ಬೆಂಗಳೂರು: ದಕ್ಷಿಣ ಭಾರತದ ಹೆಸರಾಂತ ಸಂಗೀತ ಕಂಪನಿ ಲಹರಿ ಮ್ಯೂಸಿಕ್ ಮತ್ತೊಂದು ದಾಖಲೆ ಬರೆದಿದ್ದು, ಯೂಟ್ಯೂಬ್ ಗೋಲ್ಡನ್ ಬಟನ್ ಪ್ರಶಸ್ತಿ ಸಿಕ್ಕಿದೆ.
ಯೂಟ್ಯೂಬ್‌ನಲ್ಲಿರುವ Lahari Bhavageethegalu & Folk – T-Series ಖಾತೆಯನ್ನು 10 ಲಕ್ಷ ಮಂದಿ ಸಬ್‌ಸ್ಕ್ರೈಬ್ ಮಾಡಿದ ಹಿನ್ನೆಲೆಯಲ್ಲಿ ಯೂಟ್ಯೂಬ್‌ನಿಂದ ಗೋಲ್ಡನ್ ಬಟನ್ ಗೌರವ ಸಿಕ್ಕಿದೆ.
Advertisement
Advertisement
ಭಾವಗೀತೆಗಳು ಮತ್ತು ಜಾನಪದ ಗೀತೆಗಳಿಗೆ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ 10 ಲಕ್ಷ ಚಂದಾದಾರರಾಗಿದ್ದಕ್ಕೆ ಆಗಿದ್ದಕ್ಕೆ ಈ ಅವಾರ್ಡ್ ಸಿಕ್ಕಿದೆ. ಸಮಸ್ತ ಕೇಳುಗರಿಗೆ ಲಹರಿ ಸಂಸ್ಥೆ ಧನ್ಯವಾದಗಳನ್ನು ಅರ್ಪಿಸಿದೆ. ಇದನ್ನೂ ಓದಿ: 29 ದಾಖಲೆಗಳನ್ನು ಬರೆದು ರಾಕೆಟ್ ವೇಗದಲ್ಲಿ ಮುನ್ನುಗ್ಗುತಿದೆ ಕೆಜಿಎಫ್ 2: ದಾಖಲೆಗಳ ಪಟ್ಟಿ ಇದೆ
Advertisement
ಇಲ್ಲಿಯವರೆಗೂ ಈ ಖಾತೆಯಲ್ಲಿ 2,883 ಹಾಡುಗಳನ್ನು ಅಪ್ಲೋಡ್ ಮಾಡಲಾಗಿದೆ. ಕನ್ನಡದ ಪ್ರಸಿದ್ಧ ಭಾವಗೀತೆಗಳನ್ನು ನೀವು ಲಹರಿ ಕಂಪನಿಯ Lahari Bhavageethegalu & Folk – T-Series ಯೂಟ್ಯೂಬ್ ಚಾನೆಲ್‌ನಲ್ಲಿ ಆಲಿಸಬಹುದು.