ನವದೆಹಲಿ: ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ದಕ್ಷಿಣ ಕೊರಿಯಾದ ಕಿಯಾ ಕಂಪನಿಯ ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ.
ಜನವರಿಯಲ್ಲಿ 14,024 ಕಾರುಗಳು ಮಾರಾಟಗೊಂಡಿದ್ದರೆ ಫೆಬ್ರವರಿಯಲ್ಲಿ 15,644 ಕಾರುಗಳು ಮಾರಾಟಗೊಂಡಿದೆ. ಜನವರಿ ತಿಂಗಳಿಗೆ ಹೋಲಿಸಿದರೆ ಫೆಬ್ರವರಿ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಇಳಿಕೆ ಶೇ.4.4 ರಷ್ಟು ಇಳಿಕೆಯಾಗಿದ್ದರೆ ಈ ಅವಧಿಯಲ್ಲಿ ಕಿಯಾ ಶೇ.1.3 ರಷ್ಟು ಬೆಳವಣಿಗೆ ಸಾಧಿಸಿದೆ.
Advertisement
Advertisement
ಕಳೆದ ತಿಂಗಳು ಕಿಯಾ 14,024 ಸೆಲ್ಟೋಸ್ ಕಾರು ಮಾರಾಟಗೊಂಡಿದ್ದರೆ ಹೊಸದಾಗಿ ಬಿಡುಗಡೆಯಾದ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕಾರ್ನಿವಾಲ್ 1,620 ಮಾರಾಟಗೊಂಡಿದೆ.
Advertisement
ಭಾರತದ ಕಿಯಾದ ಆಡಳಿತ ನಿರ್ದೇಶಕ ಕುಖಿಯಾನ್ ಶಿಮ್ ಪ್ರತಿಕ್ರಿಯಿಸಿ, ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ವಿನ್ಯಾಸವನ್ನು ಭಾರತದ ಜನರು ಮೆಚ್ಚಿಕೊಂಡಿದ್ದಾರೆ. ಉತ್ತಮ ಬೆಲೆಗೆ ಗುಣಮಟ್ಟದ ಕಾರನ್ನು ಜನ ಇಷ್ಟ ಪಟ್ಟಿದ್ದಾರೆ. ಈ ಪ್ರಗತಿಯಿಂದ ನಾವು ಉತ್ಸಾಹಗೊಂಡಿದ್ದು ಎರಡನೇ ಅವಧಿಯಲ್ಲಿ ನಾವು ಕಾಂಪ್ಯಾಕ್ಟ್ ಎಸ್ಯುವಿ (ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್) ಸೋನೆಟ್ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
Advertisement
ಕಿಯಾ ಕಾರ್ನಿವಾಲ್ ಬಿಡುಗಡೆಯಾದ 15 ದಿನಗಳಲ್ಲಿ 3,500 ಬುಕ್ಕಿಂಗ್ ಆಗಿತ್ತು. ಈಗ ಎಷ್ಟು ಕಾರು ಬುಕ್ಕಿಂಗ್ ಆಗಿದೆ ಎನ್ನುವುದನ್ನು ತಿಳಿಸಿಲ್ಲ. ಆದರೆ ಮೊದಲಿಗಿಂತ ದುಪ್ಪಟ್ಟು ಕಾರುಗಳು ಬುಕ್ ಆಗಿದೆ ವರದಿಯಾಗಿದೆ. ಶೋ ರೂಂ ಮಾಲೀಕರು ಹೇಳುವಂತೆ ಮಾದರಿಗೆ ಅನುಗುಣವಾಗಿ ಒಂದು ಕಾರು ಬರಲು ಮೂರು ತಿಂಗಳು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು ಶೋ ರೂಂ ದರ ಎಷ್ಟಿದೆ?
ಕಿಯಾ ಸೆಲ್ಟೋಸ್ ಎಚ್ಟಿಇ(ಪಟ್ರೋಲ್) 9.89 ಲಕ್ಷ ರೂ., ಎಚ್ಟಿಕೆ ಜಿ(ಪೆಟ್ರೋಲ್) 10.29 ಲಕ್ಷ ರೂ. ಎಚ್ಟಿಇ (ಡೀಸೆಲ್) 10.34 ಲಕ್ಷ ರೂ. ದರ ಇದೆ. ಹೈ ಎಂಡ್ ಮಾಡೆಲ್ ಎಚ್ಟಿಎಕ್ಸ್ ಪ್ಲಸ್ ಎಟಿ ಡಿ(ಡೀಸೆಲ್) 16.34 ಲಕ್ಷ ರೂ. ಇದ್ದರೆ ಜಿಟಿಎಕ್ಸ್ ಪ್ಲಸ್ ಡಿಸಿಟಿ(ಪೆಟ್ರೋಲ್) 17.29 ಲಕ್ಷ ರೂ. ದರ ಇದ್ದರೆ ಜಿಟಿಎಕ್ಸ್ ಪ್ಲಸ್ ಎಟಿಡಿ (ಡೀಸೆಲ್) ಕಾರಿನ ಬೆಲೆ 17.34 ಲಕ್ಷ ರೂ. ಇದೆ.
ಕಿಯಾ ಕಾರ್ನಿವಾಲ್ 5 ಡೀಸೆಲ್ ಮಾದರಿಯಲ್ಲಿ ಲಭ್ಯವಿದೆ. ಪ್ರೀಮಿಯಂ 24.85 ಲಕ್ಷ ರೂ. ಪ್ರೀಮಿಯಂ 8 ಎಸ್ಟಿಆರ್ 25.15 ಲಕ್ಷ ರೂ., ಪ್ರೆಸ್ಟೀಜ್ 28.95 ಲಕ್ಷ ರೂ., ಪ್ರೆಸ್ಟೀಜ್ 9 ಎಸ್ಟಿಆರ್ 29.95 ಲಕ್ಷ ರೂ., ಲಿಮೋಸಿನ್ 33.95 ಲಕ್ಷ ರೂ.