BollywoodCinemaDistrictsKarnatakaLatestMain PostSandalwood

ಕೆಜಿಎಫ್ 2 ಕಲೆಕ್ಷನ್ 1129.38 ಕೋಟಿ : ಆರ್.ಆರ್.ಆರ್ ದಾಖಲೆ ಉಡಿಸ್

ಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಕೆಜಿಎಫ್ 2’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಿನದಿಂದ ದಿನಕ್ಕೆ ಒಂದೊಂದೇ ದಾಖಲೆಗಳನ್ನು ಮುರಿಯುತ್ತಾ ಮುಂದೆ ಸಾಗುತ್ತಿದೆ. 25ನೇ ದಿನದತ್ತ ಮುನ್ನುಗ್ಗಿದ್ದರೂ, ಕಲೆಕ್ಷನ್ ಮಾತ್ರ ಯಾವುದೇ ರೀತಿಯಲ್ಲಿ ಕಡಿಮೆಯಾಗಿಲ್ಲ. ಈವರೆಗೂ ಕೆಜಿಎಫ್ 2 ಅಂದಾಜು 1129.38 ಕೋಟಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಈ ಮೂಲಕ ಆರ್.ಆರ್.ಆರ್ ಸಿನಿಮಾದ ವರ್ಲ್ಡ್ ವೈಡ್ ಕಲೆಕ್ಷನ್ ದಾಖಲೆಯನ್ನೂ ಕೆಜಿಎಫ್ 2 ಪುಡಿಪುಡಿ ಮಾಡಿದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

25ನೇ ದಿನದೊಳಗಿನ ಆರ್.ಆರ್.ಆರ್ ಸಿನಿಮಾದ ಒಟ್ಟು ಲೆಕ್ಕಾಚಾರ 1127.65 ಕೋಟಿ ಎಂದು ಹೇಳಲಾಗಿತ್ತು. ಕೆಜಿಎಫ್ 2 ಸಿನಿಮಾ 1129.38 ಕೋಟಿ ಗಳಿಕೆ ಮಾಡುವ ಮೂಲಕ ಆರ್.ಆರ್.ಆರ್ ದಾಖಲೆಯನ್ನು ಮುರಿಯಲಾಗಿದೆ. ಅಲ್ಲಿಗೆ ಭಾರತೀಯ ಸಿನಿಮಾ ರಂಗದಲ್ಲೇ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಕೀರ್ತಿಗೆ ಕೆಜಿಎಫ್ 2 ಪಾತ್ರವಾಗಿದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

2022 ನಲ್ಲಿ ಅತೀ ಹೆಚ್ಚು ಬಾಕ್ಸ್ ಆಫೀಸಿನಲ್ಲಿ ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಗೂ ಕೆಜಿಎಫ್ 2 ಕಾರಣವಾಗಿದ್ದರೆ, ಭಾರತೀಯ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ದುಡ್ಡು ಮಾಡಿದ ಮೂರನೇ ಸಿನಿಮಾ ಎಂಬ ಖ್ಯಾತಿಯೂ ಈ ಸಿನಿಮಾದ್ದು. ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿರುವುದರಿಂದ ಈವರೆಗಿನ ಎಲ್ಲ ದಾಖಲೆಗಳನ್ನು ಕೆಜಿಎಫ್ 2 ಮುರಿದು, ಹೊಸ ದಾಖಲೆಯನ್ನು ಬರೆಯಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

ಸದ್ಯ ಆರ್. ಆರ್. ಆರ್ ಸಿನಿಮಾದ ವರ್ಲ್ಡ್ ವೈಡ್ ಕಲೆಕ್ಷನ್ ದಾಖಲೆಯನ್ನು ಕೆಜಿಎಫ್ 2 ಮುರಿದಿದ್ದು, ದಂಗಲ್ ಮತ್ತು ಆರ್.ಆರ್.ಆರ್ ಸಿನಿಮಾದ ಒಟ್ಟು ಕಲೆಕ್ಷನ್ ದಾಖಲೆಯನ್ನು ಸದ್ಯದಲ್ಲೇ ದಾಟಲಿದೆ ಎನ್ನುತ್ತಿವೆ ಬಾಕ್ಸ್ ಆಫೀಸ್ ಮೂಲಗಳು. ಈ ಮೂಲಕ ಕನ್ನಡದ ಸಿನಿಮಾವೊಂದು ಐತಿಹಾಸಿಕ ದಾಖಲೆ ಮಾಡಲು ಹೊರಟಿರುವುದು ಹೆಮ್ಮೆಯ ಸಂಗತಿ ಆಗಿದೆ.

Leave a Reply

Your email address will not be published.

Back to top button