– ಐಎಎಸ್ ಅಧಿಕಾರಿ ವರ್ಸಸ್ ಐಎಫ್ಎಸ್ ಫೈಟ್
ಕೋಲಾರ: ಹಾಸನದಲ್ಲಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ನಡುವಿನ ಜಟಾಪಟಿ ನಂತರ ಈಗ ಕೋಲಾರದಲ್ಲಿ (Kolar) ಐಎಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟ ಆರಂಭವಾಗಿದೆ. ಅರಣ್ಯ ಇಲಾಖೆ (Forest Department) ಒತ್ತುವರಿ ತೆರವು ವಿಚಾರದಲ್ಲಿ ಉಂಟಾಗಿರುವ ವೈಮನಸ್ಸು ಸದ್ಯ ಉಸ್ತುವಾರಿ ಸಚಿವರ ಅಂಗಳಕ್ಕೆ ತೆರಳಿದೆ.
ಕೋಲಾರದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಅರಣ್ಯ ಇಲಾಖೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ, ಈ ನಡುವೆ ಕಳೆದ ಕೆಲವು ದಿನಗಳಿಂದ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಕೋಲಾರ ಉಪಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್ ಜಿಲ್ಲಾಡಳಿತದ ವಿರುದ್ಧ ನೇರ ಆರೋಪಗಳನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಯಚೂರು | ಬಡ ರೋಗಿಗಳಿಗೆ ಸೇರಬೇಕಿದ್ದ ಔಷಧಿಗಳು ತಿಪ್ಪೆ ಪಾಲು
ಒತ್ತುವರಿ ತೆರವು ಕಾರ್ಯಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಬ್ಬಣಿ ಕಿರು ಅರಣ್ಯಕ್ಕೆ ಸಂಬಂಧಿಸಿದಂತೆ ಪಹಣಿಯಲ್ಲಿ ಅರಣ್ಯ ಎಂದು ಇದ್ದ ದಾಖಲಾತಿಯನ್ನು ಗೋಮಾಳವಾಗಿ ಬದಲಾಯಿಸಿದ್ದಾರೆ. ಸುಮಾರು 340 ಎಕರೆಯಷ್ಟು ಜಾಗವನ್ನು ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಕಂದಾಯ ಇಲಾಖೆ ಎಂದು ದಾಖಲಾತಿಗಳನ್ನು ತಿದ್ದುಪಡಿ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೇ ನಾವೆಲ್ಲ ಸಾಮೂಹಿಕ ರಜೆ ತೆಗೆದುಕೊಳ್ಳುತ್ತೇವೆಂದು ಹೇಳಿದ್ದಾರೆ. ಇದನ್ನೂ ಓದಿ: ಬಾಂಡ್ ಷರತ್ತು ಬ್ರೇಕ್ – 5 ದಿನ ತಿಹಾರ್ ಜೈಲಿಗೆ ಸೌರವ್ ದಾಸ್, ಅಶುತೋಷ್ ರಾಂಕಾ
ಇನ್ನು ಈ ಬಗ್ಗೆ ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ನಾವು ನೊಂದವರ ಬಡವರ ಪರವಾದ ಕೆಲಸ ಮಾಡುತ್ತಿದ್ದೇವೆ. ಕೋಲಾರ ತಾಲೂಕಿನ ಅಬ್ಬಣಿ ಕಿರುಅರಣ್ಯ ಒತ್ತುವರಿ ತೆರವು ಸಂಬಂಧ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅರಣ್ಯಕ್ಕೆ ಸೇರಿದ 619 ಎಕರೆ ಭೂಮಿ ಇದ್ದು, ಈ ಪೈಕಿ ಕಂದಾಯ ಇಲಾಖೆ 340 ಎಕರೆಯಷ್ಟು ಭೂಮಿಯನ್ನು ಕಂದಾಯ ಇಲಾಖೆಯ ಹೆಸರಿಗೆ ಪಹಣಿ ಮಾಡಲಾಗಿದ್ದು, ಮ್ಯುಟೇಷನ್ ರದ್ದು ಮಾಡಿ ಕೋಲಾರ ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ಆದೇಶವನ್ನು ಮಾಡಿದ್ದಾರೆ. ಕಾನೂನಿನ ಪ್ರಕಾರವಾಗಿ ನಾವು ಕಂದಾಯ ಇಲಾಖೆಯ ಭೂಮಿಯನ್ನು ವಶಕ್ಕೆ ಪಡೆಯುತ್ತಿದ್ದೇವೆ. ಇನ್ನೂ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಸಾಮೂಹಿಕ ರಜೆ ವಿಚಾರ ಯಾವ ಯಾವ ಇಲಾಖೆಗಳಲ್ಲಿ ಏನು ಅಡ್ಡಿ ಆತಂಕ ಇದೆಯೋ ನನಗೆ ಗೊತ್ತಿಲ್ಲ, ಅದು ಅವರಿಗೆ ಬಿಟ್ಟ ವಿಚಾರ ಎಂದಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ದುರಂತ; 15 ವರ್ಷದೊಳಗಿನ 13 ಮಕ್ಕಳು ಸಾವು
ಒಟ್ಟಿನಲ್ಲಿ ಕೋಲಾರದಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಕ್ಕೆ ಉಸ್ತುವಾರಿ ಸಚಿವರೇ ಪರಿಹಾರ ಹುಡುಕಬೇಕಿದೆ. ಉಂಟಾಗಿರುವ ಭಿನ್ನಾಭಿಪ್ರಾಯವನ್ನು ಸರಿಪಡಿಸಿ ಅವರವರ ಇಲಾಖೆಯಲ್ಲಿ ತಮ್ಮ ತಮ್ಮ ಕೆಲಸಕಾರ್ಯವನ್ನು ಸರಿಯಾಗಿ ಮಾಡುವಂತೆ ತಾಕೀತು ಮಾಡಿದಾಗ ಮಾತ್ರವೇ ಈ ಸಮಸ್ಯೆ ಬಗೆಹರಿಸಲು ಸಾಧ್ಯ. ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ತೈಲ ಕಂಪನಿ ಅರಾಮ್ಕೊದ ಮೇಲೆ ಹೌತಿ ಕ್ಷಿಪಣಿ ದಾಳಿ

