀಸರು ಬಂಧಿಸಿಲ್ಲ. ಆ ಜೀಪ್ ನನ್ನದೇ ಎಂದಿರುವ ಸಚಿವ, ಆದರೆ ಮಗ ಕಾರಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.
ಇತ್ತ ಲಖೀಂಪುರ್ ಖೇರಿಗೆ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ನಿಯೋಗ ಭೇಟಿ ನೀಡುತ್ತಿದೆ. ಆದರೆ ರಾಹುಲ್ ನಿಯೋಗಕ್ಕೆ ಉತ್ತರಪ್ರದೇಶ ಸರ್ಕಾರ ಅನುಮತಿ ನಿರಾಕರಿಸಿದೆ. ಇದನ್ನೂ ಓದಿ: ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR
ಈ ನಡುವೆ ಲಖೀಂಪುರ್ ಖೇರಿ ಭೇಟಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು 2 ದಿನ ಗೃಹ ಬಂಧನದಲ್ಲಿಟ್ಟಿದ್ದ ಯೋಗಿ ಆದಿತ್ಯನಾಥ್ ಸರ್ಕಾರ ಈಗ ಬಂಧನಕ್ಕೆ ಒಳಪಡಿಸಿದ್ದು, ಪ್ರಿಯಾಂಕ ವಿರುದ್ಧ ಎಫ್‍ಐಆರ್ ದಾಖಲಿಸಿದೆ. ಆದರೆ ಪ್ರಿಯಾಂಕಾ ಗೃಹ ಬಂಧನದಲ್ಲಿಟ್ಟಿರುವ ಪೊಲೀಸರ ಕ್ರಮದ ಬಗ್ಗೆ ಖಂಡನೆ ವ್ಯಕ್ತವಾಗಿದೆ. ಇದನ್ನೂ ಓದಿ: ರೈತರ ಮೇಲೆ ಕಾರು ಹತ್ತಿಸಿದ ಕೇಂದ್ರ ಸಚಿವನ ಮಗ – ನಾಲ್ವರು ರೈತರು ಸೇರಿ 8 ಮಂದಿ ಸಾವು
ಗೃಹ ಬಂಧನದಿಂದಲೇ ಪ್ರಿಯಾಂಕಾ ಉತ್ತರಪ್ರದೇಶದಲ್ಲಿರುವ ತಮ್ಮ ಕಾರ್ಯಕರ್ತರಿಗೆ ಆಡಿಯೋ ಸಂದೇಶ ರವಾನಿಸಿದ್ದಾರೆ. ನಿನ್ನೆ ಲಖೀಂಪುರ್‍ಖೇರಿಗೆ ಭೇಟಿ ನೀಡಲು ಬಂದಿದ್ದ ಛತ್ತೀಸ್‍ಗಢ ಸಿಎಂ ಭೂಪೇಂದ್ರ ಸಿಂಗ್ ಬಘೇಲ್‍ಗೂ ಪೊಲೀಸರು ಅನುಮತಿ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಬಘೇಲ್ ವಿಮಾನ ನಿಲ್ದಾಣದಲ್ಲಿಯೇ ಧರಣಿ ಕೂತಿದ್ದರು. ಆದರೆ ಟಿಎಂಸಿ ಸಂಸದರ ನಿಯೋಗಕ್ಕೆ ಭೇಟಿಗೆ ಅನುಮತಿ ನೀಡಲಾಗಿದೆ. ಇದನ್ನೂ ಓದಿ: ಗೆಸ್ಟ್ ಹೌಸ್‌ನಲ್ಲಿ ಕಸ ಗುಡಿಸುತ್ತಿರೋ ಪ್ರಿಯಾಂಕಾ ಗಾಂಧಿ ವೀಡಿಯೋ ವೈರಲ್