ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಟ, ಕೇಂದ್ರ ಸಚಿವರಾಗಿದ್ದಅಂಬರೀಶ್ ಅವರು ರಾಜೀನಾಮೆ ನೀಡಿದ್ದರು. ಈಗ ಕಾವೇರಿ ನದಿ ವಿವಾದದ ಹಿನ್ನೆಲೆಯಾಗಿಟ್ಟುಕೊಂಡು, ಅದಕ್ಕೊಂದು ಲವ್ ಸ್ಟೋರಿ ಬೆಸೆದು ಸಿನಿಮಾ ಮಾಡುತ್ತಿದ್ದಾರೆ ಮುಂಗಾರು ಮಳೆ ಖ್ಯಾತಿಯ ಕೃಷ್ಣ. ಈ ಸಿನಿಮಾಗೆ ಅಂಬರೀಶ್ ಪುತ್ರ ಅಭಿಷೇಕ್ ನಾಯಕ ಎನ್ನುವುದು ವಿಶೇಷ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ಶ್ವಾನ ನಿಧನ
Advertisement
ಸದ್ಯ ಅಭಿಷೇಕ್ ಬ್ಯಾಡ್ ಮ್ಯಾನರ್ಸ್ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಜ್ಯೂನಿಯರ್ ರೆಬೆಲ್ ಸ್ಟಾರ್ ಹೊಸ ಬಗೆಯ ಪಾತ್ರ ಮಾಡುತ್ತಿದ್ದಾರಂತೆ. ಇದೊಂದು ಪಕ್ಕಾ ಸಾಹಸಮಯ ಸಿನಿಮಾವಂತೆ. ಹಾಗಾಗಿ ಯಂಗ್ ರೆಬಲ್, ತಯಾರಿ ಮಾಡಿಕೊಂಡೇ ಈ ಸಿನಿಮಾದಲ್ಲಿ ನಟಿಸಿದ್ದಾರಂತೆ. ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿದಿದೆ ಎನ್ನುತ್ತಿದೆ ಚಿತ್ರತಂಡ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ
Advertisement
Advertisement
ಈ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದರಿಂದ ಇನ್ನೂ ಕೆಲವೇ ದಿನಗಳಲ್ಲಿ ಕೃಷ್ಣ ನಿರ್ದೇಶನದ ಹೊಸ ಸಿನಿಮಾದಲ್ಲಿ ಅಭಿಷೇಕ್ ನಟಿಸಲಿದ್ದಾರೆ. ಈ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಕಾವೇರಿ ವಿವಾದದ ಹಿನ್ನೆಲೆಯ ಕಥೆಯು ಸಿನಿಮಾದಲ್ಲಿದ್ದರೂ, ಪ್ರಧಾನ ಕಥೆಯಾಗಿ ಬರುವುದು ಲವ್ ಸ್ಟೋರಿ ಎಂದಿದ್ದಾರೆ ನಿರ್ದೇಶಕರು. ಪೈಲ್ವಾನ್ ಸಿನಿಮಾದ ನಂತರ ಕೃಷ್ಣ ಈ ಕಥೆಯನ್ನು ಎತ್ತಿಕೊಂಡಿದ್ದು, ಅಂದುಕೊಂಡಂತೆ ಆಗಿದ್ದರೆ, ಇವರು ಪುನೀತ್ ರಾಜ್ ಕುಮಾರ್ ಅವರಿಗೆ ಸಿನಿಮಾ ಮಾಡಬೇಕಿತ್ತು. ಒಂದು ಹಂತದ ಮಾತುಕತೆ ಕೂಡ ಮಾಡಿದ್ದರು. ಅಷ್ಟರಲ್ಲಿ ಪುನೀತ್ ಅಗಲಿದರು. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ
Advertisement
ಪುನೀತ್ ಅವರಿಗಾಗಿ ಮಾಡಿದ್ದ ಕಥೆಯಾ? ಅಥವಾ ಹೊಸದಾಗಿ ಬರೆದ ಸ್ಟೋರಿನಾ ಎನ್ನುವ ಕುರಿತು ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ ನಿರ್ದೇಶಕರು. ಆದರೆ, ಇದೊಂದು ವಿಭಿನ್ನವಾದ ಕಥೆ ಎನ್ನುವ ಮಾಹಿತಿ ಅವರ ವಲಯದಿಂದ ಕೇಳಿ ಬಂದಿದೆ. ಈಗಾಗಲೇ ಅಭಿಷೇಕ್ ಸಿನಿಮಾವನ್ನು ಒಪ್ಪಿಕೊಂಡಿದ್ದರಿಂದ ಇತರ ಕಲಾವಿದರ ಆಯ್ಕೆಯ ಪ್ರಕ್ರಿಯೆ ಶುರು ಮಾಡಿದ್ದಾರಂತೆ ಕೃಷ್ಣ.