ಮಂಡ್ಯ: ಎಂಪಿ ಬೈಎಲೆಕ್ಷನ್‍ಗೆ 30 ಕೋಟಿ, ಎಂಎಲ್‍ಸಿ ಎಲೆಕ್ಷನ್‍ಗೆ 27 ಕೋಟಿ ಖರ್ಚು ಮಾಡಿದ್ದೇನೆ. ಎಂಎಲ್‍ಎ ಎಲೆಕ್ಷನ್‍ಗೆ 30 ಕೋಟಿ ಖರ್ಚು ಮಾಡುತ್ತೇನೆ ಎಂದು ಹೇಳಿರುವ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡರದ್ದು ಎನ್ನಲಾಗುತ್ತಿರುವ ಆಡಿಯೋ ಒಂದು ವೈರಲ್ ಆಗಿದೆ.
Advertisement
ನಾಗಮಂಗಲದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಆಗಿರುವ ಶಿವರಾಮೇಗೌಡರು, ಮಂಡ್ಯ ಲೋಕಸಭಾ ಎಲೆಕ್ಷನ್‍ಗೆ 30 ಕೋಟಿ ಖರ್ಚು ಮಾಡಿದ್ದೇನೆ. ಎಂಎಲ್‍ಸಿ ಎಲೆಕ್ಷನ್‍ಗೆ 27 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ. ಎಂಎಲ್‍ಎ ಎಲೆಕ್ಷನ್‍ಗೆ 30 ಕೋಟಿ ರೂಪಾಯಿ ಖರ್ಚು ಮಾಡ್ತೇನೆ ಎಂದು ಜೆಡಿಎಸ್ ಮಹಿಳಾ ಕಾರ್ಯಕರ್ತೆ ಜೊತೆ ಮಾತಾಡಿರುವ ಆಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇದನ್ನೂ ಓದಿ: ಮತ್ತೆ ಸಚಿವರ ವಿರುದ್ಧ ತಿರುಗಿ ಬಿದ್ದ ರೇಣುಕಾಚಾರ್ಯ – ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು
Advertisement
Advertisement
ನಾಗಮಂಗಲ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಶಿವರಾಮೇಗೌಡರು ಜೆಡಿಎಸ್ ಮಹಿಳಾ ಕಾರ್ಯಕರ್ತೆ ಜೊತೆ ಮಾತನಾಡಿರುವ ಆಡಿಯೋದಲ್ಲಿ, ನನ್ನದು 8 ಸ್ಕೂಲ್ ಇದೆ, ತಿಂಗಳಿಗೆ 3 ಕೋಟಿ ಸಂಬಳ ಕೊಡ್ತೇನೆ. ನಾಗಮಂಗಲ ಎಲೆಕ್ಷನ್‍ಗೂ 10 ತಿಂಗಳ ಸಂಬಳದಷ್ಟೇ ಹಣ ಬೇಕು. ಎಂಎಲ್‍ಎ ಎಲೆಕ್ಷನ್‍ಗೆ ಅಷ್ಟೂ ದುಡ್ಡು ಖರ್ಚು ಮಾಡುತ್ತೇನೆ ಎಂದು ಮಾತನಾಡಿಕೊಂಡು ಬಳಿಕ ದಿವಂಗತ ಮಾದೇಗೌಡರ ಬಗ್ಗೆ ನಿಂದಿಸಿರುವುದು ಆಡಿಯೋದಲ್ಲಿದೆ. ಇದನ್ನೂ ಓದಿ: ಸಿ.ಎಂ.ಇಬ್ರಾಹಿಂ ಬೆನ್ನಿಗೆ ಚೂರಿ ಹಾಕಿದ್ರು ಸಿದ್ದರಾಮಯ್ಯ: ಶ್ರೀರಾಮುಲು ಟೀಕೆ
Advertisement