ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದ (KRS Dam) ನೀರಿನ ಮಟ್ಟ ದಿನದಿಂದ ದಿನಕ್ಕೆ ಗಣನೀಯವಾಗಿ ಕುಸಿಯುತ್ತಿದ್ದು, ಸದ್ಯ ನೀರಿನ ಮಟ್ಟ 100 ಅಡಿಗೆ ತಲುಪಿದೆ. ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವುದು ಮತ್ತು ಮಳೆಯ ಕೊರತೆಯೇ ಈ ಇಳಿಕೆಗೆ ಪ್ರಮುಖ ಕಾರಣವಾಗಿದ್ದು, ಸಾರ್ವಜನಿಕರಲ್ಲಿ ಹಾಗೂ ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ.
ಜಲಾಶಯದ ಒಟ್ಟು ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, 49.452 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಜಲಾಶಯದಲ್ಲಿ ಕೇವಲ 100.88 ಅಡಿ ನೀರು ಮಾತ್ರ ಉಳಿದಿದ್ದು, ಒಟ್ಟು 23.507 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಈ ಮಳೆಗಾಲದಲ್ಲಿ ಜಲಾಶಯವು ಗರಿಷ್ಠ 110 ಅಡಿಗಳವರೆಗೆ ಮಾತ್ರ ಭರ್ತಿಯಾಗಿತ್ತು. ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಮಣಿಯಿತಾ ಸರ್ಕಾರ? – ಔಷಧಿ ದರ ನಮೂದು ಆದೇಶಕ್ಕೆ ತಾತ್ಕಾಲಿಕ ತಡೆ!
ಜಲಾಶಯಕ್ಕೆ ಒಳಹರಿವು ಅತ್ಯಂತ ಕನಿಷ್ಠ ಮಟ್ಟದಲ್ಲಿದ್ದು, ಹೊರಹರಿವು ಮಾತ್ರ ಮುಂದುವರಿದಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೂ ಹಾಗೂ ಬೆಳೆಗಳಿಗೆ ತೀವ್ರ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಹಾಸನ ಬಳಿಕ ಕೋಲಾರದಲ್ಲಿಯೂ ಅಧಿಕಾರಿಗಳ ಗುದ್ದಾಟ – ಅರಣ್ಯ ಒತ್ತುವರಿ ತೆರವು ವಿಚಾರದಲ್ಲಿ ವೈಮನಸ್ಸು
ಪ್ರಸ್ತುತ ಜಲಾಶಯದ ನೀರಿನ ವಿವರ:
ಗರಿಷ್ಠ ಮಟ್ಟ: 124.80 ಅಡಿ
ಪ್ರಸ್ತುತ ನೀರಿನ ಮಟ್ಟ: 100.88 ಅಡಿ
ಗರಿಷ್ಠ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
ಲಭ್ಯವಿರುವ ನೀರು: 23.507 ಟಿಎಂಸಿ
ಒಳಹರಿವು: 574 ಕ್ಯೂಸೆಕ್
ಹೊರಹರಿವು: 2658 ಕ್ಯೂಸೆಕ್

