ಐವರು ನಾಯಕಿಯರ ಕಾರಣಕ್ಕೆ `ಟಾಕ್ಸಿಕ್’ ಚಿತ್ರ ಬಹುನಿರೀಕ್ಷೆ ಕ್ರಿಯೇಟ್ ಮಾಡಿತ್ತು. ಇದುವರೆಗೆ ಫಸ್ಟ್ ಲುಕ್ ಪೋಸ್ಟರ್ ಹೊರತಾಗಿ ನಾಯಕಿಯರ ಕ್ಯಾರೆಕ್ಟರ್ ಬಿಟ್ಟುಕೊಟ್ಟಿರಲಿಲ್ಲ ಯಶ್ (Rocking Star Yash). ಇದೀಗ ಲೇಡಿಸ್ & ಲೇಡಿಸ್ (Ladies and Ladies Treaser) ಎಂಬ ಟೀಸರ್ ರಿಲೀಸ್ ಮಾಡುವ ಮೂಲಕ ಐವರ ನಟಿಯರ ಆಕರ್ಷಕ ಲುಕ್ ಟೀಸರ್ ರಿಲೀಸ್ ಮಾಡಿದೆ ಟಾಕ್ಸಿಕ್ ಟೀಮ್ (Toxic).
ಟಾಕ್ಸಿಕ್ ಪ್ರಪಂಚದಲ್ಲಿ ಕಾಣುವ ಐವರು ನಟಿಯರೇ ನಯನತಾರಾ, ಕಿಯಾರಾ ಅಡ್ವಾನಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಹಾಗೂ ಹುಮಾ ಖುರೇಶಿ. ಇದೀಗ ಐವರ ಕ್ಯಾರೆಕ್ಟರ್‌ನ್ನ ಒಂದೇ ಟೀಸರ್‌ನಲ್ಲಿ ರಿವೀಲ್ ಮಾಡಲಾಗಿದೆ.ಇದನ್ನೂ ಓದಿ:`ಟಾ ಕ್ಸಿಕ್’ ಲೇಡಿಸ್ ಗ್ಯಾಂಗ್ ಬರ್ತಿದೆ ದಾರಿ ಬಿಡಿ
ಡೇಂಜರ್ ಸೂಚನೆಯೊಂದಿಗೆ ಆರಂಭವಾಗುವ ಆಗುವ ಟೀಸರ್ ಗ್ಲ್ಯಾಮರ್ ಜೊತೆ ಆ್ಯಕ್ಷನ್ ಒಳಗೊಂಡಿದೆ. ಸ್ಟೈಲಿಶ್ ಹಾಗೂ ಆಕರ್ಷಕ ಲುಕ್‌ನಲ್ಲಿ ಐವರೂ ನಟಿಯರು ಗಮನ ಸೆಳೆದಿದ್ದಾರೆ. ಮಕ್ಕಳೇ ದೂರವಿರಿ, ಪೋಷಕರೇ ನಿಮ್ಮ ಮಕ್ಕಳು ದೂರವಿರುವಂತೆ ನೋಡಿಕೊಳ್ಳಿ. ಅಜ್ಜಿಅಜ್ಜಿಯರು ಮಕ್ಕಳು ಮೊಮ್ಮಕ್ಕಳನ್ನು ದೂರವಿರುವಂತೆ ನೋಡಿಕೊಳ್ಳಿ. ಮುತ್ತಜ್ಜ, ಮುತ್ತಜ್ಜಿಯರು ನಿಮ್ಮ ರಿಸ್ಕ್ ಎಂಬ ಸೂಚನೆ ರೋಮಾಂಚನಕಾರಿಯಾಗಿದೆ.
ಮಹಿಳೆಯರ ಶಕ್ತಿ, ಆತ್ಮವಿಶ್ವಾಸ, ಸೌಂದರ್ಯವನ್ನು ಟೀಸರ್ ಅನಾವರಣ ಮಾಡಿದೆ. ಲೇಡಿಸ್ ಗ್ಯಾಂಗ್ ಜೊತೆ ಯಶ್ ಕೀಟಲೆ ಮಾಡುವ ಸಣ್ಣ ತುಣುಕು ಕ್ರೇಜಿಯಾಗಿದೆ. ಲೇಡಿಸ್ & ಲೇಡಿಸ್… ಒಬ್ಬೊಬ್ರೆ ಬರ್ತೀರಾ.? ಒಟ್ಟೊಟ್ಗೆ ಬರ್ತೀರಾ..?’ ಎಂದು ಕೇಳುವ ಯಶ್ ಡೈಲಾಗ್ ರೋಮಾಂಚನಕಾರಿಯಾಗಿದೆ. ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಶಿ ಒಂದೊಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡರೂ ಆಕರ್ಷಿಸಲು ಕಾಂಪ್ರಮೈಸ್ ಆದಂತೆ ಕಾಣುತ್ತಿಲ್ಲ.
ಅಂದಹಾಗೆ ಐವರ ನಟಿಯರ ಪಾತ್ರವನ್ನೂ ವಿಭಿನ್ನವಾಗಿ ತೋರಿಸಲಾಗಿದ್ದು, ಉಗ್ರ ರೂಪದಲ್ಲಿ ನಯನತಾರಾ, ಗ್ಲ್ಯಾಮರ್ ಅವತಾರದಲ್ಲಿ ಕಿಯಾರಾ, ಅಗ್ರೆಸ್ಸಿವ್ ಮಹಿಳೆಯಾಗಿ ತಾರಾ, ಗಟ್ಟಿಗಿತ್ತಿಯಾಗಿ ಕಾಣುವ ರುಕ್ಮಿಣಿ ವಸಂತ್, ಕಣ್ಣಲ್ಲೇ ಕುಕ್ಕುವ ಹುಮಾ ಖುರೇಶಿ. ಹೀಗೆ ಬೇರೆ ಬೇರೆ ಪ್ರಪಂಚದಲ್ಲಿ ಐವರು ನಟಿಯರ ಜೊತೆ ಯಶ್ ಉಪಸ್ಥಿತಿಯನ್ನು ಟೀಸರ್‌ನಲ್ಲಿ ನೋಡಬಹುದು. ಹಿಂದೆಲ್ಲಾ ಟಾಕ್ಸಿಕ್ ಪ್ರಪಂಚದಲ್ಲಿ ರಾಯ ಅಬ್ಬರ ನೋಡಿದ್ದಾಯ್ತು. ಇದೀಗ ಲೇಡಿಸ್ & ಲೇಡಿಸ್ ಅಖಾಡಕ್ಕಿಳಿದು ಮೋಡಿ ಮಾಡಲಾರಂಭಿಸಿದ್ದಾರೆ.ಇದನ್ನೂ ಓದಿ: ದರ್ಶನ್ ನೆನೆದು `ಹೇಗಾದರೂ ಮಾತಾಡು ನೀ’ ಎಂದ ವಿಜಯಲಕ್ಷ್ಮಿ
