ಮೈಸೂರು: ಶಿವರಾಮೇಗೌಡ ಸರ್ಕಸ್ನಲ್ಲಿನ ಜೋಕರ್. ಅವನಿಗೆ ಬುದ್ಧಿ ಕಲಿಸಲು ನಮಗೆ ಗೊತ್ತಿದೆ ಎಂದು ದಿವಂಗತ ಮಾದೇಗೌಡ ಅವರ ಪುತ್ರ ಮಧು ಮಾದೇಗೌಡ ವಾಗ್ದಾಳಿ ನಡೆಸಿದ್ದಾರೆ.
ಮಾದೇಗೌಡರಿಗೆ ಎಕ್ಕಡದಲ್ಲಿ ಹೊಡೆದಿದ್ದೆ ಎಂಬ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಆಡಿಯೋ ವಿಚಾರ ಸಂಬಂಧ ಮಧು ಪ್ರತಿಕ್ರಿಯಿಸಿದರು. ಮಂಡ್ಯ ಭಾಗದಲ್ಲಿ ಶಿವರಾಮೇಗೌಡನನ್ನು 420 ಶಿವರಾಮೇಗೌಡ ಅಂತಾ ಕರೆಯೋದು. ಶಿವರಾಮೇಗೌಡರಿಗೆ ಯಾವ ರೀತಿ ಬುದ್ಧಿ ಹೇಳಬೇಕೋ ಆ ರೀತಿಯೇ ನಾವು ಬುದ್ಧಿ ಹೇಳುತ್ತೇವೆ. ಅವರು ನಮ್ಮ ತಂದೆಯ ಕಾಲು ಹಿಡಿಯೋದನ್ನು ನಾನು ನೋಡಿದ್ದೇನೆ ಎಂದರು.
Advertisement
Advertisement
ಶಿವರಾಮೇ ಗೌಡರಿಗೆ ಎದರುಗಡೆ ನಿಂತು ಮಾತಾಡುವ ಶಕ್ತಿಯೂ ಇರಲಿಲ್ಲ. 60 ಕೋಟಿ ಖರ್ಚು ಮಾಡಿದರೂ ಶಿವರಾಮೇಗೌಡ ಚುನಾವಣೆಯಲ್ಲಿ ಗೆಲ್ಲಲ್ಲ. 420 ಕೆಲಸ ಮಾಡುವ ಕಾರಣ ಜನ ಹೊಡೆಯುತ್ತಾರೆ ಎಂದು ಎಸ್ಕರ್ಟ್ ಹಾಕಿಕೊಂಡು ತಿರುಗಾಡುತ್ತಾನೆ. ಅವರಿಗೆ ಬುದ್ಧಿ ಕಲಿಸುವುದು ನಮಗೆ ಗೊತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಗಂಡಂದಿರನ್ನು ಕಟ್ಟಿ ಹಾಕಿ ಹೆಂಡತಿಯರನ್ನು ರೇಪ್ ಮಾಡಿದ್ರು: ಸಿದ್ದರಾಮಯ್ಯ
Advertisement
Advertisement
ಶಿವರಾಮೇ ಗೌಡ ಆಡಿಯೋದಲ್ಲೇನಿದೆ..?
ನಾಗಮಂಗಲದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಆಗಿರುವ ಶಿವರಾಮೇಗೌಡರು ಜೆಡಿಎಸ್ ಮಹಿಳಾ ಕಾರ್ಯಕರ್ತೆ ಜೊತೆ ಮಾತಾಡಿರುವ ಆಡಿಯೋ ಎಲ್ಲೇಡೆ ಹರಿದಾಡುತ್ತಿದೆ. ಮಂಡ್ಯ ಲೋಕಸಭಾ ಎಲೆಕ್ಷನ್ಗೆ 30 ಕೋಟಿ ಖರ್ಚು ಮಾಡಿದ್ದೇನೆ. ಎಂಎಲ್ಸಿ ಎಲೆಕ್ಷನ್ಗೆ 27 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ. ಎಂಎಲ್ಎ ಎಲೆಕ್ಷನ್ಗೆ 30 ಕೋಟಿ ರೂಪಾಯಿ ಖರ್ಚು ಮಾಡ್ತೇನೆ. ನನ್ನದು 8 ಸ್ಕೂಲ್ ಇದೆ, ತಿಂಗಳಿಗೆ 3 ಕೋಟಿ ಸಂಬಳ ಕೊಡ್ತೇನೆ. ನಾಗಮಂಗಲ ಎಲೆಕ್ಷನ್ಗೂ 10 ತಿಂಗಳ ಸಂಬಳದಷ್ಟೇ ಹಣ ಬೇಕು. ಎಂಎಲ್ಎ ಎಲೆಕ್ಷನ್ಗೆ ಅಷ್ಟೂ ದುಡ್ಡು ಖರ್ಚು ಮಾಡುತ್ತೇನೆ ಎಂದು ಮಾತನಾಡಿಕೊಂಡು ಬಳಿಕ ದಿವಂಗತ ಮಾದೇಗೌಡರ ಬಗ್ಗೆ ನಿಂದಿಸಿರುವುದು ಆಡಿಯೋದಲ್ಲಿದೆ. ಇದನ್ನೂ ಓದಿ: MLA ಎಲೆಕ್ಷನ್ಗೆ 30 ಕೋಟಿ ಖರ್ಚು ಮಾಡ್ತೀನಿ – ಶಿವರಾಮೇಗೌಡ ಆಡಿಯೋ ವೈರಲ್