ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ ನ ಕೆಜಿಎಫ್ 2 ಸಿನಿಮಾ ಐದನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ ಅದು 29 ದಾಖಲೆಗಳನ್ನು ಮಾಡಿದೆ. ಆ ದಾಖಲೆಗಳನ್ನು ಭಾರತದ ಯಾವ ಚಿತ್ರಗಳು ಮಾಡಿಲ್ಲ ಎನ್ನುವುದು ವಿಶೇಷ. ಬಿಡುಗಡೆಯಾದ ಅಷ್ಟೂ ಭಾಷೆಗಳಲ್ಲೂ ಕೋಟಿ ಕೋಟಿ ಸಂಪಾದನೆ ಮಾಡುತ್ತಿದೆ. ಈವರೆಗೂ ಎಲ್ಲಾ ರೆಕಾರ್ಡ್ ಗಳನ್ನು ಮುರಿದಿರುವ ಕೆಜಿಎಫ್ 2, ಮುಂದೆ ಯಾರೂ ಮುರಿಯದಂತಹ ದಾಖಲೆಯನ್ನೂ ಮಾಡುತ್ತಿದೆ. ಇದನ್ನೂ ಓದಿ : ಭಾವಿ ಪತಿಯ ತಂದೆ ನಿಧನ: ನಟಿ ಕಾವ್ಯ ಶಾ ಮದುವೆ ಮುಂದೂಡಿಕೆ
Advertisement
ಏ.14ರ ಗುರುವಾರ ಬಿಡುಗಡೆಯಾದ ಕೆಜಿಎಫ್ 2 ದಿನದಿಂದ ದಿನಕ್ಕೆ ಬಾಕ್ಸ್ ಆಫೀಸಿನ ಕ್ರೇಜ್ ಏರಿಸುತ್ತಲೇ ಇದೆ. ನಾಲ್ಕು ದಿನಗಳ ಕಾಲ ರಜೆ ಸಿಕ್ಕ ಕಾರಣಕ್ಕಾಗಿ ರಾಕಿಭಾಯ್ ಮತ್ತಷ್ಟು ಜೇಬು ತುಂಬಿಸಿಕೊಳ್ಳುತ್ತಿದ್ದಾನೆ. ಕನ್ನಡ ಸಿನಿಮಾವೊಂದು ವಿಶ್ವಮಟ್ಟದಲ್ಲಿ ಈ ರೀತಿ ದುಡ್ಡು ಮಾಡುತ್ತಿರುವುದು ಅನೇಕ ಸಿನಿಮಾ ರಂಗದ ನಿರ್ಮಾಪಕರಿಗೆ ಹೊಸದೊಂದು ಮಾರ್ಗ ಕಾಣಿಸಿದಂತಾಗಿದೆ. ಇದನ್ನೂ ಓದಿ : ನಾನೇಕೆ ಡ್ರಗ್ಸ್ ತಗೆದುಕೊಳ್ಳುತ್ತಿದ್ದೆ? ಅಸಲಿ ಕಾರಣ ಬಿಚ್ಚಿಟ್ಟ ಸಂಜಯ್ ದತ್
Advertisement
Advertisement
ದಾಖಲೆಗಳು ಯಾವವು?
Advertisement
ಬಾಲಿವುಡ್ ನಲ್ಲಿ ರೆಕಾರ್ಡ್ ಓಪನರ್ ಸಿನಿಮಾ
ಬಾಲಿವುಡ್ ನಲ್ಲಿ ವಾರಾಂತ್ಯದ ಕಲೆಕ್ಷನ್ ನಲ್ಲಿ ದಾಖಲೆ
ಬಾಲಿವುಡ್ ನಲ್ಲಿ ಒಂದೇ ದಿನದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
ಬಾಲಿವುಡ್ ನಲ್ಲಿ ಎರಡನೇ ದಿನವೂ ಅತೀ ಹೆಚ್ಚು ದುಡ್ಡು ಮಾಡಿದ ಚಿತ್ರ.
