ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಕಾರ್ತಿಕ್ ಶರ್ಮ, ಇದೀಗ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ‘ಭಾವಾಂತರ’ (Bhavanthara) ಸಿನಿಮಾ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿದ್ದು, ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ಚಿತ್ರದ ಹೊಸ ಪೋಸ್ಟರ್ ಸೋಷಿಯಲ್ (Karthik Sharma) ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.
ಪೋಸ್ಟರ್‌ನಲ್ಲಿ ಯುವತಿಯೊಬ್ಬಳು ಟ್ರಾನ್ಸ್‌ಜೆಂಡರ್ ಪಾತ್ರಕ್ಕೆ ಮುತ್ತಿಕ್ಕುವ ದೃಶ್ಯ ಕಂಡುಬಂದಿದ್ದು, ಚಿತ್ರದ ಕಥೆ ಏನಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಪೋಸ್ಟರ್‌ನಲ್ಲಿ ಹಲವು ಅರ್ಥಗಳಿವೆ. ಅದನ್ನು ಪ್ರೇಕ್ಷಕರೇ ಡಿಕೋಡ್ ಮಾಡಿಕೊಳ್ಳಬಹುದು ಎಂದು ಚಿತ್ರತಂಡ ಹೇಳಿದೆ.
ಕಾರ್ತಿಕ್ ಶರ್ಮ ಅವರು ‘ವೀರ ಕನ್ನಡಿಗ’, ‘ಮ್ಯಾಜಿಕ್ ಅಜ್ಜಿ’ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, 100ಕ್ಕೂ ಹೆಚ್ಚು ಧಾರಾವಾಹಿ ಹಾಗೂ ಟಿವಿ ಶೋಗಳಿಗೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
‘ಭಾವಾಂತರ’ ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಕಾರ್ತಿಕ್ ಶರ್ಮ ಅವರೇ ಬರೆದಿದ್ದಾರೆ. ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆ ಮಾಡಿದ್ದು, ಸಿನಿಮಾದ ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ.
ಈ ಸಿನಿಮಾ ನೈಜ ಘಟನೆಯೊಂದನ್ನು ಆಧರಿಸಿದೆ ಎಂದು ಚಿತ್ರತಂಡ ತಿಳಿಸಿದೆ. ದಕ್ಷಿಣ ಭಾರತದಲ್ಲಿ ಈ ರೀತಿಯ ಕಥಾಹಂದರದ ಸಿನಿಮಾ ಈವರೆಗೆ ಬಂದಿಲ್ಲ ಎಂದು ಕಾರ್ತಿಕ್ ಶರ್ಮ ಹೇಳಿದ್ದಾರೆ.
ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಹೊಂಬಾಳೆ ಮ್ಯೂಸಿಕ್ ಸಂಸ್ಥೆ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂಬ ವಿಶ್ವಾಸವನ್ನು ಕಾರ್ತಿಕ್ ಶರ್ಮ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಥ್ಯಾಂಕ್ಯೂ.. ಇದು ಸರಿಯಾದ ಸಮಯ – 8 ವರ್ಷಗಳ ನಿರೂಪಣೆಗೆ ವಿದಾಯ ಹೇಳಿದ ಅನುಪಮಾ ಗೌಡ
‘ಭಾವಾಂತರ’ ಸಿನಿಮಾದ ಚಿತ್ರೀಕರಣ ಉಡುಪಿ, ಬೆಂಗಳೂರು ಹಾಗೂ ತಮಿಳುನಾಡಿನ ವಿವಿಧ ಸುಂದರ ತಾಣಗಳಲ್ಲಿ ನಡೆದಿದೆ. ಕಾರ್ತಿಕ್ ಶರ್ಮ ಅವರ ಜೊತೆ ತನ್ವಿ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಣವ್ ಶ್ರೀಧರ್, ಶ್ರೀವೈಷ್ಣವ್, ವೇದ ರಾವ್ ಹಾಗೂ ಭಾನು ತಾರಾಗಣದಲ್ಲಿದ್ದಾರೆ.
‘ಕಿಕ್ ಮೀಡಿಯಾ’ ಸಂಸ್ಥೆ ನಿರ್ಮಿಸಿರುವ ಈ ಚಿತ್ರಕ್ಕೆ ಸಾಗರ್ ಅದ್ಕರ್ ಛಾಯಾಗ್ರಹಣ ಮಾಡಿದ್ದಾರೆ. ಆಶೀಷ್ ಹುಲಕುಂದ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಿನಿಮಾ ಸದ್ಯದಲ್ಲೇ ರಾಜ್ಯಾದ್ಯಂತ ತೆರೆಕಾಣಲಿದೆ.ಇದನ್ನೂ ಓದಿ: ಸದಾ ಗಡ್ಡ ಬಿಡೋದೇಕೆ? ರಹಸ್ಯ ಬಿಚ್ಚಿಟ್ಟ ಯಶ್