ಬಾಲಿವುಡ್ ನಲ್ಲಿ ಭಾನುವಾರವೂ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
ಬಾಲಿವುಡ್ ನಲ್ಲಿ ನಾಲ್ಕನೇ ದಿನವೂ ಅತೀ ಹೆಚ್ಚು ದುಡ್ಡು ತಂದುಕೊಟ್ಟ ಚಿತ್ರ
ಕರ್ನಾಟಕದಲ್ಲಿ ಮೊದಲ ದಿನವೇ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
ಕರ್ನಾಟದಲ್ಲಿ ವಾರಾಂತ್ಯಕ್ಕೆ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
ಕರ್ನಾಟಕದಲ್ಲಿ ಒಂದೇ ದಿನದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
ಕರ್ನಾಟಕದಲ್ಲಿ ಎರಡನೇ ದಿನವೂ ಅತೀ ಹೆಚ್ಚು ದುಡ್ಡು ಮಾಡಿದ ಚಿತ್ರ.
ಕರ್ನಾಟಕದಲ್ಲಿ ಭಾನುವಾರವೂ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
ಕರ್ನಾಟಕದಲ್ಲಿ ನಾಲ್ಕನೇ ದಿನವೂ ಅತೀ ಹೆಚ್ಚು ದುಡ್ಡು ತಂದುಕೊಟ್ಟ ಚಿತ್ರ
ಕರ್ನಾಟಕದಲ್ಲಿ ಭರ್ಜರಿ ಓಪನಿಂಗ್ ಪಡೆದ ಮೊದಲ ಚಿತ್ರ
ಕೇರಳದಲ್ಲಿ ಮೊದಲ ದಿನವೇ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
ಕೇರಳದಲ್ಲಿ ವಾರಾಂತ್ಯಕ್ಕೆ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
ಕೇರಳದಲ್ಲಿ ಒಂದೇ ದಿನದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
ಕೇರಳದಲ್ಲಿ ಎರಡನೇ ದಿನವೂ ಅತೀ ಹೆಚ್ಚು ದುಡ್ಡು ಮಾಡಿದ ಚಿತ್ರ.
ಕೇರಳದಲ್ಲಿ ಭಾನುವಾರವೂ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
ಕೇರಳದಲ್ಲಿ ನಾಲ್ಕನೇ ದಿನವೂ ಅತೀ ಹೆಚ್ಚು ದುಡ್ಡು ತಂದುಕೊಟ್ಟ ಚಿತ್ರ
ಕೇರಳದಲ್ಲಿ ಭರ್ಜರಿ ಓಪನಿಂಗ್ ಪಡೆದ ಮೊದಲ ಚಿತ್ರ
ಟಾಲಿವುಡ್ ನಲ್ಲಿ ಮೊದಲ ದಿನವೇ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
ಟಾಲಿವುಡ್ ನಲ್ಲಿ ವಾರಾಂತ್ಯಕ್ಕೆ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
ಟಾಲಿವುಡ್ ನಲ್ಲಿ ಒಂದೇ ದಿನದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
ಟಾಲಿವುಡ್ ನಲ್ಲಿ ಎರಡನೇ ದಿನವೂ ಅತೀ ಹೆಚ್ಚು ದುಡ್ಡು ಮಾಡಿದ ಚಿತ್ರ.
ಟಾಲಿವುಡ್ ನಲ್ಲಿ ಭಾನುವಾರವೂ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
ಟಾಲಿವುಡ್ ನಲ್ಲಿ ನಾಲ್ಕನೇ ದಿನವೂ ಅತೀ ಹೆಚ್ಚು ದುಡ್ಡು ತಂದುಕೊಟ್ಟ ಚಿತ್ರ
ಟಾಲಿವುಡ್ ನಲ್ಲಿ ಭರ್ಜರಿ ಓಪನಿಂಗ್ ಪಡೆದ ಮೊದಲ ಚಿತ್ರ
ಭಾರತದಲ್ಲಿ ಐ.ಎಮ್.ಎಎಕ್ಸ್ ನಲ್ಲಿ ವಾರಾಂತ್ಯಕ್ಕೆ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ
ಸಾರ್ವಕಾಲಿಕವಾಗಿ ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರ.